/newsfirstlive-kannada/media/post_attachments/wp-content/uploads/2024/08/TB_DAM.jpg)
ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಕ್ರಸ್ಟ್ ಗೇಟ್​ನ ಚೈನ್ ಲಿಂಕ್ ಕಟ್ ಆಗಿದ್ದರಿಂದ ಕ್ಷಣ ಕ್ಷಣಕ್ಕೂ ಡ್ಯಾಂ ನೀರಿನ ಮಟ್ಟ ಕುಸಿಯುತ್ತಿದೆ.
ಜಲಾಶಯದಿಂದ ಹೊರ ಹರಿವಿನ ಪ್ರಮಾಣ ಹೆಚ್ಚಾಗುತ್ತಿದ್ದು ಕೇವಲ 30 ಗಂಟೆಗಳಲ್ಲಿ 12 ಟಿಎಂಸಿಗೂ ಅಧಿಕ ನೀರು ಪೋಲಾಗಿದೆ. ಇದರಿಂದ 105 ಟಿಎಂಸಿ ಸಾಮರ್ಥ್ಯದ ತುಂಗಭದ್ರಾ ಡ್ಯಾಂನ ನೀರು ಎರಡೂವರೆ ಅಡಿಯಷ್ಟು ಕುಸಿದಿದೆ. ಹಂತ ಹಂತವಾಗಿ ನೀರಿನ ಮಟ್ಟ ಇಳಿಕೆ ಆಗುತ್ತಿದೆ. ಈ ವರ್ಷದ ಧಾರಾಕಾರ ಮಳೆಯಿಂದ ತುಂಬಿದ್ದ ಜಲಾಶಯದ ನೀರು ಪೋಲಾಗುತ್ತಿರುವುದನ್ನ ನೋಡಿ ಗವಿಶ್ರೀ ಅವರು ಬೇಸರಗೊಂಡಿದ್ದಾರೆ.
ಚೈನ್​ ಲಿಂಕ್ ಕಟ್ ಆಗಿರುವ 19ನೇ ಗೇಟ್‌ನಿಂದಲೇ ಅಪಾರ ಪ್ರಮಾಣ ನೀರು ನದಿಗೆ ಹರಿಯುತ್ತಿದೆ. ಒಂದೇ ಗೇಟ್‌ನಿಂದ 38 ಸಾವಿರ ಕ್ಯೂಸೆಕ್ ನೀರು ನದಿಗೆ ಪೋಲಾಗುತ್ತಿದೆ. ಕರ್ನಾಟಕ, ಆಂಧ್ರ, ತೆಲಂಗಾಣ ಭಾಗದ 8 ಜಿಲ್ಲೆಗಳಿಗೆ ಇದೇ ಡ್ಯಾಂ ಆಸರೆಯಾಗಿದೆ. ಇದರಿಂದ ರೈತರ ಆತಂಕಕ್ಕೆ ಒಳಗಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ