/newsfirstlive-kannada/media/post_attachments/wp-content/uploads/2024/07/Tungabadra-dam.jpg)
ವಿಜಯನಗರ: ಮಲೆನಾಡಿನಲ್ಲಿ ಅಧಿಕ ಪ್ರಮಾಣದ ಮಳೆ ಆರುತ್ತಿರುವ ಹಿನ್ನೆಲೆ, ತುಂಗಭದ್ರಾ ಜಲಾಶಯಕ್ಕೆ ಜೀವಕಳೆ ಬಂದಿದೆ. ಪರಿಣಾಮ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣದಲ್ಲಿ ಮತ್ತಷ್ಟು ಹೆಚ್ಚಳವಾಗಿದೆ.
ಕಳೆದ ನಾಲ್ಕೈದು ದಿನದಲ್ಲಿ ನಾಲ್ಕಕ್ಕೂ ಅಧಿಕ ಟಿಎಂಸಿ ನೀರು ಜಲಾಶಯಕ್ಕೆ ಹರಿದು ಬಂದಿದೆ. ಬತ್ತಿ ಬರಡಾಗಿದ್ದ ತುಂಗಭದ್ರಾ ಜಲಾಶಯಕ್ಕೆ ಮತ್ತೆ ಮರುಜೀವ ಬಂದಂತಾಗಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ಸರ್ಕಾರಿ ಬಸ್ನಲ್ಲಿ ಕಾಣಿಸಿಕೊಂಡ ಬೆಂಕಿ; ಟಯರ್ ಸ್ಫೋಟ, ಮುಂದೇನಾಯ್ತು?
ನಿನ್ನೆ ದಿನ ಜಲಾಶಯದಲ್ಲಿ 10.082 ಟಿಎಂಸಿ ನೀರಿದ್ದ ಮಟ್ಟ ಇಂದು 11.714 ಟಿಎಂಸಿಗೆ ಏರಿಕೆ ಕಂಡಿದೆ. 24 ಗಂಟೆಯಲ್ಲಿ ಟಿಬಿ ಡ್ಯಾಂಗೆ 19,200ಕ್ಕೂ ಅಧಿಕ ಕ್ಯೂಸೆಕ್ ನೀರು ಹರಿದು ಬಂದಿದೆ. ಕಳೆದ ಒಂದು ವಾರದಿಂದ ಸರಾಸರಿ ಒಳಹರಿವಿನ ಪ್ರಮಾಣದಲ್ಲೂ ಕೂಡಾ ಹೆಚ್ಚಳವಾಗಿದೆ.
ಇದನ್ನೂ ಓದಿ: KRS Dam: ಎರಡು ವಾರದಿಂದ ಒಳ ಹರಿವು ಹೆಚ್ಚಳ.. 100 ಅಡಿ ಭರ್ತಿ! ಸದ್ಯ ಎಷ್ಟಿದೆ ನೀರಿನ ಮಟ್ಟ?
ಹೊಸಪೇಟೆ ತಾಲೂಕಿನ ಹೊರವಲಯದಲ್ಲಿರೋ ತುಂಗಭದ್ರಾ ಜಲಾಶಯ 105 ಟಿಎಂಸಿ ನೀರು ಸಂಗ್ರಹಣಾ ಸಾಮರ್ಥ್ಯ ಹೊಂದಿದೆ. ಸದ್ಯ ಜಲಾಶಯದಲ್ಲಿ 11.714 ಟಿಎಂಸಿ ನೀರು ಸಂಗ್ರಹವಾಗಿದೆ.
ತುಂಗಭದ್ರಾ ಜಲಾಶಯ ನೀರಿನ ಮಟ್ಟ
- ಒಳ ಹರಿವು : 19,201 ಕ್ಯೂಸೆಕ್ಸ್
- ಹೊರ ಹರಿವು : 295 ಕ್ಯೂಸೆಕ್ಸ್
- ಗರಿಷ್ಟ ಮಟ್ಟ : 1633 ಅಡಿ
- ಇಂದಿನ ಮಟ್ಟ : 1590.80 ಅಡಿ
- ಒಟ್ಟು ಸಂಗ್ರಹ ಸಾಮರ್ಥ್ಯ : 105 ಟಿಎಂಸಿ
- ಸದ್ಯ ಡ್ಯಾಂನಲ್ಲಿರು ನೀರು : 11.714 ಟಿಎಂಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ