ತುಂಗಾಭದ್ರ ಡ್ಯಾಂ ಭರ್ತಿಗೆ ಕೆಲವೇ ಅಡಿಗಳು ಬಾಕಿ.. 3 ವಾರದಲ್ಲಿ ಹರಿದು ಬಂದಿರೋ ನೀರು ಎಷ್ಟು?

author-image
Bheemappa
Updated On
ತುಂಗಾಭದ್ರ ಡ್ಯಾಂ ಭರ್ತಿಗೆ ಕೆಲವೇ ಅಡಿಗಳು ಬಾಕಿ.. 3 ವಾರದಲ್ಲಿ ಹರಿದು ಬಂದಿರೋ ನೀರು ಎಷ್ಟು?
Advertisment
  • ಜಲಾಶಯವನ್ನು ಕಣ್ಣತುಂಬಿಸಿಕೊಳ್ಳಲು ಬರುತ್ತಿರುವ ಪ್ರವಾಸಿಗರು
  • ಎಷ್ಟು ಟಿಎಂಸಿ ನೀರು ಈಗಾಗಲೇ ಜಲಾಶಯದಲ್ಲಿ ಸಂಗ್ರಹವಾಗಿದೆ?
  • ಮಲೆನಾಡಲ್ಲಿ ಧಾರಾಕಾರ ಮಳೆಯಿಂದಾಗಿ ತುಂಗಾ ಭದ್ರಗೆ ಜೀವಕಳೆ

ಕೊಪ್ಪಳ: ಮಲೆನಾಡಿನಲ್ಲಿ ವರುಣಾರ್ರಭಟ ಜೋರಾದ ಹಿನ್ನೆಲೆಯಲ್ಲಿ ಬರದನಾಡಿನ ಜೀವನಾಡಿಯಾಗಿರುವ ತುಂಗಾಭದ್ರ ಜಲಾಶಯ ಮೈದುಂಬಿದ್ದು ಡ್ಯಾಂ ಭರ್ತಿಗೆ ಇನ್ನೇನು ಕೆಲವು ಅಡಿಗಳು ಮಾತ್ರ ಬಾಕಿ ಉಳಿದಿದೆ.

ಇದನ್ನೂ ಓದಿ:ಕನ್ವರ್ ಯಾತ್ರೆಗೆ ಯೋಗಿ ಸರ್ಕಾರದ ರೂಲ್ಸ್​ ಏನು..? ಬಿಟೌನ್ ಬ್ಯೂಟಿ ಕಂಗನಾ- ಸೋನ್ ಸೂದ್ ಮಧ್ಯ ವಾರ್

ಬರಿದಾಗಿದ್ದ ತುಂಗಾಭದ್ರ ಜಲಾಶಯ ಕೇವಲ ಮೂರೇ ವಾರಕ್ಕೆ ಅಪಾರ ಪ್ರಮಾಣದಲ್ಲಿ ಮಳೆ ನೀರು ಹರಿದುಬಂದಿದೆ. ಮಲೆನಾಡಿನ ಹಲವೆಡೆ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ತುಂಗಾಭದ್ರ ಜಲಾಶಯಗೆ ಜೀವ ಕಳೆ ಬಂದಿದೆ. ಇದರಿಂದ ರೈತರ ಮೊಗದಲ್ಲೂ ಮಂದಹಾಸ ಮೂಡಿದ್ದು ತುಂಬಿದ ಜಲಾಶಯವನ್ನು ನೋಡಲು ಸಾಖಷ್ಟು ಪ್ರವಾಸಿಗರು ಬರುತ್ತಿದ್ದಾರೆ.

ಇದನ್ನೂ ಓದಿ: KRS ಒಳಹರಿವು ಭಾರೀ ಹೆಚ್ಚಳ.. ಅಪಾಯದ ಮಟ್ಟ ಮೀರಿದ ಕಾವೇರಿಯಲ್ಲಿ ಕೊಚ್ಚಿ ಹೋದ ಯುವಕ

publive-image

ತುಂಗಾಭದ್ರ ಜಲಾಶಯದ ಭರ್ತಿಗೆ ಇನ್ನೇನು ಕೇವಲ 8 ಅಡಿಗಳು ಮಾತ್ರ ಬಾಕಿ ಉಳಿದಿದೆ. 1,633 ಅಡಿ ಸಾಮರ್ಥ್ಯದ ಈ ಜಲಾಶಯ ಈಗಾಗಲೇ 1,625 ಅಡಿಯಷ್ಟು ತುಂಬಿದೆ. ಒಟ್ಟು 105 ಟಿಎಂಸಿ ಸಾಮರ್ಥ್ಯ ಇರುವ ಇದರಲ್ಲಿ 75 ಟಿಎಂಸಿ ನೀರು ಸಂಗ್ರಹವಾಗಿರುವುದು ಖುಷಿ ತಂದಿದೆ.

ಇದನ್ನೂ ಓದಿ: ₹1 ಪಡೆಯದೇ ವಿನೋದ್ ದೋಂಡಾಲೆ ಜೊತೆ ಸಿನಿಮಾ ಮಾಡ್ತಿದ್ದೆ.. ಕಣ್ಣೀರು ಹಾಕಿ ಸತೀಶ್​ ನೀನಾಸಂ ಹೇಳಿದ್ದೇನು?

ತುಂಗಾಭದ್ರ ಜಲಾಶಯದಲ್ಲಿ ಒಳಹರಿವು ಹೆಚ್ಚಳ ಭಾರೀ ಏರಿಕೆಯಾಗಿದೆ. ಮಾಹಿತಿ ಪ್ರಕಾರ 1,30,000 ಕ್ಯೂಸೆಕ್​ ಜಲಾಶಯಕ್ಕೆ ನೀರು ಹರಿದು ಬಂದಿದೆ. ತುಂಗಾಭದ್ರ ಜಲಾಶಯವು ಕರ್ನಾಟಕದ ಕೊಪ್ಪಳ, ರಾಯಚೂರು, ಬಳ್ಳಾರಿ, ಹೊಸಪೇಟೆ ಜಿಲ್ಲೆಗಳು ಹಾಗೂ ಆಂಧ್ರ, ತೆಲಂಗಾಣ ರೈತರ ಜೀವನಾಡಿಯಾಗಿದೆ. ಈ ಡ್ಯಾಂ ತುಂಬುತ್ತಿದ್ದಂತೆ ಎಡದಂಡೆ ಕಾಲುವೆ ರೈತರಲ್ಲಿ ಮಂದಹಾಸ ಮೂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment