ತುಂಗಭದ್ರಾ ನದಿ ತೀರದಲ್ಲಿ ಭಾರೀ ಅಪಾಯ.. ಕ್ರೆಸ್ಟ್​ ಗೇಟ್​​ ಒಡೆದಂತೆ ಮುಳುಗಡೆಯಾಯ್ತು ಹಂಪಿ ಸ್ಮಾರಕ!

author-image
AS Harshith
Updated On
ಅಪಾಯದಲ್ಲಿ ತುಂಗಭದ್ರಾ ಡ್ಯಾಂ.. ಇಂದು ಬಾಗಿನ ಅರ್ಪಿಸಬೇಕಿದ್ದ ಬದಲು ಮುರಿದ ಗೇಟ್​ ವೀಕ್ಷಣೆಗೆ ಬರಲಿರೋ ಸಿಎಂ
Advertisment
  • ತುಂಗಭದ್ರಾ ನದಿ ತೀರದಲ್ಲಿ ಏನಾಗ್ತಿದೆ? ಸದ್ಯದ ಪರಿಸ್ಥಿತಿ ಹೇಗಿದೆ?
  • ಜಲಾಶಯದ 19ನೇ ಚೈನ್​ಲಿಂಕ್​ ಗೇಟ್​ ಕತ್ತರಿಸಿ ಶುರುವಾಗಿದೆ ಅಪಾಯ
  • ಹಂಪಿಯಲ್ಲಿ ಹೈ ಅಲರ್ಟ್.. ನದಿ ತೀರಕ್ಕೆ ಹೋಗದಂತೆ ಜನರಿಗೆ ಎಚ್ಚರಿಕೆ

ವಿಜಯನಗರ: ತುಂಗಭದ್ರಾ ಜಲಾಶಯದ 19ನೇ ಚೈನ್​ಲಿಂಕ್​ ಗೇಟ್​ ಮುರಿದಿದೆ. ಪರಿಣಾಮ ಒಂದು ಲಕ್ಷಕ್ಕೂ ಹೆಚ್ಚು ಕ್ಯೂಸೆಕ್ ನೀರು ನದಿಗೆ ಹರಿಯಬಿಡಲಾಗುತ್ತಿದೆ. ಇದೀಗ ನದಿಗೆ ನೀರು ಹರಿಬಿಟ್ಟ ಕಾರಣ ಹಂಪಿಯ ಸ್ಮಾರಕಗಳು ಮತ್ತೊಮ್ಮೆ ಮುಳುಗಿದೆ.

ಸಾಲು ಮಂಟಪ, ಜನಿವಾರ ಮಂಟಪ, ಧಾರ್ಮಿಕ ವಿಧಿ ವಿಧಾನಗಳ ಮಂಟಪ, ಪುರಂದರ ದಾಸರ ಮಂಟಪ ಮುಳುಗಡೆಯಾಗಿವೆ. ಇದರಿಂದ ಸ್ತಳೀಯ ನಿವಾಸಿಗಳಿಗೆ ಆತಂಕ ಹೆಚ್ಚಾಗುತ್ತಿದೆ.

ಇದನ್ನೂ ಓದಿ: Tungabhadra Dam: ಕಿತ್ತುಹೋದ 19ನೇ ಕ್ರಸ್ಟ್​ ಗೇಟ್.. ಬರಿದಾಗಲಿದೆ ತುಂಗೆಯ ಒಡಲು! ಸಂಪೂರ್ಣ ಖಾಲಿ ಮಾಡ್ತಾರಾ ಡ್ಯಾಂ ನೀರು?

publive-image

ಮಳೆಯಿಂದಾಗಿ ಕಳೆದ ತಿಂಗಳಿನಲ್ಲಿಯೂ ಸ್ಮಾರಕಗಳು ಮುಳುಗಿದ್ದವು. ಇದೀಗ ಕ್ರಸ್ಟ್​ ಗೇಟ್​ ತುಂಡರಿಸಿದ ಪರಿಣಾಮ ಹಂಪಿಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ನದಿ ತೀರಕ್ಕೆ ಹೋಗದಂತೆ ಜನರಿಗೆ ಎಚ್ಚರಿಕೆ ರವಾನಿಸಲಾಗಿದೆ.

ಇದನ್ನೂ ಓದಿ: BREAKING: ಭರ್ತಿಯಾದ ತುಂಗಭದ್ರಾ ಡ್ಯಾಂ.. 19ನೇ ಚೈನ್​ಲಿಂಕ್​ ಗೇಟ್​ ಕಟ್​.. ನದಿ ಪಾತ್ರದ ಜನರಲ್ಲಿ ಆತಂಕ

ವಿಜಯನಗರ ಜಿಲ್ಲಾಡಳಿತ ತುಂಗಭದ್ರಾ ಡ್ಯಾಂ ಬಳಿಕ ಹೆಚ್ಚುವರಿ ಪೊಲೀಸರು ಮತ್ತು ಹೋಮ್​ಗಾರ್ಡ್ ನಿಯೋಜನೆ ಮಾಡಿದೆ.

publive-image

19ನೇ ಚೈನ್​ಲಿಂಕ್​ ಗೇಟ್​ ಕಟ್​ ಆದ ಕಾರಣ ಒಂದೇ ಗೇಟ್​ನಿಂದ 38 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ ಹರಿಯುತ್ತಿದೆ. ದಿನಕ್ಕೆ 2 ಲಕ್ಷ ಕ್ಯೂಸೆಕ್ ನೀರು ತುಂಗಭದ್ರಾ ನದಿಗೆ ಹರಿಸಬೇಕಾಗಿದೆ.

ಇದನ್ನೂ ಓದಿ:ಅಪಾಯದಲ್ಲಿ ತುಂಗಭದ್ರಾ ಡ್ಯಾಂ​.. ಜಲಾಶಯದ ಬಳಿ ಓಡೋಡಿ ಬಂದ ಶಾಸಕ ಗವಿಯಪ್ಪ, ರಾಘವೇಂದ್ರ ಹಿಟ್ನಾಳ್

69 ವರ್ಷದ ಡ್ಯಾಂ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಘಟನೆಯಾಗಿದೆ. 19ನೇ ಕ್ರಸ್ಟ್​ ಗೇಟ್ ಒಂದು​ ಕಡೆ ಡಿ-ಲಿಂಕ್​ ಆಗಿ‌ ಕಟ್ ಆಗಿ ಹೋಗಿದೆ. ಉಳಿದ ಗೇಟ್​ಗಳನ್ನು ಓಪನ್ ಮಾಡಿ ನದಿಗೆ ನೀರು ಹರಿಸಲಾಗ್ತಿದೆ. ಜಲಾಶಯದಿಂದ 70 ಸಾವಿರ ಕ್ಯೂಸೆಕ್ ನೀರು ನದಿಗೆ ಬಿಡಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment