/newsfirstlive-kannada/media/post_attachments/wp-content/uploads/2025/05/Turkey-boycott-India.jpg)
ನವದೆಹಲಿ: ಪಾಕಿಸ್ತಾನದ ಬೆನ್ನಿಗೆ ನಿಂತ ಟರ್ಕಿಗೆ ಭಾರತೀಯರು ದೇಶಾದ್ಯಾಂತ ಸರಿಯಾದ ಬುದ್ಧಿ ಕಲಿಸುತ್ತಿದ್ದಾರೆ. ಟರ್ಕಿ ದೇಶದ ವಿರುದ್ಧ ಭಾರತದಿಂದ ಬಾಯ್ಕಾಟ್ ಅಭಿಯಾನ ಜೋರಾಗಿದ್ದು, ಪಾಕ್ ಪ್ರೇಮಿ ದೇಶಕ್ಕೆ ಅದರ ಬಿಸಿ ತಟ್ಟಿದೆ.
ಟರ್ಕಿಯಿಂದ ಏನೆಲ್ಲಾ ಬ್ಯಾನ್?
ಸೇಬು, ಚೆರ್ರಿ, ಆಲಿವ್ ಆಯಿಲ್, ಮಾರ್ಬಲ್ಸ್, ಎಲೆಕ್ಟ್ರಾನಿಕ್ ವಸ್ತುಗಳು, ಫ್ಯಾಷನ್ ಉತ್ಪನ್ನಗಳು ಮತ್ತು ಪ್ರವಾಸೋದ್ಯಮ.
ಭಾರತದ ಮೇಲೆ ಪಾಕಿಸ್ತಾನ ಡ್ರೋನ್ ದಾಳಿ ಮಾಡಿದಾಗ ಟರ್ಕಿ ದೇಶ ಪಾಕ್ಗೆ ಡ್ರೋನ್ ಹಾಗೂ ಡ್ರೋನ್ ಆಪರೇಟರ್‌ಗಳನ್ನು ಕಳುಹಿಸಿತ್ತು. ಆದರೆ ಭಾರತದ ಏರ್‌ಸ್ಟ್ರೈಕ್‌ನಲ್ಲಿ ಇಬ್ಬರು ಟರ್ಕಿ ಡ್ರೋನ್ ಆಪರೇಟರ್‌ಗಳು ಸಾವನ್ನಪ್ಪಿದ್ದರು.
ಪಾಪಿ ಪಾಕ್ ಬೆನ್ನಿಗೆ ನಿಂತ ಟರ್ಕಿ ವಿರುದ್ಧ ನಿನ್ನೆಯೇ ಪುಣೆಯ ಹೋಲ್‌ಸೆಲ್, ರೀಟೇಲ್ ವ್ಯಾಪಾರಸ್ಥರು ಆ್ಯಪಲ್ ಆಮದು ಮಾಡಿಕೊಳ್ಳುವುದನ್ನ ಬಹಿಷ್ಕರಿಸಿದ್ದರು. ಇದೀಗ ಉದಯಪುರದ ಮಾರ್ಬಲ್ ಅಸೋಸಿಯೇಷನ್ ಕೂಡ ಟರ್ಕಿ ಮಾರ್ಬಲ್‌ಗಳ ಆಮದು ಬ್ಯಾನ್ ಮಾಡಲು ನಿರ್ಧಾರ ಮಾಡಿದೆ.
ಭಾರತದಲ್ಲಿ ಮೂರು ತಿಂಗಳಿಗೆ ಸುಮಾರು 1200 ರಿಂದ 1500 ಕೋಟಿ ರೂಪಾಯಿ ಟರ್ಕಿ ಸೇಬು ಖರೀದಿ ಮಾಡಲಾಗುತ್ತಿತ್ತು. ಸದ್ಯ ಟರ್ಕಿ ಸೇಬು ಬಾಯ್ಕಾಟ್ಗೆ ಮಹಾರಾಷ್ಟ್ರ, ಪುಣೆ ವ್ಯಾಪಾರಿಗಳ ನಿರ್ಧಾರ ಮಾಡಿದ್ದಾರೆ.
ಟರ್ಕಿಯ ಆ್ಯಪಲ್, ಟರ್ಕಿಯ ಮಾರ್ಬಲ್‌ಗಳನ್ನು ಬ್ಯಾನ್ ಮಾಡಿರುವ ಭಾರತದ ವ್ಯಾಪಾರಿಗಳು ಟರ್ಕಿಯ ಹಲವು ಉತ್ಪನ್ನ ಮತ್ತು ಪ್ರವಾಸವನ್ನು ಬಹಿಷ್ಕಾರ ಮಾಡುತ್ತಿದ್ದಾರೆ. ಪಾಕಿಸ್ತಾನವನ್ನು ಬೆಂಬಲಿಸಿದ್ದಕ್ಕೆ ಆರ್ಥಿಕ ಹೊಡೆತದ ಭೀತಿ ಎದುರಿಸುವಂತಾಗಿದೆ.
ಇದನ್ನೂ ಓದಿ: ಮದುವೆಯಾದ ಕೆಲವೇ ಕೆಲವು ಕ್ಷಣಗಳಲ್ಲಿ ಜೀವ ಬಿಟ್ಟ ವರ.. ಕಣ್ಣೀರಲ್ಲೇ ಕುಳಿತ ವಧು..!
ಟರ್ಕಿಗೆ 2024ರಲ್ಲಿ 3.3 ಲಕ್ಷ ಭಾರತೀಯ ಪ್ರವಾಸಿಗರು ಭೇಟಿ ಕೊಟ್ಟಿದ್ದರು. ಅಜರಬೈಜಾನ್‌ಗೆ 2024ರಲ್ಲಿ 2.43 ಲಕ್ಷ ಭಾರತೀಯ ಪ್ರವಾಸಿಗರ ಭೇಟಿ ನೀಡಿದ್ದಾರೆ. ಅಜರಬೈಜಾನ್ ದೇಶದ ಪ್ರವಾಸಿಗರ ಪೈಕಿ ಶೇ.8.9 ರಷ್ಟು ಭಾರತೀಯರಿದ್ದಾರೆ.
ಸಾವಿರಾರು ಭಾರತೀಯರು ಈಗಾಗಲೇ ತಮ್ಮ ಟರ್ಕಿ ಪ್ರವಾಸವನ್ನು ರದ್ದು ಮಾಡುತ್ತಿದ್ದಾರೆ. ಟರ್ಕಿ, ಅಜರ್ ಬೈಜಾನ್ ದೇಶಕ್ಕೆ ಹೋಗುವ ಭಾರತೀಯರ ಸಂಖ್ಯೆಯಲ್ಲಿ ಕುಸಿತವಾಗಿದೆ. ಈಸಿ ಮೈ ಟ್ರಿಪ್ ಸಹ ಸ್ಥಾಪಕ ಪ್ರಶಾಂತ್ ಪಿಟ್ಟಿ ಅವರು ಪಾಕ್ ಬೆಂಬಲಿಸಿದ ಟರ್ಕಿ, ಅಜರ್ ಬೈಜಾನ್ ವಿರುದ್ಧ ಬಾಯ್ಕಾಟ್ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಪ್ರವಾಸಿಗರ ಈ ಬಾಯ್ಕಾಟ್‌ನಿಂದ ಟರ್ಕಿ, ಅಜರಬೈಜಾನ್‌ಗೆ ಸುಮಾರು 3 ಸಾವಿರ ಕೋಟಿಗೂ ಹೆಚ್ಚು ನಷ್ಟವಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ