/newsfirstlive-kannada/media/post_attachments/wp-content/uploads/2025/05/Turkish-Firm.jpg)
ಕಷ್ಟದ ಕಾಲದಲ್ಲಿ ನೆರವಾಗಿದ್ದ ಭಾರತಕ್ಕೆ ದ್ರೋಹ ಬಗೆದ ಟರ್ಕಿ (Turkey) ವಿರುದ್ಧ ದೇಶದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೀಗ ಭಾರತ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಟರ್ಕಿಗೆ ಬಿಗ್ ಶಾಕ್ ನೀಡಿದೆ.
ಭಾರತದ ಪ್ರಮುಖ 9 ವಿಮಾನ ನಿಲ್ದಾಣಗಳಲ್ಲಿ ಕಾರ್ಗೋ ನಿರ್ವಹಣೆ ಮಾಡಲು ಟರ್ಕಿ ಮೂಲದ ಕಂಪನಿ ಜವಾಬ್ದಾರಿ ವಹಿಸಲಾಗಿತ್ತು. ಇದೀಗ ಭಾರತ ಸರ್ಕಾರ ಟರ್ಕಿ ಮೂಲದ ಕಂಪನಿಗೆ ಕೊಕ್ ನೀಡಿದೆ. ಸೆಲೆಬಿ ಏವಿಯೇಷನ್ ಕಂಪನಿಗೆ (Celebi Aviation) ಹೈಸೆಕ್ಯೂರಿಟಿ ಕೆಲಸ ನಿರ್ವಹಣೆಯ (security clearance) ಜವಾಬ್ದಾರಿ ನೀಡಲಾಗಿತ್ತು. ಆದರೆ ಟರ್ಕಿ ಪಾಕಿಸ್ತಾನಕ್ಕೆ ಬೆಂಬಲ ಘೋಷಿಸಿದ ಹಿನ್ನೆಲೆಯಲ್ಲಿ ಭಾರತದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು.
ಇದನ್ನೂ ಓದಿ: ರಕ್ಷಿತ್ ಶೆಟ್ಟಿಗೆ ಪಂಜುರ್ಲಿ ಆಶೀರ್ವಾದ.. ಕುಟುಂಬಸ್ಥರ ವಿಶೇಷ ಹರಕೆ ಉತ್ಸವದಲ್ಲಿ ಸಿಂಪಲ್ ಸ್ಟಾರ್..!
ಪಾಕ್ ಜೊತೆ ಸೇರಿರುವ ಟರ್ಕಿಯ ಕಂಪನಿಗೆ ಸೂಕ್ಷ್ಮ, ಭದ್ರತೆಯ ಮಹತ್ವದ ಕಾರ್ಗೋ ಟರ್ಮಿನಲ್ ಜವಾಬ್ದಾರಿ ನೀಡಿರೋದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿತ್ತು. ಇದೀಗ ಭಾರತೀಯ ವಿಮಾನಯಾನ ಸಚಿವಾಲಯವು ಈ ಕ್ಷಣದಿಂದಲೇ ವಿಮಾನ ನಿಲ್ದಾಣಗಳ ಬಿಟ್ಟು ಹೋಗುವಂತೆ ಆದೇಶ ನೀಡಿದೆ.
ಆ ಮೂಲಕ ಟರ್ಕಿ ಕಂಪನಿಯೊಂದಕ್ಕೆ ದೊಡ್ಡ ಆಘಾತ ಆಗಿದೆ. ಇದೇ ಮೊದಲ ಬಾರಿಗೆ ಭಾರತ ಟರ್ಕಿ ಮೂಲದ ಕಂಪನಿ ವಿರುದ್ಧ ಇಂಥ ನಿರ್ಧಾರ ತೆಗೆದುಕೊಂಡಿದೆ. ದೆಹಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಭಾರತದ ಒಟ್ಟು 9 ಪ್ರಮುಖ ವಿಮಾನ ನಿಲ್ದಾಣಗಳ ಕಾರ್ಗೊ ಟರ್ಮಿನಲ್ ಮ್ಯಾನೆಜ್ಮೆಂಟ್ ನಿರ್ವಣೆ ಮಾಡುತ್ತಿತ್ತು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ದಾರುಣ ಘಟನೆ.. ಸ್ಥಳದಲ್ಲೇ ಜೀವ ಬಿಟ್ಟ ಅಮ್ಮ-ಮಗ, ಆಸ್ಪತ್ರೆಯಲ್ಲಿ ಅಪ್ಪ ನಿಧನ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ