/newsfirstlive-kannada/media/post_attachments/wp-content/uploads/2025/07/Seriya-tv-anchor.jpg)
ದಕ್ಷಿಣ ನಗರವಾದ ಸ್ವೀಡಾದಲ್ಲಿ ಸರ್ಕಾರಿ ಭದ್ರತಾ ಪಡೆಗಳು ಮತ್ತು ಸ್ಥಳೀಯ ಹೋರಾಟಗಾರರ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಾಗ ಇಸ್ರೇಲ್ ಸಿರಿಯಾವನ್ನ ಗುರಿಯಾಗಿಸಿಕೊಂಡು ಸತತ ಮೂರನೇ ದಿನ ದಾಳಿ ನಡೆಸಿದೆ. ಮಿಲಿಟರಿ ಪ್ರಧಾನ ಕಚೇರಿ ಮೇಲೆ ದಾಳಿ.. ಟಿವಿ ಲೈವ್ ವೇಳೆ ಬಾಂಬ್​ ಬ್ಲಾಸ್ಟ್​ ದೃಶ್ಯಗಳು ಜಗತನ್ನೇ ಬೆಚ್ಚಿ ಬೀಳಿಸಿದೆ.
ಗಾಜಾ ಇದ್ದ ಗುರುತೇ ಸಿಗದಂತಾಗಿದೆ. ಇನ್ನೂ ಲೆಬನಾನ್​ ಅನಾಥ ದೇಶವಾಗಿದೆ. ಸಿರಿಯಾ ಸತ್ತು.. ಸತ್ತು ಬದುಕುತ್ತಿದೆ. ಈ ಮೂವರು ಕಡೆ ಈ ಪರಿಸ್ಥಿತಿಗೆ ಕಾರಣ ಇಸ್ರೇಲ್​. ಇಸ್ರೇಲ್​ ಸೇನೆ ನಡೆಸ್ತಿರೋ ದಾಳಿ. ಇಸ್ರೇಲ್ ಗಾಜಾ.. ಲೆಬನಾನ್.. ಮೇಲೆ ನಡೆಸ್ತಿರೋ ದಾಳಿಯಂತೆಯೇ ಡಮಾಸ್ಕಸ್ ಮೇಲೆ ಕೂಡ ದಾಳಿ ಮಾಡಲು ಶುರು ಮಾಡಿದೆ. ಇಸ್ರೇಲ್​ ಪ್ರಧಾನಿ ಬೆಂಜಮಿನ್​ ನೆತನ್ಯಾಹು ಸಿರಿಯಾ ಗುರುತೇ ಸಿಗಬಾರದು ಅಂತ ಪಣ ತೊಟ್ಟಂತೆ ಕಾಣ್ತಿದೆ.
ಇದನ್ನೂ ಓದಿ: ಸಿಎಂ, ಡಿಸಿಎಂ ಜೊತೆ ಸಮಾಲೋಚನೆ.. ಸಿದ್ದು, ಡಿಕೆಶಿಗೆ ಸುರ್ಜೇವಾಲಾ ಹೇಳಿದ ಕಿವಿ ಮಾತುಗಳು ಏನೇನು..?
11 ಸಾವಿರ ವರ್ಷಗಳ ಇತಿಹಾಸವಿರೋ ಸಿರಿಯಾ ನೆಲದಲ್ಲಿ ಭೂದಿ.. ಹೊಗೆ.. ಭಯ ಆವರಿಸಿದೆ. ಮಿಲಿಟರಿ ಪ್ರಧಾನ ಕಚೇರಿ ಮೇಲೆ ಇಸ್ರೇಲ್ ಸೇನೆ ವಾಯುದಾಳಿ ನಡೆಸಿದೆ. ಸಂಭವಿಸಿದ ಭೀಕರ ಸ್ಫೋಟಕ್ಕೆ ಇಡೀ ಕಟ್ಟಡ ಧರೆಗುರುಳಿದೆ.
ರಾಜಧಾನಿ ಡಮಾಸ್ಕಸ್‌ನ ಮಧ್ಯಭಾಗದಲ್ಲಿರುವ ರಕ್ಷಣಾ ಸಚಿವಾಲಯದ ಕಟ್ಟಡದ ಮೇಲೆ ಇಸ್ರೇಲ್ ಆಕ್ರಮಣ ವೈಮಾನಿಕ ದಾಳಿ ನಡೆದಿದೆ. ಜೊತೆಗೆ ದಕ್ಷಿಣ ನಗರವಾದ ಸ್ವೀಡಾದಲ್ಲಿ ಸರ್ಕಾರಿ ಭದ್ರತಾ ಪಡೆಗಳು ಮತ್ತು ಸ್ಥಳೀಯ ಹೋರಾಟಗಾರರ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಾಗ ಇಸ್ರೇಲ್ ಸಿರಿಯಾವನ್ನ ಗುರಿಯಾಗಿಸಿಕೊಂಡು ಸತತ ಮೂರನೇ ದಿನ ದಾಳಿ ನಡೆಸಿದೆ.
ಌಂಕರ್​ ವರದಿ ಮಾಡುತ್ತಿರುವಾಗಲೇ ಬಾಂಬ್ ಸ್ಫೋಟ!
ಇಸ್ರೇಲಿ ಸೈನ್ಯವು ಡಮಾಸ್ಕಸ್‌ನಲ್ಲಿರುವ ಸಿರಿಯಾದ ಅಧ್ಯಕ್ಷೀಯ ಅರಮನೆಯ ಪ್ರದೇಶದಲ್ಲಿ ಟಾರ್ಗೆಟ್ ಮಾಡಿದೆ. ಸಿರಿಯಾದ ಸರ್ಕಾರಿ ಸ್ವಾಮ್ಯದ ದೂರದರ್ಶನದಲ್ಲಿ ನೇರ ಪ್ರಸಾರದ ಸಮಯದಲ್ಲಿ ಆ್ಯಂಕರ್ ಹಠಾತ್ತನೆ ಫ್ರೇಮ್‌ನಿಂದ ಓಡಿಹೋಗಿದ್ದಾರೆ. ಆಕೆಯ ಹಿನ್ನೆಲೆಯಲ್ಲಿ ಉಂಟಾದ ಸ್ಫೋಟದ ದೃಶ್ಯವನ್ನ ನೇರಪ್ರಸಾರದಲ್ಲಿ ಕಂಡಿದೆ. ಅಷ್ಟೇ ಅಲ್ಲದೆ ರಿಪೋಟರ್​ ಕೂಡ ವರದಿ ನೀಡುತ್ತಿರುವಾಗ ಬಾಂಬ್​ ಸ್ಫೊಟಗೊಂಡಿದೆ.
ಇದನ್ನೂ ಓದಿ: ರೆಸ್ಯೂಮ್, ಡಿಗ್ರಿ ಬೇಡವೇ ಬೇಡ.. ಬೆಂಗಳೂರು ಸ್ಟಾರ್ಟ್ ಅಪ್​ನಿಂದ ಭರ್ಜರಿ ಉದ್ಯೋಗ ಆಫರ್..!
A TV anchor for Syria local news was seen running for her life mid-telecast after Israeli army bombed in Damascus. The Israeli defence minister shared the video of the anchor on X, stating, "painful blows have begun". pic.twitter.com/3PiPgClZaO
— Indo Affairs (@indoaffair) July 16, 2025
ಇಸ್ರೇಲ್​ ನಡೆಸಿರುವ ವೈಮಾನಿಕ ದಾಳಿಯಲ್ಲಿ ಮೂವರು ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ. ಹಾಗೂ ಹಲವರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿರಿಯಾ ಮೇಲಿನ ದಾಳಿ ಬೆನ್ನೆಲ್ಲೇ ಯೆಮನ್​ ದೇಶವು ಇಸ್ರೇಲ್​ ಮೇಲೆ ದಾಳಿಗೆ ಯತ್ನಿಸಿದೆ. ಯೆಮನ್​ನಿಂದ ಹಾರಿಸಲಾದ ಕ್ಷಿಪಣಿಗಳನ್ನು ತಡೆದಿರೋದಾಗಿ ಇಸ್ರೇಲ್​​ ಹೇಳಿಕೊಂಡಿದೆ. ಇನ್ನು ಇಸ್ರೇಲ್​ ದಾಳಿಯನ್ನು ವಿಶ್ವಸಂಸ್ಥೆ ಮುಖ್ಯಸ್ಥ ಖಂಡಿಸಿದ್ದಾರೆ.
ಇಸ್ರೇಲಿ ಎಚ್ಚರಿಕೆಗಳ ಹೊರತಾಗಿಯೂ ಸಿರಿಯನ್ ಸರ್ಕಾರಿ ಪಡೆಗಳು ಅಲ್ಲಿ ನೆಲೆಗೊಂಡಿವೆ. ಇದಕ್ಕೆ ಸಿಟ್ಟಿಗೆದ್ದು, ಸಿರಿಯನ್ ರಾಜಧಾನಿ ಡಮಾಸ್ಕಸ್ ಮತ್ತು ಡ್ರೂಜ್ ಬಹುಸಂಖ್ಯಾತ ನಗರವಾದ ಸ್ವೀಡಾದ ಮೇಲೆ ಇಸ್ರೇಲಿ ವಾಯುಸೇನೆ ಬಾಂಬ್‌ಗಳ ಮಳೆ ಸುರಿಯುತ್ತಿದೆ ಎಂದು ಹೇಳಲಾಗ್ತಿದೆ. ಅದ್ಹೇನೆ ಇರಲಿ, ದೇಶ ನಾಯಕರ ಕೋಪಕ್ಕೆ ಬಲಿಯಾಗ್ತಿರೋದು ಮಾತ್ರ ಸಾಮಾನ್ಯ ಪ್ರಜೆಗಳು ಅನ್ನೋದೆ ಸತ್ಯ.
ಇದನ್ನೂ ಓದಿ: ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಮಿಥುನ ರಾಶಿ ಖ್ಯಾತಿಯ ಯದುಶ್ರೇಷ್ಠ; ಫೋಟೋಸ್​ ಇಲ್ಲಿವೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ