ಆ್ಯಂಕರ್ ಸ್ವೇಚ್ಚ ವೋಟಾರ್ಕರ್ ನಿಧನ.. ಇನ್​​ಸ್ಟಾದಲ್ಲಿ ಫೋಟೋ ಶೇರ್​, ಹಲವು ಅನುಮಾನ!

author-image
Bheemappa
Updated On
ಆ್ಯಂಕರ್ ಸ್ವೇಚ್ಚ ವೋಟಾರ್ಕರ್ ನಿಧನ.. ಇನ್​​ಸ್ಟಾದಲ್ಲಿ ಫೋಟೋ ಶೇರ್​, ಹಲವು ಅನುಮಾನ!
Advertisment
  • ಕಣ್ಣೀರು ತರಿಸುತ್ತದೆ ಇನ್​ಸ್ಟಾದಲ್ಲಿ ಬರೆದ ಆ ಟ್ಯಾಗ್​ ಲೈನ್!​​
  • ಪ್ರಮುಖ ಮಾಧ್ಯಮಗಳಲ್ಲಿ ಆ್ಯಂಕರ್ ಆಗಿ ಕೆಲಸ ಮಾಡಿದ್ದರು
  • ಅನುಮಾನಸ್ಪಾದ ರೀತಿಯಲ್ಲಿ ಜೀವ ಕಳೆದುಕೊಂಡ ಆ್ಯಂಕರ್

ಹೈದರಾಬಾದ್​: ತೆಲುಗು ಮಾಧ್ಯಮಗಳಲ್ಲಿ ನ್ಯೂಸ್​​ ಆ್ಯಂಕರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸ್ವೇಚ್ಚ ವೋಟಾರ್ಕರ್ (40) ಅವರು ಅನುಮಾನಸ್ಪಾದ ರೀತಿಯಲ್ಲಿ ಜೀವ ಬಿಟ್ಟಿದ್ದಾರೆ ಎಂದು ಹೇಳಲಾಗಿದೆ. ಚಿಕ್ಕಡಪಲ್ಲಿಯ ಆರ್‌ಟಿ ಕ್ರಾಸ್‌ ರಸ್ತೆಯ ಜವಹರ್‌ನಗರದಲ್ಲಿನ ನಿವಾಸದಲ್ಲಿ ಈ ಘಟನೆ ನಡೆದಿದೆ.

ನ್ಯೂಸ್ ಆ್ಯಂಕರ್ ಸ್ವೇಚ್ಚ ವೋಟಾರ್ಕರ್ ಅವರು ಕಳೆದ 18 ವರ್ಷಗಳಿಂದ ತೆಲುಗು ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿದ್ದರು. ಪ್ರಸ್ತುತ ಅವರು ಟಿ ನ್ಯೂಸ್​ನಲ್ಲಿ ಕೆಲಸ ಮಾಡುತ್ತಿದ್ದರು. ಅವರ ಮನೆಯಲ್ಲಿನ ಫ್ಯಾನ್​​ಗೆ ಆ್ಯಂಕರ್ ಸ್ವೇಚ್ಚ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಮಾಹಿತಿ ತಿಳಿದ ತಕ್ಷಣ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿದ್ದಾರೆ. ಬಳಿಕ ಅವರ ಮೃತದೇಹವನ್ನು ನಗರದ ಗಾಂಧಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ ಎಂದು ಹೇಳಲಾಗಿದೆ. ​

ಇದನ್ನೂ ಓದಿ:ಬಾಲಿವುಡ್​ ಹೀರೋಯಿನ್.. ಹುಡುಗರು ಸಿನಿಮಾದ ‘ಪಂಕಜಾ’ ಹಾಡಿನ ನಟಿ ಕಾರ್ಡಿಕ್​ ಅರೆಸ್ಟ್​​ನಿಂದ ನಿಧನ

publive-image

ಆ್ಯಂಕರ್ ನಿಧನ ಹೊಂದಿದ ಸುದ್ದಿ ತಿಳಿಯುತ್ತಿದ್ದಂತೆ ಸಂಬಂಧಿಕರು, ಸ್ನೇಹಿತರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಆದರೆ ಆ್ಯಂಕರ್ ಜೀವ ಕಳೆದುಕೊಂಡಿರುವುದಕ್ಕೆ ನಿಖರವಾದ ಮಾಹಿತಿ ತಿಳಿದು ಬರಬೇಕಿದೆ. ಇವರು ಜೀವ ಕಳೆದುಕೊಳ್ಳುವುದಕ್ಕೂ ಮೊದಲು ಇನ್​ಸ್ಟಾದಲ್ಲಿ ಕೆಲ ಪೋಟೋಗಳನ್ನು ಶೇರ್ ಮಾಡಿದ್ದಾರೆ. ಈ ಪೋಸ್ಟ್​ಗೆ ಟ್ಯಾಗ್​ಲೈನ್ ಕೂಡ ಬರೆದಿದ್ದಾರೆ. ಮನಸು ಪ್ರಶಾಂತವಾಗಿ ಇದ್ರೆ ಆತ್ಮ ಮಾತನಾಡುತ್ತದೆ. ಬುದ್ಧ ಎಂದು ಬರೆದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment