Advertisment

ಕೈಗೆಟಕುವ ಬೆಲೆ, ಅಧಿಕ ಮೈಲೇಜ್​! TVS​ ಪರಿಚಯಿಸಿದೆ ರೈಡರ್ iGO ವೇರಿಯಂಟ್ ಬೈಕ್

author-image
AS Harshith
Updated On
ಕೈಗೆಟಕುವ ಬೆಲೆ, ಅಧಿಕ ಮೈಲೇಜ್​! TVS​ ಪರಿಚಯಿಸಿದೆ ರೈಡರ್ iGO ವೇರಿಯಂಟ್ ಬೈಕ್
Advertisment
  • ಹಬ್ಬದ ಋತುವಿನಲ್ಲಿ ಬಂತು ಟಿವಿಎಸ್​ ರೈಡರ್​ ಐಜಿಒ ಬೈಕ್
  • ಕಡಿಮೆ ಬಜೆಟ್​, ಅಧಿಕ ಮೈಲೇಜ್​.. ಸಖತ್ತಾಗಿದೆ 125ಸಿಸಿ ಬೈಕ್​
  • ಹೊಸ ಪಲ್ಸರ್ N125ಗೆ ಪ್ರತಿಸ್ಪರ್ಧಿಯಾದ ಟಿವಿಎಸ್​ ರೈಡರ್​ ಐಜಿಒ

ಜನಪ್ರಿಯ TVS ಕಂಪನಿ ಗ್ರಾಹಕರಿಗಾಗಿ ರೈಡರ್ iGO ವೇರಿಯಂಟ್​ ಅನ್ನು ಬಿಡುಗಡೆ ಮಾಡಿದೆ. ಹಬ್ಬದ ಋತುವಿನಲ್ಲಿ 10 ಲಕ್ಷ ಯುನಿಟ್​​ಗಳ ಮಾರಾಟವನ್ನು ಮಾಡಲು ಕಂಪನಿ ಮುಂದಾಗಿದೆ. ಗ್ರಾಹಕರಿಗಾಗಿ ಬಜೆಟ್​ ಬೆಲೆಯಲ್ಲಿ ಪರಿಚಯಿಸಿರುವ ಈ ಬೈಕ್​ ಆಕರ್ಷಕ ಲುಕ್ ಮತ್ತು ಹಲವು ವಿಶೇಷತೆಗಳನ್ನು ಒಳಗೊಂಡಿದೆ.

Advertisment

ಟಿವಿಎಸ್ ಪರಿಚಯಿಸಿರುವ ರೈಡರ್ ಬೈಕ್​ 125 ಸಿಸಿಯನ್ನು ಹೊಂದಿದೆ. ಇದು ಮಾರುಕಟ್ಟೆಯಲ್ಲಿ ಹೋಂಡಾ ಶೈನ್, ಎಸ್‌ಪಿ ಮತ್ತು ಬಜಾಜ್ ಪಲ್ಸರ್ ಎನ್ 125 ನಂತಹ ಮಾದರಿಗಳೊಂದಿಗೆ ಸ್ಪರ್ಧಿಸುತ್ತದೆ.

ಇತ್ತೀಚೆಗೆ ಬಜಾಜ್ ಕಂಪನಿ ತನ್ನ ಹೊಸ ಪಲ್ಸರ್ N125 ಅನ್ನು ಬಿಡುಗಡೆ ಮಾಡಿತು. ಇದರ ಆರಂಭಿಕ ಬೆಲೆಯನ್ನು 94,707 (ಎಕ್ಸ್ ಶೋ ರೂಂ) ಎಂದು ನಿಗದಿಪಡಿಸಲಾಗಿದೆ. ಆದರೆ ಪಲ್ಸರ್‌ಗೆ ಹೋಲಿಸಿದರೆ, ಟಿವಿಎಸ್ ರೈಡರ್‌ನ ಈ ಹೊಸ ರೂಪಾಂತರವು ಅಂದಾಜು 3,600 ರೂ.ಗಳಷ್ಟು ದುಬಾರಿಯಾಗಿದೆ.

ಇದನ್ನೂ ಓದಿ: Ambrane Solar 10K: ಸೂರ್ಯನ ಬಿಸಿಲು ಸಾಕು.. ಒಂದು ಬಾರಿ ರೀಚಾರ್ಜ್​ ಆದ್ರೆ 5 ದಿನ ಬರುತ್ತೆ ಈ ಪವರ್​​​ ಬ್ಯಾಂಕ್! 

Advertisment

publive-image

ಟಿವಿಎಸ್​​ ರೈಡರ್​ ಬೈಕ್​ ಆಕರ್ಷಕ ಲುಕ್​ ಹೊಂದಿದೆ. ಬೂಸ್ಟ್​ ಮೋಡ್​ ಎಂಬ ಹೊಸ ರೂಪಾಂತರವನ್ನು ಇದರಲ್ಲಿ ಸೇರಿಸಲಾಗಿದೆ. ಐಜಿಒ ತಂತ್ರಜ್ಞಾನದೊಂದಿಗೆ ಈ ಬೈಕ್​​ ಅನ್ನು ಪರಿಚಯಿಸಲಾಗಿದೆ.

ಟಿವಿಎಸ್​ ರೈಡರ್ ಬೈಕ್​ ಎಂಜಿನ್​​ 6000 ಆರ್​ಪಿಎಮ್​​ನಲ್ಲಿ 11.75 ನ್ಯೂಟನ್​ ಮೀಟರ್​ ಕ್ಲಾಸ್​​ ಲೀಡಿಂಗ್​ ಟಾರ್ಕ್​ ಉತ್ಪಾದಿಸುತ್ತದೆ. ಬೂಸ್ಟ್​ ಮೋಡ್​ನೊಂದಿಗೆ ಈ ಬೈಕ್​ ಕೇವಲ 5.8 ಸೆಕೆಂಡುಗಳ 0ಯಿಂದ 60 ಕೆಎಮ್​ಪಿಎಚ್​​ ವೇಗವನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ಸ್ಪೆಷಲ್​ ಆಫರ್​.. ಗ್ಯಾಜೆಟ್​ಗಳ ಮೇಲೆ ಶೇ.75%ರಷ್ಟು ರಿಯಾಯಿತಿ

Advertisment

ಮೊದಲೇ ಹೇಳಿದಂತೆ 124.8 ಸಿಸಿ ಸಾಮರ್ಥ್ಯದ ಈ ಬೈಕ್​​ ಏರ್​​ ಮತ್ತು ಆಯಿಲ್​ ಕೂಲ್ಡ್​​ 3ವಿ ಎಂಜಿನ್​ ಹೊಂದಿದೆ. 8.37ಕೆಡಬ್ಲ್ಯು ಶಕ್ತಿಯನ್ನು ಉತ್ಪಾದಿಸುತ್ತದೆ. 5 ಸ್ಪೀಡ್​ ಗೇರ್​​ಬಾಕ್ಸ್​ ಮತ್ತು ಮೊನಿ ಶಾಕ್​​ ಸಸ್ಪೆನ್ಶನ್​​ ನೀಡಲಾಗಿದೆ. 17 ಇಂಚಿನ ಮಿಶ್ರಲೋಹದ ಚಕ್ರವನ್ನು ಹೊಂದಿದೆ.

ಇನ್ನು ಟಿವಿಎಸ್​ ರೈಡರ್​ iGO ವೇರಿಯಂಟ್ ಬೈಕ್​ ಬೆಲೆ 98,389 ರೂಪಾಯಿ ಆಗಿದೆ. ಇತ್ತೀಚೆಗೆ ಬಿಡುಗಡೆಗೊಂಡ ಹೊಸ ಪಲ್ಸರ್ N125ಗಿಂತ 3 ಸಾವಿರದಷ್ಟು ದುಬಾರಿಯಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment