/newsfirstlive-kannada/media/post_attachments/wp-content/uploads/2024/12/MP_BROTHER.jpg)
ಇದು ಧೂಮ್​-3 ಚಿತ್ರದ ದೃಶ್ಯ. ಇದರಲ್ಲಿ ನಟ ಅಮೀರ್ ಖಾನ್​ ದರೋಡೆಕೋರನಾಗಿ ಬ್ಯಾಂಕ್​ ಕಳ್ಳತನ ಮಾಡುತ್ತಾನೆ. ಮತ್ತು ಅದೇ ಟೈಮ್​ನಲ್ಲಿ ಬೇರೆ ಸ್ಥಳದಲ್ಲಿ ಇರುವಂತೆ ಸೀನ್​ ಕ್ರಿಯೆಟ್​ ಮಾಡಿರುತ್ತಾನೆ. ನಾವಿ ಇಲ್ಲಿ ಕೊಟ್ಟಿರುವ​ ಸ್ಟೋರಿ ಕೂಡ ಅದೇ ರೀತಿ ಇದೆ. ಕಳ್ಳತನವನ್ನೇ ಕಾಯಕ ಮಾಡಿಕೊಂಡಿದ್ದ ಟ್ವಿನ್ಸ್​​ ಬ್ರದರ್ಸ್​ ಪೊಲೀಸರು ಪೊಲೀಸರಿಗೆ ತಲೆ ನೋವಾಗಿದ್ದರು. ಕೊನೆಗೂ ಮಧ್ಯಪ್ರದೇಶ ಪೊಲೀಸರು ಖತರ್ನಾಕ್​​ ಅವಳಿ-ಜವಳಿ ಕಳ್ಳರನ್ನು ಅರೆಸ್ಟ್​ ಮಾಡಿದ್ದಾರೆ.
/newsfirstlive-kannada/media/post_attachments/wp-content/uploads/2024/12/MP_BROTHERS_1.jpg)
ಕೊನೆಗೂ ಪೊಲೀಸರ ಬಲೆಗೆ ಬಿದ್ದ ಅವಳಿ ಸಹೋದರರು
ಸೌರಭ್ ವರ್ಮಾ ಹಾಗೂ ಸಂಜೀವ್​ ವರ್ಮಾ ಇವರಿಬ್ಬರು ಅವಳಿ-ಜವಳಿ. ನೋಡೋಕೆ ಒಂದೇ ರೀತಿ ಕಾಣುವ ಇವರು ಇದನ್ನೇ ಬಂಡವಾಳ ಮಾಡಿಕೊಂಡು ಕಳ್ಳತನ, ದರೋಡೆ ಮಾಡೋದನ್ನೇ ಕಾಯಕ ಮಾಡಿಕೊಂಡಿದ್ದರು. ಇನ್ನು ಪೊಲೀಸರಿಗೆ ಸಿಕ್ಕಿ ಬಿದ್ರೆ ತಪ್ಪಿಸಿಕೊಳ್ಳಲು ಇವರು ಮಾಡಿದ್ದ ಖತರ್ನಾಕ್​ ಪ್ಲಾನ್​ ಕೇಳಿದರೆ ಶಾಕ್​ ಆಗ್ತೀರಾ. ಇದರಲ್ಲಿ ಒಬ್ಬ ಕಳ್ಳತನ ಮಾಡಿದ್ರೆ, ಮತ್ತೊಬ್ಬ ನಾನು ಕಳ್ಳತನವನ್ನೇ ಮಾಡಿಲ್ಲ. ನಾನು ಅವತ್ತು ಕಳ್ಳತನ ನಡೆದ ಸ್ಥಳದಲ್ಲಿ ಇರಲಿಲ್ಲ. ಬೇರೆ ಸ್ಥಳದಲ್ಲಿ ಇದ್ದೆ. ಬೇಕಿದ್ದರೇ ನೀವೆ ನೋಡಿ ಎಂದು ಸಿಸಿಟಿವಿ ದೃಶ್ಯಗಳನ್ನು ತೋರಿಸಿ ಪೊಲೀಸರಿಂದ ಬಚಾವ್​ ಆಗುತ್ತಿದ್ದನು. ಆದ್ರೀಗ ಅವರ ಟೈಮ್​ ಕೆಟ್ಟು ಹೋಗಿ ಪೊಲೀಸರ ಬಲೆಗೆ ಬಿದ್ದಾರೆ.
ಇತ್ತೀಚಿಗೆ ಅಂದರೆ ಡಿಸೆಂಬರ್ 23ನೇ ತಾರೀಖು, ಮೌಗಂಜ್ ನಗರದಲ್ಲಿ ಮನೆಯೊಂದರಲ್ಲಿ ದರೋಡೆ ಮಾಡಿದ್ದರು. ಸೌರಭ್​ ಎಂಬಾತ ತನ್ನ ಸಹಚರ ಜೊತೆ ಮನೆಗೆ ಕನ್ನ ಹಾಕಿದ್ದ. ಮೌಗಂಜ್ ಕೇಸ್​ನಲ್ಲಿ ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆ, ಸೌರಭ್​ ಸೇರಿದಂತೆ ಮೂವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಆಗ ಸೌರಭ್​ ಬಾಯ್ಬಿಟ್ಟ ಸತ್ಯಕೇಳಿ ಪೊಲೀಸರೆ ಒಂದು ಕ್ಷಣ ಶಾಕ್​ ಆಗಿದ್ದಾರೆ. ಸೌರಭ್​ ಸಹೋದರ ಸಂಜೀವ್​ ಬಗ್ಗೆ ಗೊತ್ತಾಗಿದೆ.
ಸಿಸಿಟಿವಿಯಿಂದ ಪೊಲೀಸರನ್ನೇ ಯಾಮಾರಿಸುತ್ತಿದ್ದರು
- ಸೌರಭ್​ ಕಳ್ಳತನ ಮಾಡಿದ್ರೆ.. ಸಂಜೀವ್​ ಬೇರೆ ಸ್ಥಳದಲ್ಲಿ ಇರುತ್ತಿದ್ದ
- ಸಿಸಿಟಿವಿ ದೃಶ್ಯವನ್ನು ಬಳಸಿಕೊಂಡು ಕೇಸ್​ನಿಂದ ಹೊರ ಬರ್ತಿದ್ದ
- ಇಬ್ಬರು ಸಹೋದರರು ಒಂದೇ ರೀತಿ ಬಟ್ಟೆ ಧರಸಿ ಕೃತ್ಯ ಎಸಗುತ್ತಿದ್ರು
- ಸೌರಭ್​, ಸಂಜೀವ್​ ಅವಳಿ ಸಹೋದರರು ಒಟ್ಟಿಗೆ ವಾಸಿಸುತ್ತಿರಲಿಲ್ಲ
- ಇವರಿಬ್ಬರ ಗುರುತು ಕೆಲವೇ ಕೆಲವು ಜನರಿಗೆ ಮಾತ್ರ ಗೊತ್ತಿತ್ತು
- ಹಿಂದೆ ಹಲವು ಕೇಸ್​ಗಳಲ್ಲಿ ಬಚಾವ್​ ಆಗಿದ್ದ ಅವಳಿ ಸಹೋದರರು
/newsfirstlive-kannada/media/post_attachments/wp-content/uploads/2024/12/MP_BROTHERS.jpg)
ವಿಚಾರಣೆ ವೇಳೆ ಸೌರಭ್​ ಬಾಯ್ಬಿಟ್ಟ ಸತ್ಯ ಕೇಳಿ ಸಂಜೀವ್​ನನ್ನು ಠಾಣೆಗೆ ಕರೆಸಿದ್ದಾರೆ. ಆಗ, ಲಾಕ್​ನಲ್ಲಿದ್ದ ವ್ಯಕ್ತಿ ಹೇಗೆ ಹೊರ ಬಂದ ಎಂದು ಕೆಲವರು ಕನ್ಫ್ಯೂಸ್​ ಆಗಿದ್ದಾರೆ. ಆದ್ರೆ ಈ ಬಾರಿ ಅವಳಿ ಸಹೋದರರ ಗ್ರಹಚಾರ ಕೆಟ್ಟು ಪೊಲೀಸರ ಕೈಯಲ್ಲಿ ತಗಲಾಕೊಂಡಿದ್ದಾರೆ. ಈ ಇಬ್ಬರು ಖತರ್ನಾಕ್​ ಅವಳಿ ಸಹೋದರರಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣವನ್ನು ಪೊಲೀಸರು ವಶಪಡಿಸಿಕೊಂಡು, ಹಿಂದೆ ಮಾಡಿದ್ದ ಹಿಸ್ಟರಿಗಳ ಕೆದಕುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us