/newsfirstlive-kannada/media/post_attachments/wp-content/uploads/2024/04/Twins-PUC-Result.jpg)
ಕೊಡಗು: ಇಂದು ಪ್ರಕಟವಾದ ಪಿಯುಸಿ ಫಲಿತಾಂಶದಲ್ಲಿ ಹಲವು ಆಶ್ಚರ್ಯ, ಅಪರೂಪದಲ್ಲಿ ಅಪರೂಪದ ಫಲಿತಾಂಶಗಳು ಹೊರ ಬಂದಿದೆ. ಅವಳಿ ಸಹೋದರಿಯರಿಗೆ ಪಿಯುಸಿಯಲ್ಲಿ ಒಂದೇ ಸಮಾನವಾದ ಅಂಕ ಬಂದಿರೋದು ಅಚ್ಚರಿಗೆ ಕಾರಣವಾಗಿದೆ.
ಹಾಸನದ ರಾಯಲ್ ಅಪೋಲೋ ಕಾಲೇಜು ವಿದ್ಯಾರ್ಥಿನಿಯರು ದ್ವಿತೀಯ ಪಿಯುಸಿಯಲ್ಲಿ ಒಂದೇ ಮಾರ್ಕ್ಸ್ ತೆಗೆದಿದ್ದಾರೆ. ಅವಳಿ ಪುತ್ರಿಯರಾದ ಚುಕ್ಕಿ ಚಂದ್ರ, ಇಬ್ಬನಿ ಚಂದ್ರ ಇಬ್ಬರೂ ಒಟ್ಟು 571 ಅಂಕ ಪಡೆದಿದ್ದಾರೆ. ಇವರಿಬ್ಬರ ಪರ್ಸೆಂಟೇಜ್ ಕೂಡ 95.17% ಆಗಿದೆ.
ಇದನ್ನೂ ಓದಿ: ಬಡತನದಲ್ಲೇ ಅರಳಿದ ಪ್ರತಿಭೆಗಳು.. ಪಿಯು ಪರೀಕ್ಷೆಯಲ್ಲಿ ಈ ಬಾರಿ ಟಾಪರ್‌ಗಳ ಸಾಧನೆ, ದಾಖಲೆಯೇ ವಿಶೇಷ!
ಚುಕ್ಕಿ ಚಂದ್ರ, ಇಬ್ಬನಿ ಚಂದ್ರ ಇಬ್ಬರೂ 10ನೇ ತರಗತಿಯಲ್ಲೂ ಕೂಡ ಸಮಾನ ಅಂಕ ಗಳಿಸಿದ್ದರು. ಎಸ್‌ಎಸ್‌ಎಲ್‌ಸಿಯಲ್ಲಿ ಇಬ್ಬರಿಗೂ 620 ಅಂಕ ಅಂದ್ರೆ 99.20% ಬಂದಿತ್ತು. ಇದೀಗ ಪಿಯುಸಿಯಲ್ಲೂ ಕೂಡ ಅವಳಿ ಸಹೋದರಿಯರಿಗೆ ಸಮಾನ ಅಂಕ ಬಂದಿರೋದು ಡಬಲ್ ಖುಷಿ ತಂದಿದೆ.
ಚುಕ್ಕಿ ಚಂದ್ರ, ಇಬ್ಬನಿ ಚಂದ್ರ ಕೃಷಿ ಇಲಾಖೆ ಅಧಿಕಾರಿ ವಿನೋದ್ ಚಂದ್ರ ಮತ್ತು ಕನ್ನಿಕಾ ದಂಪತಿಯ ಪುತ್ರಿಯರು. ವಿನೋದ್ ಚಂದ್ರ ಅವರು ಈ ಹಿಂದೆ ಕೊಡಗಿನ ವಾರ್ತಾ ಇಲಾಖೆಯ ಅಧಿಕಾರಿ ಆಗಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us