PUC ಪರೀಕ್ಷೆಯಲ್ಲಿ ಅವಳಿ ಮಕ್ಕಳ ಸಾಧನೆ; ಮಾರ್ಕ್ಸ್​​ನಲ್ಲೂ ಸಹೋದರತೆ ಕಂಡು ಎಲ್ಲರೂ ಶಾಕ್!

author-image
Veena Gangani
Updated On
PUC ಪರೀಕ್ಷೆಯಲ್ಲಿ ಅವಳಿ ಮಕ್ಕಳ ಸಾಧನೆ; ಮಾರ್ಕ್ಸ್​​ನಲ್ಲೂ ಸಹೋದರತೆ ಕಂಡು ಎಲ್ಲರೂ ಶಾಕ್!
Advertisment
  • ಸೇಮ್​ ಟು ಸೇಮ್​ ಅಂಕ ಪಡೆದು ಎಲ್ಲರಲ್ಲೂ ಅಚ್ಚರಿ ಮೂಡಿಸಿದ ಮಕ್ಕಳು
  • ಶಿರಸಿಯ ಪ್ರಸಿದ್ಧ ವೈದ್ಯ ದಂಪತಿ ಅವಳಿ ಮಕ್ಕಳು ರಾಜ್ಯಕ್ಕೆ ಆರನೇ ರ್ಯಾಂಕ್
  • ಬೆಂಗಳೂರಿನ‌ ದೀಕ್ಷಾ ಕಾಲೇಜಿನಲ್ಲಿ ಓದುತ್ತಿದ್ದ ಅವಳಿ ಜವಳಿ ವಿದ್ಯಾರ್ಥಿಗಳು

ಶಿರಸಿ: ಕಳೆದ ಎರಡು ದಿನಗಳ ಹಿಂದೆ ಪಿಯುಸಿ ಫಲಿತಾಂಶ ಹೊರ ಬಂದಿದೆ. ಎಲ್ಲೆಡೆ ರ್ಯಾಂಕ್​ಗಳ ಬಗ್ಗೆ ಚರ್ಚೆ ನಡೆದಿದೆ. ಅದರ ನಡುವೆಯೇ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಪ್ರಸಿದ್ಧ ವೈದ್ಯ ದಂಪತಿ ಅವಳಿ ಮಕ್ಕಳು ರಾಜ್ಯ ಮಟ್ಟದಲ್ಲಿ ಆರನೇ ರ್ಯಾಂಕ್ ಪಡೆದು ಸಹೋದರತೆ ಸಾರಿದ್ದಾರೆ.

ಇದನ್ನೂ ಓದಿ: 9 ಸಾವಿರಕ್ಕೂ ಹೆಚ್ಚು ಸಹಾಯಕ ಲೋಕೋ ಪೈಲಟ್ ಹುದ್ದೆಗಳು.. SSLC ಪಾಸ್ ಆಗಿದ್ರೆ ಸಾಕು…!

publive-image

ಶಿರಸಿಯ ವೈದ್ಯ ದಂಪತಿಗಳಾದ ಡಾ. ದಿನೇಶ ಹೆಗಡೆ ಹಾಗೂ ಡಾ. ಸುಮನ್ ಹೆಗಡೆ ಅವರ ಅವಳಿ ಮಕ್ಕಳಿಬ್ಬರೂ ಪಿಯುಸಿಯಲ್ಲಿ ರಾಜ್ಯಮಟ್ಟದಲ್ಲಿ ಆರನೇ ರ್ಯಾಂಕ್ ಪಡೆದುಕೊಂಡಿದ್ದಾರೆ. 600ಕ್ಕೆ 594 ಅಂಕ ಪಡೆದು ಶೇ. 99ರಷ್ಟು ಸಾಧನೆ ಮಾಡಿದ್ದಾರೆ.

publive-image

ದಕ್ಷ ಹಾಗೂ‌ ರಕ್ಷಾ ಇಬ್ಬರೂ ಒಂದೇ‌ ಸಂಖ್ಯೆಯ ಅಂಕ‌ ಪಡೆದಿರೋದು ವಿಶೇಷವಾಗಿದೆ. ಮೂಲತಃ ಶಿರಸಿಯವರಾದರೂ ಈ ಇಬ್ಬರೂ ವಿದ್ಯಾರ್ಥಿಗಳು ಬೆಂಗಳೂರಿನ‌ ದೀಕ್ಷಾ ಕಾಲೇಜಿನಲ್ಲಿ ಓದುತ್ತಿದ್ದರು. ದಕ್ಷನಿಗೆ ನಾಲ್ಕು ವಿಷಯದಲ್ಲಿ ಶೇ.100, ರಕ್ಷಾನಿಗೆ ಎರಡು ವಿಷಯದಲ್ಲಿ ಶೇ 100 ಅಂಕ ಪಡೆದಿದ್ದಾರೆ. ಆದರೂ ಇಬ್ಬರೂ ಒಂದೇ ರೀತಿಯ ಅಂಕ ಗಳಿಸಿದ್ದು ವಿಸ್ಮಯ ಎನ್ನಬಹುದಾಗಿದೆ.‌

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment