ಅಮೃತಧಾರೆ ಸೀರಿಯಲ್​ನಲ್ಲಿ ಮಹಾ ಟ್ವಿಸ್ಟ್​.. ಭೂಮಿಕಾ ಮುಂದೆ ಅಸಲಿ ಸತ್ಯ ಹೇಳಿ ಬಿಡ್ತಾಳಾ ಲಚ್ಚಿ?

author-image
Veena Gangani
Updated On
ಅಮೃತಧಾರೆ ಸೀರಿಯಲ್​ನಲ್ಲಿ ಮಹಾ ಟ್ವಿಸ್ಟ್​.. ಭೂಮಿಕಾ ಮುಂದೆ ಅಸಲಿ ಸತ್ಯ ಹೇಳಿ ಬಿಡ್ತಾಳಾ ಲಚ್ಚಿ?
Advertisment
  • ಹೊಸ ಹೊಸ ಟ್ವಿಸ್ಟ್​ ಪಡೆದುಕೊಳ್ತಿದೆ ಈ ಸೀರಿಯಲ್
  • ಮನೆಯವರ ಮುಂದೆ ಅಸಲಿ ಸತ್ಯ ರಿವೀಲ್ ಆಗುತ್ತಾ?
  • ಶಕುಂತಲಾಳ ಕಾಲನ್ನು ನೋಡಿ ಶಾಕ್​ ಆದ ಲಚ್ಚಿ

ಅಮೃತಾಧಾರೆ ಸೀರಿಯಲ್​ನಲ್ಲಿ ಮಹಾ ಟ್ವಿಸ್ಟ್​ವೊಂದು ಎದುರಾಗಿದೆ. ತನ್ನನ್ನು ಕಿಡ್ನ್ಯಾಪ್​ ಮಾಡಿಸಿದ್ದು ಯಾರು ಅಂತ ಲಚ್ಚಿಗೆ ಸಣ್ಣ ಸುಳಿವು ಸಿಕ್ಕಿದೆ. ಅಪಹರಣದಿಂದ ಪಾರಾಗಿ ಬಂದ ಲಚ್ಚಿ ಶಕುಂತಲಾಳ ಕಾಲನ್ನು ನೋಡಿದ್ದಾಳೆ. ತನ್ನ ಅಪಹರಣವಾದ ಜಾಗದಲ್ಲೇ ಕಾಣಿಸಿದ್ದ ಸೇಮ್​ ಚಪ್ಪಲಿಯನ್ನು ನೋಡಿದ್ದಾಳೆ ಲಚ್ಚಿ. ಈ ವಿಚಾರ ಭೂಮಿಕ ಮುಂದೆ ಬಾಯ್ಬಿಡ್ತಾಳಾ ಅಥವಾ ಸುಮ್ಮನೆ ಆಗುತ್ತಾಳಾ ಅಂತ ಕಾದು ನೋಡಬೇಕಿದೆ.

ಇದನ್ನೂ ಓದಿ: ಪಾದರಕ್ಷೆ ಕೊಳ್ಳಲು ದುಡ್ಡಿಲ್ಲ.. ಇಡೀ ಗ್ರಾಮಕ್ಕೆ ಪವನ್ ಕಲ್ಯಾಣ್‌ ಭರ್ಜರಿ ಗಿಫ್ಟ್‌; ಮನ ಮಿಡಿಯುವ ಸ್ಟೋರಿ!

publive-image

ಹೌದು. ಗೌತಮ್​ ಲಾಕೆಟ್​ನಲ್ಲಿ ಮೈಕ್​ ಫಿಕ್ಸ್​ ಮಾಡಿರುವುದು ಯಾರೆಂದು ತಿಳಿಯುತ್ತಿತ್ತು. ಆದ್ರೆ, ಈ ವಿಚಾರ ತಿಳಿಯುತ್ತಿದ್ದಂತೆ ಶಕುಂತಲಾ ಕುಂತತ್ರ ಎಲ್ಲಾ ಪ್ಲಾನ್ ಕ್ಯಾನ್ಸಲ್​ ಆಗಿತ್ತು. ಭೂಮಿಕಾ ಆಚೆ ಹೋಗುತ್ತಿದ್ದಂತೆ ಸುಧಾ ಮಗಳು ಲಚ್ಚಿಯನ್ನು ಕಿಡ್ನಾಪ್​ ಮಾಡಿಸಿದ್ದೆಉ. ಜೈದೇವ್​ ಬೇರೆ ದನಿಯಲ್ಲಿ ಗೌತಮ್​ಗೆ ಕರೆ ಮಾಡಿ ಹಣ ತಂದರೆ ನಿಮ್ಮ ಲಚ್ಚಿನ್ನು ಬಿಟ್ಟು ಬಿಡುವೆ ಅಂತ ಅವಾಜ್​ ಹಾಕಿದ್ದರು.

publive-image

ಆದರೆ ಇದನ್ನು ಮಾಡಿಸಿರುವುದು ಜೈದೇವ್​, ಶಕುಂತಲಾ ಎನ್ನುವ ಸಣ್ಣ ಸುಳಿವು ಕೂಡ ಮನೆಯಲ್ಲಿ ಯಾರಿಗೂ ಗೊತ್ತಿಲ್ಲ. ಹಣದ ಆಸೆಗಾಗಿ ಲಚ್ಚಿಯನ್ನು ಅಪಹರಣ ಮಾಡಿರುವುದಾಗಿ ಅಂದುಕೊಳ್ಳಲಾಗಿದೆ. ಪ್ಲ್ಯಾನ್​ ಮಾಡಿದಂತೆ ಲಚ್ಚಿನನ್ನು ಬಿಟ್ಟು ಜೈದೇವ್ ಗೌತಮ್​ಗೆ ಅವಾಜ್​ ಹಾಕಿದ್ದಾರೆ. ಪೊಲೀಸ್​, ಕೇಸ್ ಅಂತ ಹೋದರೇ ಪರಿಣಾಮ ನೆಟ್ಟಗೆ ಇರೋದಿಲ್ಲ ಅಂತ ಹೇಳಿದ್ದಾರೆ.​

publive-image

ಲಚ್ಚಿ ತನ್ನ ಕಣ್ಣಿಗೆ ಕಟ್ಟಿರೋ ಪಟ್ಟಿಯಿಂದ ಸೂಕ್ಷ್ಮವಾಗಿ ಅಲ್ಲಿ ಯಾರು ನಿಂತುಕೊಂಡಿದ್ದಾರೆ ಅಂತ ಗಮನಿಸಿದ್ದಾಳೆ. ಆಗ ಆಕೆಗೆ ಶಕುಂತಲಾಳ ಕಾಲು, ಸೀರೆಯ ತುದಿ ಕಾಣಿಸಿದೆ. ಯಾರೋ ಮಹಿಳೆ ಬಂದಿದ್ದಾಳೆ ಎನ್ನುವುದು ಆಕೆಗೆ ತಿಳಿದಿತ್ತು. ಇದಾದ ಬಳಿಕ ಮನೆಗೆ ಬಂದು ಲಚ್ಚಿ ಶಕುಂತಲಾಳ ಕಾಲನ್ನು ನೋಡಿ ಶಾಕ್​ ಆಗಿದ್ದಾಳೆ. ಅಲ್ಲಿಗೆ ಬಂದಾಕೆ ಇವಳೇ ಎನ್ನುವುದು ಗೊತ್ತಾಗಿದೆ. ಇದೇ ವಿಚಾರ ಮನೆಯವರ ಮುಂದೆ ಬಯಲಾಗುತ್ತಾ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment