ಅಣ್ಣಯ್ಯ ಸೀರಿಯಲ್​ನಲ್ಲಿ ಮಹಾ ಟ್ವಿಸ್ಟ್​.. ಶಿವು ಜೀವನದ ಹಿಂದಿದೆ ಅಚ್ಚರಿ ಸತ್ಯ..!

author-image
Veena Gangani
Updated On
ಅಣ್ಣಯ್ಯ ಸೀರಿಯಲ್​ನಲ್ಲಿ ಮಹಾ ಟ್ವಿಸ್ಟ್​.. ಶಿವು ಜೀವನದ ಹಿಂದಿದೆ ಅಚ್ಚರಿ ಸತ್ಯ..!
Advertisment
  • ಶಿವಣ್ಣನ ಹೊಸ ಅವತಾರ ಅಚ್ಚರಿಗೊಂಡ ಸೀರಿಯಲ್ ವೀಕ್ಷಕರು
  • ಜೈಲಿನ ವಾತಾವರಣ ನೋಡ್ತಿದ್ದಾಗೆ ಪ್ಲ್ಯಾಶ್​ಬ್ಯಾಕ್ ಸ್ಟೋರಿ ರಿವೀಲ್
  • ಮಾಸ್​ ಲುಕ್​ನಲ್ಲಿ ಸಖತ್ ಆಗಿ ಕಾಣ್ತಿದ್ದಾರೆ ನಟ ವಿಕಾಶ್​ ಉತ್ತಯ್ಯ

ಅಣ್ಣಯ್ಯ ಧಾರಾವಾಹಿ ಮಹಾ ತಿರುವು ಪಡೆದುಕೊಳ್ತಿದೆ. ಶಿವಣ್ಣನ ಹೊಸ ಅವತಾರ ವೀಕ್ಷಕರಿಗೆ ಬಿಗ್​ ಶಾಕ್​ ನೀಡಿದೆ. ಶಿವಣ್ಣ ಹಳ್ಳಿ ಹೈದ ಅಲ್ವೇ ಅಲ್ಲ. ಶಿವಣ್ಣ ಮುಗ್ಧ ಅಂತೂ ಖಂಡಿತ ಅಲ್ಲ. ಅಣ್ಣಯ್ಯನ ಹಿಂದಿನ ರಹಸ್ಯ ಬಯಲಾಗಲಿದೆ. ರೋಚಕ ಪ್ರೊಮೋ ಧಕೇದಾರ್​​ ಸಂಚಿಕಗಳನ್ನ ಹೊತ್ತು ತರೋ ಸೂಚನೆ ನೀಡಿದೆ.

ಇದನ್ನೂ ಓದಿ: ಟ್ರೋಫಿ ಅಲ್ಲ, ಕಲೆ ಮುಖ್ಯ.. ಸರಿಗಮಪ ಲಹರಿಗೆ ಒಲಿದು ಬಂತು ಬಂಪರ್ ಆಫರ್..

publive-image

ಹೌದು, ಈಗಷ್ಟೇ ಅಮೃತಧಾರೆಗೆ ಕಾಲಿಟ್ಟದ್ದ ಶಿವು ಅಲ್ಲಿನ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿದ್ದ. ಆ ಅದ್ಭುತವಾದ ಸಂಚಿಕೆಗಳನ್ನ ಎಂಜಾಯ್​ ಮಾಡ್ತಿದ್ದ ವೀಕ್ಷಕರಿಗೆ ಅಣ್ಣಯ್ಯ ಧಾರಾವಾಹಿಯ ಹೊಸ ಪ್ರೋಮೋ ಹಬ್ಬ ನೀಡಿದೆ. ಶಿವು ಅಮ್ಮನನ್ನ ಹುಡುಗಿ ಜೈಲಿಗೆ ಹೋಗಿರೋ ಪಾರುನ ಭೇಟಿ ಆಗೋಕೆ ಶಿವು ಬರ್ತಾನೆ. ಅಲ್ಲಿನ ಜೈಲಿನ ವಾತಾವರಣ ನೋಡ್ತಿದ್ದಾಗೆ ಶಿವು ಪ್ಲ್ಯಾಶ್​ಬ್ಯಾಕ್ ಸ್ಟೋರಿ ಬರುತ್ತೆ.

publive-image

ಇನ್ನೂ, ಅಣ್ಣಯ್ಯ ಸೀರಿಯಲ್​ ಪ್ರೋಮೋ ನೆಕ್ಸ್ಟ್​ ಲೇವಲ್​ನಲ್ಲಿದ್ದು, ವಿಕಾಶ್​ ಉತ್ತಯ್ಯ ಮಾಸ್​ ಲುಕ್​ನಲ್ಲಿ ಸಖತ್ ಆಗಿ ಕಾಣ್ತಿದ್ದಾರೆ. ಕೋಟಿಗೊಬ್ಬ ಸಿನಿಮಾದ ಝಲಕ್​ ನೋಡಿದ್ದಂಗೆ ಆಯ್ತು ಎಂದು ಫ್ಯಾನ್ಸ್ ಹೋಗಳ್ತಿದ್ದಾರೆ. ಅಣ್ಣಯ್ಯನ ಪ್ಲ್ಯಾಶ್​ಬ್ಯಾಕ್​ ಸ್ಟೋರಿಯ ರೋಮಾಂಚನಕಾರಿ ಸಂಚಿಕೆಗಳನ್ನ ಕಣ್ತುಂಬಿಕೊಳ್ಳಲು ವೀಕ್ಷಕರು ಕಾಯುತ್ತಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment