ಗುರುಪ್ರಸಾದ್ ಆ*ತ್ಮಹತ್ಯೆ ಪ್ರಕರಣಕ್ಕೆ ಟ್ವಿಸ್ಟ್.. ಉಸಿರುಗಟ್ಟಿ ಡೈರೆಕ್ಟರ್​ ಸಾ*ವು

author-image
AS Harshith
Updated On
ನಿರ್ದೇಶಕ ಗುರುಪ್ರಸಾದ್ ಪ್ರಕರಣದ ತನಿಖೆ ಚುರುಕು.. ಮಹತ್ವದ ಹೇಳಿಕೆ ಪಡೆದ ಪೊಲೀಸರು
Advertisment
  • ‘ಮಠ’ದ ಗುರು ಸಾ*ವಿನ ಸತ್ಯದ ಹುಡುಕಾಟ.. ತನಿಖೆ ಚುರುಕು!
  • ಮೃತದೇಹ ಶಿಫ್ಟ್ ಬಳಿಕ ಫ್ಲ್ಯಾಟ್​​ನಲ್ಲಿ ಜಾಲಾಡಿದ್ದ ಪೊಲೀಸರು
  • ಕಿಟಕಿ ಕರ್ಟನ್ ಮೇಲೆ ಪರದೆ ಕಟ್ಟಿದ್ದರಿಂದ ವಾಸನೆ ಬಂದಿಲ್ಲ

ಮಠ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಯ ಸುತ್ತ ಅನುಮಾನದ ಹುತ್ತ ಬೆಳೆದಿದೆ. ಸಾಲ ಮಾಡಿಕೊಂಡು ಸತ್ತಿರಬಹುದು ಅನ್ನೋದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹೊರಬಂದಿದೆ. ಆದ್ರೆ ಗುರುಪ್ರಸಾದ್ ಸಾಲ ಮಾಡಿದ್ರೂ ಹೆದರುವವರಲ್ಲ ಅಂತ ಪತ್ನಿ ಹೇಳಿದ್ದು ಪ್ರಕರಣಕ್ಕೆ ಟ್ವಿಸ್ಟ್ ನೀಡಿದೆ. ತನಿಖೆ ಚುರುಕಾಗಿದ್ದು ಗುರುಪ್ರಸಾದ್​ ಬಳಸ್ತಿದ್ದ ಮೊಬೈಲ್, ಟ್ಯಾಬ್ ವಶಕ್ಕೆ ಪಡೆದು ಎಫ್​ಎಸ್​​ಎಲ್​ಗೆ ಕಳುಹಿಸಿದ್ದಾರೆ.

ಚಂದನವನದ ಮಠದ ಸೃಷ್ಟಿಕರ್ತ. ವಿಭಿನ್ನ ಚಿತ್ರಗಳನ್ನು ನೀಡಿದ ಸ್ಪೆಷಲ್ ಡೈರೆಕ್ಟರ್. ರಂಗನಾಯಕನ ಪರಿಚಯಿಸಿದ ಪ್ರತಿಭಾವಂತ. ಎದ್ದೇಳು ಮಂಜುನಾಥ ಅನ್ನೋ ಡಿಫರೆಂಟ್ ಕಥೆ ಹೇಳಿದ್ದ ಗುರುಪ್ರಸಾದ್ ನಿಜ ಜೀವನದಲ್ಲಿ ದುರಂತ ಅಂತ್ಯ ಕಂಡಿದ್ದಾರೆ. ಇವರ ಸಾವಿನ ಸುತ್ತ ಅನುಮಾನಗಳು ಹುತ್ತ ಬೆಳೆದಿದ್ದು, ಇದನ್ನು ಬೇಧಿಸಲು ಹೊರಟ ಪೊಲೀಸರಿಗೆ ಕೆಲವೊಂದು ಇಂಟ್ರೆಸ್ಟಿಂಗ್​ ಅಂಶಗಳು ಲಭ್ಯವಾಗಿದೆ.

publive-image

ಪೊಲೀಸರ ಕೈ ಸೇರಿದ ಪೋಸ್ಟ್ ಮಾರ್ಟಂ ಪ್ರಾಥಮಿಕ ವರದಿ

ನಟ, ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣದ ತನಿಖೆ ಚುರುಕುಗೊಂಡಿದೆ. ಮಾದನಾಯಕಹಳ್ಳಿ ಠಾಣೆ ಪೊಲೀಸರು ಸ್ಪೆಷಲ್ ಡೈರೆಕ್ಟರ್ ಸಾವಿನ ನಿಗೂಢತೆಯನ್ನು ಭೇದಿಸುವ ಪ್ರಯತ್ನದಲ್ಲಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಕೂಡ ಪೊಲೀಸರ ಕೈಸೇರಿದೆ, ಗುರುಪ್ರಸಾದ್ ದೇಹದಲ್ಲಿ ಯಾವುದೇ ವಿಷಕಾರಿ ಅಂಶ ಪತ್ತೆಯಾಗಿಲ್ಲ, ಆದ್ರೆ ಉಸಿರುಗಟ್ಟಿ ಸಾವು ಅಂತ ವರದಿ ಹೇಳಿದೆ. ಹೀಗಾಗಿ ಗುರುಪ್ರಸಾದ್ ಆತ್ಮಹತ್ಯೆ ಪ್ರಕರಣ ಮತ್ತಷ್ಟು ಟ್ವಿಸ್ಟ್ ಪಡೆದಿದೆ.

‘ಗುರು’ ಸೂಸೈಡ್ ಮಿಸ್ಟ್ರಿ!

ಅಕ್ಟೋಬರ್ 29ರ ರಾತ್ರಿ ಗುರುಪ್ರಸಾದ್ ಆತ್ಮಹತ್ಯೆ ಮಾಡಿಕೊಂಡಿದ್ದರು ಅಂತ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ಅಂದು ಕಂಠಪೂರ್ತಿ ಕುಡಿದು ಬಳಿಕ ನೇಣಿಗೆ ಕೊರಳೊಡ್ಡಿದ್ದರು ಎನ್ನಲಾಗಿದೆ. ಇನ್ನು ಗುರುಪ್ರಸಾದ್ ಆತ್ಮಹತ್ಯೆಗೆ ಮುನ್ನ ಮಾಡಿದ್ದ ಪ್ಲಾನ್ ಬಯಲಾಗಿದೆ. ಆತ್ಮಹತ್ಯೆಗೂ ಮುನ್ನ ಹೊಸ ಹಗ್ಗ, ಪರದೆಗಳ ಖರೀದಿ ಮಾಡಿದ್ದು ಮನೆಯ ಡೋರ್, ಕಿಟಕಿ ಲಾಕ್ ಮಾಡಿದ್ದರು ಎನ್ನಲಾಗಿದೆ. ಹೀಗಾಗಿ ಕಿಟಕಿ ಕರ್ಟನ್ ಮೇಲೆ ಪರದೆ ಕಟ್ಟಿದ್ದರಿಂದ ವಾಸನೆ ಬಂದಿಲ್ಲ, 6 ದಿನಗಳ ಬಳಿಕ ವಾಸನೆ ಬಂದಿದ್ದು ಆತ್ಮಹತ್ಯೆ ವಿಚಾರ ಬಯಲಾಗಿದೆ. ಇನ್ನು ಮೃತದೇಹ ಶಿಫ್ಟ್ ಬಳಿಕ ಫ್ಲ್ಯಾಟ್​​ನಲ್ಲಿ ಜಾಲಾಡಿದ್ದ ಪೊಲೀಸರಿಗೆ ಯಾವುದೇ ಡೆತ್​​ನೋಟ್​​ ಪತ್ತೆಯಾಗಿರಲಿಲ್ಲ.

publive-image

ಇನ್ನು ಗುರುಪ್ರಸಾದ್ ಕಳೆದ ಆರು ತಿಂಗಳಿಂದ ಎರಡನೇ ಪತ್ನಿ ಬಿಟ್ಟು ಒಂಟಿಯಾಗಿದ್ದರು ಎನ್ನಲಾಗಿದೆ. 4 ಮೊಬೈಲ್​​ಗಳನ್ನು ಬಳಸುತ್ತಿದ್ದ ಗುರುಪ್ರಸಾದ್ ಎಲ್ಲವನ್ನೂ ಫ್ಲೈಟ್​ ಮೂಡ್​​ನಲ್ಲಿ ಇಡ್ತಾ ಇದ್ರು ಎನ್ನಲಾಗಿದೆ. ಮೊಬೈಲ್ ಆನ್ ಮಾಡಿದ್ರೆ ಸಾಲಗಾರರ ಕರೆಗಳು ನಿರಂತರವಾಗಿ ಬರ್ತಾ ಇದ್ವು, ಹೀಗಾಗಿ ಮನೆಯ ವೈಫೈ ಬಳಕೆ ಮಾಡಿಕೊಂಡು ವಾಟ್ಸಾಪ್ ಕಾಲ್ ಮಾಡ್ತಿದ್ರು ಎನ್ನಲಾಗಿದೆ, ಸದ್ಯ ಗುರುಪ್ರಸಾದ್ ಬಳಸ್ತಿದ್ದ ಫೋನ್, ಟ್ಯಾಬ್​​ಗಳನ್ನು ಎಫ್​​ಎಸ್​​ಎಲ್​ಗೆ ಕಳುಹಿಸಿಲಾಗಿದೆ. ಇನ್ನು ​​ಗುರುಪ್ರಸಾದ್ 3 ಕೋಟಿಗೂ ಅಧಿಕ ಸಾಲ ಮಾಡಿಕೊಂಡಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ.

ಒಟ್ಟಾರೆ ನಟ ನಿರ್ದೇಶಕ ಗುರುಪ್ರಸಾದ್ ಆತ್ಮಹತ್ಯೆಗೆ ಕೋಟಿ ಕೋಟಿ ಸಾಲ ಮಾಡಿಕೊಂಡಿದ್ದೇ ಕಾರಣ ಅನ್ನೋದು ಪ್ರಾಥಮಿಕ ತನಿಖೆಯಿಂದ ಹೊರಬಂದಿದೆ. ಆದ್ರೆ ಗುರುಪ್ರಸಾದ್ ಸಾವಿಗೆ ನಿಖರ ಕಾರಣ ಬೇರೆ ಏನಾದ್ರೂ ಇದ್ಯಾ ಅನ್ನೋದು ಪೊಲೀಸರ ಸಂಪೂರ್ಣ ತನಿಖೆ ಬಳಿಕವಷ್ಟೇ ಬಯಲಾಗಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment