ನಾಪತ್ತೆ ಆಗಿದ್ದ ಹರಿಯಾಣ ಮಾಡೆಲ್​ ಪ್ರಕರಣಕ್ಕೆ ಟ್ವಿಸ್ಟ್.. ಮಾಜಿ ಸ್ನೇಹಿತನ ಮೇಲೆ ಗುಮಾನಿ..

author-image
Ganesh
Updated On
ನಾಪತ್ತೆ ಆಗಿದ್ದ ಹರಿಯಾಣ ಮಾಡೆಲ್​ ಪ್ರಕರಣಕ್ಕೆ ಟ್ವಿಸ್ಟ್.. ಮಾಜಿ ಸ್ನೇಹಿತನ ಮೇಲೆ ಗುಮಾನಿ..
Advertisment
  • 2 ದಿನಗಳ ಹಿಂದೆ ನಾಪತ್ತೆ ಆಗಿದ್ದ ಮಾಡೆಲ್ ಶೀತಲ್
  • ಹಿಂದೆ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದ ಶೀತಲ್​
  • ಮಾಜಿ ಸ್ನೇಹಿತನಿಂದ ಮದುವೆ ಆಗುವಂತೆ ಒತ್ತಾಯ..

2 ದಿನಗಳ ಹಿಂದೆ ನಾಪತ್ತೆ ಆಗಿದ್ದ ಹರಿಯಾಣ ಮಾಡೆಲ್ ಶೀತಲ್ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಾಡೆಲ್​ ಆಗಿದ್ದ ಶೀತಲ್​ ಮೂಲತಃ ಖಲೀಲಾ ಮಜ್ರಾ ಗ್ರಾಮದವರು.. ಹರ್ಯಾನ್ವಿ ಆಲ್ಬಂಗಳ ಮೂಲಕ ಜನಪ್ರಿಯರಾಗಿದ್ದರು. ಪಾಣಿಪತ್​ನ ಸತ್ಕರ್ತನ್ ಕಾಲೋನಿಯಲ್ಲಿ ತಮ್ಮ ಸಹೋದರಿ ಜೊತೆ ವಾಸವಾಗಿದ್ದರು. ಜೂನ್​ 14ರಂದು ಅಹರ್​ ಚಿತ್ರೀಕರಣಕ್ಕಾಗಿ ಮಾಡೆಲ್​ ಶೀತಲ್​ ತೆರಳಿದ್ದರು. ಆದ್ರೆ ಶೂಟಿಂಗ್​ಗೆ ಹೋಗಿದ್ದ ಶೀತಲ್​ ಮನೆಗೆ ವಾಪಸ್ ಬಂದಿರಲಿಲ್ಲ. ಹೀಗಾಗಿ ಆಕೆಯ ಸಹೋದರಿ ಪೊಲೀಸರಿಗೆ ದೂರು ನೀಡಿದ್ದರು.

ದೂರು ದಾಖಲಿಸಿಕೊಂಡು ಪೊಲೀಸರು ತನಿಖೆ ಶುರು ಮಾಡಿದ್ದಾರೆ. ಮರು ದಿನ ಅಂದ್ರೆ ಸೋಮವಾರ ಖಾಂಡಾ ಗ್ರಾಮದ ಮೂಲಕ ಹಾದುಹೋಗುವ ಕಾಲುವೆಯಲ್ಲಿ ಯುವತಿಯ ಮೃತದೇಹ ಪತ್ತೆ ಆಗಿತ್ತು. ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮಾಡೆಲ್​ ಅವರದ್ದೇ ಎಂದು ಗೊತ್ತಾಗಿ, ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಕತ್ತು ಸೀಳಿ ನಾಲೆಗೆ ಎಸೆದಿರುವ ಶಂಕೆ ವ್ಯಕ್ತವಾಗಿದೆ. ಇನ್ನು ನಾಲೆಯಲ್ಲಿ ಕಾರು ಕೂಡ ಸಿಕ್ಕಿದ್ದು, ಅದರ ಚಾಲಕ ಈಜಿ ದಡ ಸೇರಿದ್ದಾನೆ.

ಇದನ್ನೂ ಓದಿ: ಇರಾನ್​ ಟಿವಿ ಚಾನಲ್​ ಮೇಲೆ ಇಸ್ರೇಲ್​ ಕ್ಷಿಪಣಿ ದಾಳಿ.. ನ್ಯೂಸ್ ಓದುತ್ತಿದ್ದ ಆ್ಯಂಕರ್​ ಜಸ್ಟ್​ ಮಿಸ್​.. VIDEO​​

publive-image

ಮಾಡೆಲ್​ನ ಸ್ನೇಹಿತನಿಗಾಗಿ ಬಲೆ ಬೀಸಿದ ಪೊಲೀಸರು

ಇನ್ನು ಮಾಡೆಲ್​ ಶೀತಲ್​ನ ಸಹೋದರಿ ನೀಡಿರುವ ದೂರಿನ ಪ್ರಕಾರ, ಶೀತಲ್​ಗೆ ಅವಳ ಮಾಜಿ ಸ್ನೇಹಿತ ಸುನಿಲ್​ ತನ್ನ ಜೊತೆ ಬರುವಂತೆ ಬಲವಂತ ಮಾಡ್ತಿದ್ದಾನೆಂದು ಹೇಳಿದ್ದಳಂತೆ.. ಹೀಗಾಗಿ ಆತನ ಮೇಲೆ ಅನುಮಾನ ವ್ಯಕ್ತವಾಗಿದೆ.

ಏನು ಮಾಡ್ತಿದ್ದರು..?

ಶೀತಲ್​ ಈ ಹಿಂದೆ ಹೋಟೆಲ್​ನಲ್ಲಿ ಕೆಲಸ ಮಾಡುತ್ತಿದ್ದಳು. ಆಗ ಶೀತಲ್​ಗೆ ಸುನಿಲ್​ ಎಂಬಾತನ ಪರಿಚಯವಾಗಿತ್ತು. ತನ್ನನ್ನು ಮದುವೆ ಆಗುವಂತೆ ಶೀತಲ್​ಗೆ ಸುನಿಲ್​ ಒತ್ತಾಯಿಸಿದ್ದನಂತೆ. ಆದ್ರೆ ಸುನಿಲ್​ಗೆ ಈಗಾಗಲೇ ಮದುವೆ ಆಗಿ ಮಕ್ಕಳೂ ಇದ್ದಾವೆ. ಈ ವಿಷಯ ತಿಳಿದು ಶೀತಲ್​ ಹೋಟೆಲ್​ ಕೆಲಸ ಬಿಟ್ಟು, ಸುನಿಲ್​ನಿಂದ ದೂರ ಆಗಿದ್ದಳು. ಆದರೂ ಸುನಿಲ್​ ಆಕೆಯ ಹಿಂದೆ ಬಿದ್ದು ಒತ್ತಾಯಿಸುತ್ತಿದ್ದ ಎಂಬ ಆರೋಪ ಕೇಳಿಬಂದಿದೆ.

ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮಾಡೆಲ್​ನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಪೊಲೀಸರು ಎಲ್ಲಾ ಆಯಾಮಗಳಲ್ಲೂ ತನಿಖೆ ನಡೆಸುತ್ತಿದ್ದು, ಶೀಲತ್​ನ ಸ್ನೇಹಿತನಿಗಾಗಿ ಬಲೆ ಬೀಸಿದ್ದಾರೆ.

ಇದನ್ನೂ ಓದಿ: ಮಂಗಳೂರಲ್ಲಿ ಮತ್ತೆ 4 ಮನೆ ಮೇಲೆ ಗುಡ್ಡ ಕುಸಿತ.. ಎಲ್ಲರ ಜೀವ ಉಳಿಸಿತು ಅದೊಂದು ಮದುವೆ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment