ಬಾ ನಲ್ಲ ಮಧುಚಂದ್ರಕೆ.. ಮೇಘಾಲಯ ಹನಿಮೂನ್ ಹ*ತ್ಯೆ ಕೇಸ್‌ನ ಇಂಚಿಂಚೂ ಮಾಹಿತಿ ಬಹಿರಂಗ

author-image
admin
Updated On
ಮದುವೆಯಾದ 3 ದಿನಕ್ಕೆ ಸ್ಕೆಚ್‌.. ಮೇಘಾಲಯ ಹನಿಮೂನ್ ಕೇಸ್‌ನ ಸಂಪೂರ್ಣ ಮಾಹಿತಿ ಬಹಿರಂಗ
Advertisment
  • ಮೇಘಾಲಯದ ಚಿರಾಪುಂಜಿಗೆ ಇಂದೋರ್‌ನ ದಂಪತಿ ಹನಿಮೂನ್
  • ಮದುವೆಯಾದ ಒಂದೇ ವಾರದಲ್ಲಿ ಹನಿಮೂನ್‌ಗೆಂದು ಬಂದಿದ್ದರು
  • ಮೇಘಾಲಯದಲ್ಲಿ ರಾಜ ರಘುವಂಶಿ ಶವ ಪತ್ತೆಯಾದ ಮೇಲೆ ಪತ್ನಿ ನಾಪತ್ತೆ

ಮೇಘಾಲಯದ ಚಿರಾಪುಂಜಿ ಬಳಿ ಇಂದೋರ್‌ನ ದಂಪತಿ ಹನಿಮೂನ್ ಹಾಗೂ ಪತಿ ಹ*ತ್ಯೆ ಕೇಸ್‌ಗೆ ರೋಚಕ ಟ್ವಿಸ್ಟ್ ಸಿಕ್ಕಿದೆ. ಪತಿ ಹ*ತ್ಯೆ ಕೇಸ್‌ನಲ್ಲಿ ನಾಪತ್ತೆಯಾಗಿದ್ದ ಪತ್ನಿಯೇ‌ ಮಾಸ್ಟರ್ ಮೈಂಡ್ ಆಗಿದ್ದು, ಮೇಘಾಲಯ ಪೊಲೀಸರಿಗೆ ಶರಣಾಗಿದ್ದಾರೆ.

ಕಳೆದ ಜೂನ್ 6ರ ಶುಕ್ರವಾರ ರಾಜ‌ ರಘುವಂಶಿ ಶವ ಪತ್ತೆಯಾಗಿತ್ತು. ಹನಿಮೂನ್‌ಗೆ ಬಂದಿದ್ದ ರಾಜ‌ ರಘುವಂಶಿಯನ್ನು ಹ*ತ್ಯೆ ಮಾಡಿದ್ದು, ಪತ್ನಿ ನಾಪತ್ತೆಯಾಗಿದ್ದರು. ಈ ಕೇಸ್‌ನಲ್ಲಿ ಪತ್ನಿಯೇ ಸುಪಾರಿ ಕೊಟ್ಟಿದ್ದು, ಮಧ್ಯಪ್ರದೇಶದಿಂದ ನಾಲ್ಕು ಮಂದಿ ಹಂತಕರು ಮೇಘಾಲಯಕ್ಕೆ ಕರೆಸಿದ್ದು ಬೆಳಕಿಗೆ ಬಂದಿದೆ.

publive-image

ಮದುವೆಯಾದ ಒಂದೇ ವಾರದಲ್ಲಿ ಹನಿಮೂನ್‌ಗೆಂದು ಹೋದ ರಾಜ ರಘುವಂಶಿ ದುರಂತ ಅಂತ್ಯವಾಗಿದ್ದು, ಪೊಲೀಸರು ನಾಲ್ವರು ಹಂತಕರ ಪೈಕಿ ಮೂವರನ್ನು ಬಂಧಿಸಿದ್ದಾರೆ. ರಾಜ ರಘುವಂಶಿ ಕುಟುಂಬಸ್ಥರು ಈ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಹನಿಮೂನ್ ಹ*ತ್ಯೆಗೆ ಕಾರಣವೇನು?
ಪತಿ‌ ರಾಜ‌ ರಘುವಂಶಿ ಹ*ತ್ಯೆ ಮಾಡಿದ ಪತ್ನಿ ಸೋನಮ್‌ಗೆ ರಾಜ ಕುಶ್ವಾಹಾ ಎಂಬಾತನ ಜೊತೆಗೆ ಅಕ್ರಮ ಸಂಬಂಧ ಇತ್ತು. ಈ ಕಾರಣದಿಂದಲೇ ಪತಿಯನ್ನು ಪತ್ನಿ ಹ*ತ್ಯೆಗೈದಿದ್ದಾರೆ. ಈ ಪ್ರಕರಣದಲ್ಲಿ ಸೋನಮ್‌ಗೆ ಸಹಾಯ ಮಾಡಿದ ಆಕಾಶ್, ವಿಶಾಲ್, ರಾಜ್ ಕುಶ್ವಾಹಾ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಆನಂದ್ ಎಂಬ ಆರೋಪಿಯ ಬಂಧನ ಬಾಕಿ ಇದೆ.

publive-image

ಸೋನಮ್ ಫೋನ್ ನಂಬರ್ ಅನ್ನು ಮೇಘಾಲಯ ಪೊಲೀಸರು ಟ್ರ್ಯಾಕ್ ಮಾಡಿದ್ದರು. ಈ ವೇಳೆ ಆರೋಪಿ ರಾಜ ಕುಶ್ವಾಹಾ ಜೊತೆ ಸೋನಮ್‌ ಗಂಟೆಗಟ್ಟಲೆ ಮಾತನಾಡಿರುವುದು ಬೆಳಕಿಗೆ ಬಂದಿತ್ತು. ಈ ಸುಳಿವಿನಿಂದ ಇದೊಂದು ಹನಿಮೂನ್ ಹ*ತ್ಯೆ ಅನ್ನೋದು ಖಚಿತವಾಗಿತ್ತು.

ರಾಜ ರಘುವಂಶಿ ಹ*ತ್ಯೆಯಲ್ಲಿ ಸೋನಮ್ ಬಾಯ್ ಫ್ರೆಂಡ್ ರಾಜು ಕುಶ್ವಾಹಾ ಕೂಡ ಭಾಗಿಯಾಗಿದ್ದ. ಹಂತಕರಿಗೆ ಸೋನಮ್ ಹಣ ನೀಡಿ ಕೊ*ಲೆ ಮಾಡಿಸಿರುವುದು ಬೆಳಕಿಗೆ ಬಂದಿದೆ. ಮೇಘಾಲಯ ಪೊಲೀಸರು ಕೊಟ್ಟ ಮಾಹಿತಿ‌ ಆಧಾರದ ಮೇಲೆ ಮಧ್ಯಪ್ರದೇಶ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: ಹನಿಮೂನ್​​ಗೆ ಬಂದ ಜೋಡಿ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್​.. ಭಾರೀ ಸಂಚಲನ ಸೃಷ್ಟಿಸಿದ್ದ ಕೇಸ್​ಗೆ ಪತ್ನಿಯೇ ವಿಲನ್..! 

ಉತ್ತರಪ್ರದೇಶದ ಗಾಜಿಪುರದ ಡಾಭಾಕ್ಕೆ ಬಂದು ಸೋನಮ್‌ ಕುಟುಂಬದ ಜೊತೆಗೆ ಮಾತನಾಡಿದ್ದರು. ಡಾಭಾದವರ ಫೋನ್ ಪಡೆದು ತನ್ನ ಕುಟುಂಬದ ಜೊತೆಗೆ ಮಾತುಕತೆ ನಡೆಸಿದ್ದರು. ಬಳಿಕ ಗಾಜಿಪುರದ ಪೊಲೀಸ್ ಠಾಣೆಗೆ ಹೋಗಿ ಸೋನಮ್‌ ಶರಣಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment