‘ಬಾ ನಲ್ಲ ಮಧುಚಂದ್ರಕೆ’ ಪ್ರಕರಣ​.. ಆರೋಪಿ ಸೋನಂ ವಿರುದ್ಧ ಮತ್ತೊಂದು ಗಂಭೀರ ಆರೋಪ

author-image
Ganesh
Updated On
‘ಬಾ ನಲ್ಲ ಮಧುಚಂದ್ರಕೆ’ ಪ್ರಕರಣ​.. ಆರೋಪಿ ಸೋನಂ ವಿರುದ್ಧ ಮತ್ತೊಂದು ಗಂಭೀರ ಆರೋಪ
Advertisment
  • ಹನಿಮೂನ್​​ಗೆ ಹೋಗುವ ಮುನ್ನ ಇಟ್ಟ ಡಿಮ್ಯಾಂಡ್ ಏನಾಗಿತ್ತು..?
  • ತಾಯಿ ಮುಂದೆ ಅಚ್ಚರಿ ಸಂಗತಿ ಹೇಳಿಕೊಂಡಿದ್ದ ರಾಜಾ ರಘುವಂಶಿ
  • ರಾಜಾ ರಘುವಂಶಿ ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಆರೋಪಿಗಳು

ಹನಿಮೂನ್​​ಗೆ ಹೋಗಿ ಪತ್ನಿಯಿಂದಲೇ ಹತ್ಯೆಯಾದ ರಾಜಾ ರಘುವಂಶಿ ಪ್ರಕರಣಕ್ಕೆ ಸಂಬಂಧಿಸಿ ಮತ್ತೊಂದು ಅಪ್​ಡೇಟ್ಸ್​ ಸಿಕ್ಕಿದೆ. ಹನಿಮೂನ್​​ಗೆ ಹೋಗುವ ಮೊದಲು ರಾಜಾ ರಘುವಂಶಿ ಚಿನ್ನದ ಆಭರಣಗಳನ್ನು ತೊಟ್ಟುಕೊಂಡು ಹೋಗಿದ್ದರು.

ಆದರೆ ಮೃತದೇಹದ ಮೇಲೆ ಯಾವುದೇ ಆಭರಣಗಳಿರಲಿಲ್ಲ. ಅದೆಲ್ಲ ಆರೋಪಿ ಪತ್ನಿ ಸೋನಂ ಕಿತ್ಕೊಂಡಿದ್ದಾರೆ ಎಂದು ರಘುವಂಶಿ ಕುಟುಂಬಸ್ಥರು ಆರೋಪಿಸಿದ್ದಾರೆ. ಚಿನ್ನದ ಉಂಗುರ, ಚಿನ್ನದ ಸರ, ಬ್ರಾಸ್​ಲೆಟ್, ಪರ್ಸ್​ನಲ್ಲಿದ್ದ ಹಣ ಎಲ್ಲವೂ ನಾಪತ್ತೆಯಾಗಿದೆ ಎಂದು ಕುಟುಂಬ ಆರೋಪಿಸಿದೆ.

ಇದನ್ನೂ ಓದಿ: ಬಾ ನಲ್ಲ ಮಧುಚಂದ್ರಕೆ.. ಮೇಘಾಲಯ ಹನಿಮೂನ್ ಹ*ತ್ಯೆ ಕೇಸ್‌ನ ಇಂಚಿಂಚೂ ಮಾಹಿತಿ ಬಹಿರಂಗ

publive-image

ಈ ಸಂಬಂಧ ರಘುವಂಶಿಯ ಸೋದರ ದೂರು ದಾಖಲಿಸಿದ್ದು, ಎಫ್​ಐಆರ್​ನಲ್ಲಿ ಈ ವಿಚಾರ ಉಲ್ಲೇಖವಾಗಿದೆ. ಕೃತ್ಯ ನಡೆಸಿದವರು ರಾಜ ರಘುವಂಶಿ ಆಭರಣಗಳನ್ನು ಲೂಟಿ ಮಾಡಿದ್ದಾರೆ. ತನ್ನ ಪತ್ನಿ ಸೋನಂ ತಾನು ಎಲ್ಲ ಆಭರಣಗಳನ್ನು ಧರಿಸಿಕೊಂಡು ಹನಿಮೂಮ್​ಗೆ ಬರಬೇಕೆಂದು ಬಯಸಿದ್ದಾಳೆ. ಅದಕ್ಕೆ ಚಿನ್ನಾಭರಣಗಳ ಸಮೇತ ಹನಿಮೂನ್​ಗೆ ಹೋಗೋದಾಗಿ ಪ್ಲಾನ್ ಮಾಡಿದ್ದೇವೆ ಎಂದು ರಾಜು ರಘುವಂಶಿ ತನ್ನ ತಾಯಿ ಬಳಿ ಹಿಂದೆ ಹೇಳಿಕೊಂಡಿದ್ದನಂತೆ.

publive-image

ಮತ್ತೊಂದು ಕಡೆ ರಾಜಾ ರಘುವಂಶಿಯ ಅಂತ್ಯ ಸಂಸ್ಕಾರದ ವಿಡಿಯೋವನ್ನು ಸಹೋದರಿ ಬಿಡುಗಡೆ ಮಾಡಿದ್ದಾರೆ. ಅಂತ್ಯಕ್ರಿಯೆ ವೇಳೆ ಆರೋಪಿಗಳಾದ ಸೋನಂ, ಆಕೆಯ ಪ್ರಿಯಕರ ರಾಜು ಕುಶ್ವಾಹಾ ಕೂಡ ಭಾಗಿಯಾಗಿದ್ದಾರೆ.

ಇದನ್ನೂ ಓದಿ: ಹನಿಮೂನ್‌ಗೆ ಒನ್ ವೇ ಟಿಕೆಟ್‌; ಮೇಘಾಲಯದಲ್ಲಿ ‘ಬಾ ನಲ್ಲ ಮಧುಚಂದ್ರಕೆ’ ಹೈಡ್ರಾಮಾ ಹೇಗಿತ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment