/newsfirstlive-kannada/media/post_attachments/wp-content/uploads/2025/03/rajath-vinay8.jpg)
ಜಸ್ಟ್​ 25 ಸೆಕೆಂಡ್​ ಒಂದೇ ಒಂದು ರೀಲ್ಸ್ ಎಷ್ಟೆಲ್ಲಾ ಕಂಟಕ ತರುತ್ತೆ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ರೀಲ್ಸ್‌ಗಾಗಿ ತುಕ್ಕು ಹಿಡಿದ ಮಚ್ಚು ಹಿಡಿದು ಸೋಷಿಯಲ್​ ಮೀಡಿಯಾದಲ್ಲಿ ವಿಡಿಯೋ​ ಶೇರ್ ಮಾಡಿಕೊಂಡಿದ್ದ ​ಬಿಗ್​ ​ಬಾಸ್​ ಮಾಜಿ ಸ್ಪರ್ಧಿಗಳಿಬ್ಬರ ಕೇಸ್​ಗೆ ಬಿಗ್​ ಟ್ವಿಸ್ಟ್​ ಸಿಕ್ಕಿದೆ.
ಇದನ್ನೂ ಓದಿ:ರಕ್ಷಕ್​ಗೆ ಕಪ್ಪು ಮಸಿ ಹಾಕ್ತೀವಿ.. ಹಿಂದೂ ಮುಖಂಡ ಖಡಕ್​ ಎಚ್ಚರಿಕೆ!
/newsfirstlive-kannada/media/post_attachments/wp-content/uploads/2025/03/Rajath-Vinay-gowda-reels-Case-2.jpg)
ಸೋಷಿಯಲ್ ಮೀಡಿಯಾದಲ್ಲಿ ಲಾಂಗ್ ಹಿಡಿದು ರೀಲ್ಸ್ ಮಾಡಿದ ಬುಜ್ಜಿ ಹಾಗೂ ವಿನಯ್ ಗೌಡ ಮೂರು ದಿನ ಪೊಲೀಸ್ ಕಸ್ಟಡಿಗೆ ಎಂದು ಕೋರ್ಟ್​ ಆದೇಶ ಹೊರಡಿಸಿದೆ. ಇಂದು ಪೊಲೀಸರು ವಿನಯ್​ ಗೌಡ ಹಾಗೂ ರಜತ್​ರನ್ನು 24ನೇ ಎಸಿಎಂಎಂ ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದರು. ವಾದ ಪ್ರತಿವಾದ ಆಲಿಸಿದ ಕೋರ್ಟ್ ಇಬ್ಬರನ್ನೂ 3 ದಿನ ಪೊಲೀಸ್ ಕಸ್ಟಡಿಗೆ ನೀಡಿದೆ ಹಾಗೂ ಕಸ್ಟಡಿ ಅವಧಿ ಮುಗಿದ ಬಳಿಕ ಅಂದರೆ, ಮಾರ್ಚ್ 28ರಂದು ಸಂಜೆ 4 ಗಂಟೆಗೆ ಇಬ್ಬರನ್ನು ಕೋರ್ಟ್​ಗೆ ಹಾಜರುಪಡಿಸುವಂತೆ ಸೂಚಿಸಿದೆ.
/newsfirstlive-kannada/media/post_attachments/wp-content/uploads/2025/03/rajath-vinay9.jpg)
ನಿನ್ನೆ, ವಿಚಾರಣೆಗೆ ಹಾಜರಾದ ಇಬ್ಬರನ್ನು ಬಸವೇಶ್ವರ ನಗರ ಪೊಲೀಸರು ನಾಗರಬಾವಿಯ ಅಕ್ಷಯ್ ಸ್ಟುಡಿಯೋಗೆ ಕರೆ ತಂದು ರೀಲ್ಸ್ ಮಾಡಿದ ಜಾಗದಲ್ಲಿ ಸ್ಥಳ ಮಹಜರು ಮಾಡಿಸಿದ್ರು. ರೀಲ್ಸ್ ಮಾಡಿದ ಉದ್ದೇಶ ಏನು? ಏಕೆ ರೀಲ್ಸ್ ಮಾಡಲಾಯ್ತು ಅನ್ನೋ ಪ್ರಶ್ನೆಗಳನ್ನ ಕೇಳಿ ಮಾಹಿತಿ ಪಡೆದುಕೊಂಡ್ರು. ಅದ್ರೆ ರೀಲ್ಸ್​ನಲ್ಲಿ ಬಳಸಿದ ಮಚ್ಚು ಎಲ್ಲಿದೆ ಅನ್ನೋದು ಮಾತ್ರ ಗೊತ್ತಾಗಿಲ್ಲ. ಅಕ್ಷಯ್ ಸ್ಟುಡಿಯೋದಲ್ಲೂ ಒಂದೂವರೆಗಂಟೆ ಪರಿಶೀಲನೆ ನಡೆಸಿದ ಪೊಲೀಸಲು ಬರಿಗೈಲೇ ವಾಪಸ್​ ಆಗಿದ್ದರು. ಸದ್ಯ ರೀಲ್ಸ್​ನಲ್ಲಿ ಕಾಣಿಸಿಕೊಂಡಿದ್ದ ಆ ಮಚ್ಚು ಎಲ್ಲಿದೆ ಅಂತ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us