Rapido ಬೈಕ್‌ ಹತ್ತಿದ್ದ ಯುವತಿಗೆ ಕಪಾಳಮೋಕ್ಷ ಕೇಸ್‌ಗೆ ಟ್ವಿಸ್ಟ್.. ತಪ್ಪು ಮಾಡಿದವರು ಯಾರು? VIDEO

author-image
admin
Updated On
Rapido ಬೈಕ್‌ ಹತ್ತಿದ್ದ ಯುವತಿಗೆ ಕಪಾಳಮೋಕ್ಷ ಕೇಸ್‌ಗೆ ಟ್ವಿಸ್ಟ್.. ತಪ್ಪು ಮಾಡಿದವರು ಯಾರು? VIDEO
Advertisment
  • ವಿಡಿಯೋ ವೈರಲ್ ಆಗುತ್ತಿದ್ದಂತೆ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್‌
  • ಯುವಕ ಹೊಡೆದಿರೋ ಏಟಿಗೆ ರಸ್ತೆ ಮೇಲೆಯೇ ಬಿದ್ದ ಯುವತಿ
  • ಈ ವಿಡಿಯೋ ನೋಡಿದವ್ರಿಗೆ ಅಯ್ಯೋ ಪಾಪ ಹುಡುಗಿ ಅನ್ನಿಸಿತ್ತು

ಬೆಂಗಳೂರಲ್ಲಿ ಬೇಗ ಆಫೀಸ್‌ಗೆ ಹೋಗಬೇಕು ಅಂತ ಱಪಿಡೋ ಹತ್ತಿದ್ದ ಯುವತಿ ಹಾಗೂ ಬೈಕ್ ಚಾಲಕ ನಡುರಸ್ತೆಯಲ್ಲೇ ಜಗಳ ಇಳಿದಿದ್ರು. ಎಲ್ಲರೂ ನೋಡ್ತಿರೋವಾಗ್ಲೇ ಚಾಲಕ ಯುವತಿಗೆ ಕಪಾಳಮೋಕ್ಷ ಮಾಡಿದ್ದ. ಈ ವಿಡಿಯೋ ವೈರಲ್ ಆಗಿ ಸುದ್ದಿಯಾಗ್ತಿದ್ದಂತೆ ಸಂಜೆ ವೇಳೆಗೆ ಇಬ್ಬರ ಕಿತ್ತಾಟಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ.


">June 16, 2025

ಈ ವಿಡಿಯೋ ನೋಡಿದವ್ರಿಗೆ ಅಯ್ಯೋ ಪಾಪ ಹುಡುಗಿ. ಇವ್ನಿಗೆ ಏನ್ ಬಂದಿರೋದು ಹೀಗೆ ಯುವತಿ ಮೇಲೆ ಹಲ್ಲೆ ಮಾಡ್ಬಿಟ್ನಲ್ಲಾ ಅಂತಾ ಅಂದು ಕೊಳ್ಳೋರೇ ಜಾಸ್ತಿ. ಯುವಕ ಹೊಡೆದಿರೋ ಏಟಿಗೆ ರಸ್ತೆ ಮೇಲೆಯೇ ಯುವತಿ ಬಿದ್ದು ಬಿಟ್ಟಿದ್ದಳು.

publive-image

ಅಸಲಿ ವಿಷ್ಯ ಏನಪ್ಪಾ ಅಂದ್ರೆ. ಜೂನ್‌ 14ರಂದು ಯುವತಿ ಬಿಟಿಎಂನಿಂದ ಜಯನಗರಕ್ಕೆ ಱಪಿಡೋ ಬೈಕ್ ಬುಕ್ ಮಾಡಿದ್ದಳು. ಬೈಕ್ ಚಾಲಕ ಟ್ರಾಫಿಕ್ ರೂಲ್ಸ್‌, ಲೊಕೇಷನ್ ಫಾಲೋ ಮಾಡಿರ್ಲಿಲ್ವಂತೆ. ಇದನ್ನ ಕೇಳಿದ್ಕೆ ಹೀಗೆ ನಡು ರಸ್ತೆಯಲ್ಲೇ ಹಲ್ಲೆ ಮಾಡಿದ್ದಾನೆ ಅನ್ನೋದು ಯುವತಿ ಆರೋಪ.

publive-image

ಯುವತಿ ಮೇಲೆ ಹಲ್ಲೆ ಮಾಡಿದ ವಿಡಿಯೋ ಸಖತ್‌ ಸುದ್ದಿಯಾಗ್ತಿದ್ದಂತೆ ಱಪಿಡೋ ಬೈಕ್ ಚಾಲಕ ತಾನ್ಯಾಕೆ ಯುವತಿಗೆ ಹೊಡೆದೆ ಅನ್ನೋ ಕಾರಣ ಕೊಟ್ಟಿದ್ದಾನೆ. ನಾನು ಟ್ರಾಫಿಕ್ ಇದೆ ಆಫೀಸ್‌ಗೆ ಹೋಗೋಕೆ ಲೇಟ್ ಆಗುತ್ತೆ ಅಂತ ಶಾರ್ಟ್‌ ಕಟ್‌ನಲ್ಲಿ ಹೋದೆ. ಸರಿಯಾದ ಸಮಯಕ್ಕೆ ಹೋದ ಮೇಲೆ ಯುವತಿ ಜಗಳ ಮಾಡಿ ಹಲ್ಲೆ ಮಾಡಿದ್ದಾರೆ.

ಇದನ್ನೂ ಓದಿ: ಹುಡುಗ RCB ಫ್ಯಾನ್, ಹುಡುಗಿ ಯಶ್ ಅಭಿಮಾನಿ; ಡ್ಯಾನ್ಸರ್ ದುರಂತದ ಈ ಸ್ಟೋರಿ ಹೃದಯವಿದ್ರಾವಕ 

ಇಷ್ಟೆಲ್ಲಾ ಆದ್ಮೇಲೆ.. ಸಂಜೆ ವೇಳೆ ಯುವತಿ ಮೇಲಿನ ಹಲ್ಲೆ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್‌ ಸಿಕ್ಕಿದೆ. ಎಲ್ಲಾರೂ ಯುವತಿ ಪಾಪ.. ಱಪಿಡೋ ಬೈಕ್ ಚಾಲಕ ಯುವತಿ ಮೇಲೆ ಹಲ್ಲೆ ಮಾಡಿದ್ದು ಅಂತ ಅಂದುಕೊಳ್ತಿರೋವಾಗಲೇ ಯುವತಿಯ ಅಸಲಿ ಮುಖ ಬಿಚ್ಚಿಟ್ಟಿದ್ದು ಸಿಸಿಟಿವಿ.

publive-image

ಈ ಸಿಸಿಟಿವಿ ಸಿಗೋಕು ಮುಂಚೆ ಬೈಕ್ ಚಾಲಕನೇ ಹಲ್ಲೆ ಮಾಡಿದ್ದು ಅಂತಾ ಆರೋಪವಿತ್ತು. ಆದ್ರೀಗ ಮೊದ್ಲು ಹಲ್ಲೆ ಮಾಡಿದ್ದೇ ಯುವತಿ ಅನ್ನೋದು ಬಯಲಾಗಿದೆ. ಅದೇನೇ ಇರ್ಲಿ. ತಪ್ಪು ಇಬ್ಬರದ್ದು ಇದೆ. ಮಾತಲ್ಲಿ ಬಗೆಹರಿಯೋ ಮ್ಯಾಟ್ರನ್ನ ಹೀಗೆ ನಡುರಸ್ತೆಯಲ್ಲಿ ಕಿತ್ತಾಡಿಕೊಂಡಿದ್ದು ವಿಪರ್ಯಾಸ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment