ಮಡೆನೂರು ಮನು ಲೈಂಗಿಕ ದೌರ್ಜನ್ಯ ಕೇಸ್​ಗೆ ಟ್ವಿಸ್ಟ್​.. ಸಂತ್ರಸ್ತೆಗೆ ನೋಟಿಸ್ ಕೊಡಲು ಮುಂದಾದ ಪೊಲೀಸ್

author-image
Veena Gangani
Updated On
ಮಡೆನೂರು ಮನು ಮೇಲೆ ಶಿವಣ್ಣ ಫ್ಯಾನ್ಸ್ ಆಕ್ರೋಶ.. ಕನ್ನಡ ಕಿರುತೆರೆ, ಸ್ಯಾಂಡಲ್‌ವುಡ್‌ನಿಂದಲೇ ಬ್ಯಾನ್?
Advertisment
  • ರಾತ್ರಿಯಿಡೀ ನಟ ಮನುವಿನ ವಿಚಾರಣೆ ಮಾಡಿದ ಪೊಲೀಸರು
  • ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಅಧಿಕಾರಿಗಳಿಂದ ತೀವ್ರ ತನಿಖೆ
  • ಸಂತ್ರಸ್ತೆ ಮಾಡಿದ ಆರೋಪದಂತೆ ಖಾಸಗಿ ವಿಡಿಯೋ ಬಗ್ಗೆ ಹುಡುಕಾಟ

ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಹಾಸ್ಯ ನಟ ಮಡೆನೂರು ಮನು ಅವರನ್ನು ಬೆಂಗಳೂರಿನ ಅನ್ನಪೂರ್ಣೇಶ್ವರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೆ ಒಳಗಾಗಿರುವ ನಟನನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: ಖಾಸಗಿ ಫೋಟೋ, ವಿಡಿಯೋ ಇಟ್ಕೊಂಡು ನಟಿಗೆ ಬ್ಲಾಕ್ ಮೇಲ್.. ಮಡೆನೂರು ಮನು ಮೇಲೆ ಸಾಲು ಸಾಲು ಆರೋಪ

ಇದೇ ಕೇಸ್​ಗೆ ಸಂಬಂಧಿಸಿದಂತೆ ರಾತ್ರಿಯಿಡೀ ಅನ್ನಪೂರ್ಣೇಶ್ವರಿ ನಗರ ಪೊಲೀಸರು ತೀವ್ರ ವಿಚಾರಣೆ ಮಾಡಿದ್ದಾರೆ. ಸಂತ್ರಸ್ತೆ ನೀಡಿದ ಆರೋಪದಂತೆ ಖಾಸಗಿ ವೀಡಿಯೋ ಬಗ್ಗೆ ತನಿಖೆ ನಡೆಸಿದ್ದಾರೆ. ಡ್ರಿಂಕ್ಸ್ ಮಾಡಿಸಿ ಪ್ರಜ್ಞೆ ತಪ್ಪಿಸಿ ಖಾಸಗಿ ವಿಡಿಯೋ ಮಾಡಿದ್ದಾರಾ ಅಂತಲೂ ಪೊಲೀಸರು ತನಿಖೆ ನಡೆಸಿದ್ದಾರೆ.

ಆದ್ರೆ, ಮಡೆನೂರು ಮನು ಮೊಬೈಲ್ ಪರಿಶೀಲನೆ ಮಾಡಿದ್ರು ಯಾವುದೇ ಖಾಸಗಿ ವಿಡಿಯೋ ಪತ್ತೆಯಾಗಿಲ್ಲ. ಇಬ್ಬರು ಜೊತೆಯಲ್ಲಿ ರಿಯಾಲಿಟಿ ಶೋ ಸೆಟ್​ನಲ್ಲಿ ತೆಗೆಸಿಕೊಂಡಿರೋ ಪೋಟೋಗಳು ಪತ್ತೆಯಾಗಿದ್ದು ಬಿಟ್ಟರೇ ಅಶ್ಲೀಲವಾದಂತಹ, ಇಬ್ಬರು ಖಾಸಗಿಯಾಗಿರೋ ಯಾವುದೇ ಪೋಟೋ ಹಾಗೂ ವೀಡಿಯೋ ಪತ್ತೆಯಾಗಿಲ್ಲ. ಹೀಗಾಗಿ ಪೊಲೀಸರು ಸಂತ್ರಸ್ತೆಗೆ ಮತ್ತೆ ನೊಟೀಸ್ ನೀಡಲು ಮುಂದಾಗಿದ್ದಾರೆ.

ಇದನ್ನೂ ಓದಿ: ಖಾಸಗಿ ಶಾಲೆಯಲ್ಲೂ ಹೆಣ್ಮಕ್ಕಳಿಗೆ ಮೀಸಲಾತಿ.. 50 ಪರ್ಸೆಂಟ್ ಮೀಸಲು ನಿಯಮ ಏನ್ ಹೇಳುತ್ತದೆ..?

ಖಾಸಗಿ ವಿಡಿಯೋ ಇರೋದು ಹೇಗೆ ಗೊತ್ತಾಯ್ತು? ನಿಮಗೆ ಆ ವಿಡಿಯೋ ಯಾವಾಗದರೂ ತೋರಿಸಿದ್ರಾ? ಯಾವ ವಿಡಿಯೋ ಇಟ್ಟುಕೊಂಡು ಬ್ಲಾಕ್ ಮೇಲ್ ಮಾಡಿದ್ರು? ಹೀಗೆ ಆರೋಪಗಳಿಗೆ ಪೂರಕವಾದ ಸಾಕ್ಷ್ಯಗಳನ್ನು ಕೊಡಲು ಪೊಲೀಸರು ನೋಟಿಸ್ ನೀಡುವುದಕ್ಕೆ ಮುಂದಾಗಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment