ಪುಷ್ಪ-2 ನೋಡುವ ಆತುರ, ಕರ್ನಾಟಕದಲ್ಲೂ ದುರಂತ.. 19 ವರ್ಷಕ್ಕೆ ಬದುಕು ಮುಗಿಸಿದ ಯುವಕ

author-image
Ganesh
Updated On
ಪುಷ್ಪ-2 ನೋಡುವ ಆತುರ, ಕರ್ನಾಟಕದಲ್ಲೂ ದುರಂತ.. 19 ವರ್ಷಕ್ಕೆ ಬದುಕು ಮುಗಿಸಿದ ಯುವಕ
Advertisment
  • ಪುಷ್ಪ-2 ಚಿತ್ರ ವೀಕ್ಷಣೆಯ ಅವಸರದಲ್ಲಿ ಅನಾಹುತ
  • ಹೈದರಾಬಾದ್​​ನಲ್ಲಿ ಘೋರ ಕಾಲ್ತುಳಿತ ಸಂಭವಿಸಿತ್ತು
  • ಪುಷ್ಪ-2 ಚಿತ್ರದ ರಿಲೀಸ್ ದಿನ ಇಬ್ಬರು ಪ್ರಾಣಬಿಟ್ಟಿದ್ದಾರೆ

ಚಿಕ್ಕಬಳ್ಳಾಪುರ: ‘ಪುಷ್ಪ 2: ದಿ ರೂಲ್’ ಸಿನಿಮಾ ವಿಶ್ವದಾದ್ಯಂತ ತೆರೆ ಕಂಡಿದೆ. ಆಘಾತಕಾರಿ ವಿಚಾರ ಏನೆಂದರೆ ಅಲ್ಲು ಅರ್ಜುನ್ ಅವರ ಸಿನಿಮಾ ವೀಕ್ಷಣೆ ಮಾಡಬೇಕು ಎಂಬ ಅವಸರದಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.

ಹೈದರಾಬಾದ್​ನಲ್ಲಿ ನಡೆದ ಫ್ಯಾನ್​ ಶೋ ಕಾರ್ಯಕ್ರಮದ ವೇಳೆ ಕಾಲ್ತುಳಿದ ಸಂಭವಿಸಿ 39 ವರ್ಷದ ರೇವತಿ ಅನ್ನೋರು ಜೀವ ಬಿಟ್ಟಿದ್ದಾರೆ. ಇದೇ ದುರ್ಘಟನೆಯಲ್ಲಿ ಆಕೆಯ 9 ವರ್ಷದ ಮಗ ತೇಜ್ ಹಾಗೂ 7 ವರ್ಷದ ಸಾನ್ವಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಇದೀಗ ಕರ್ನಾಟಕದಲ್ಲೂ ದುರಂತವೊಂದು ಸಂಭವಿಸಿದೆ.

ಇದನ್ನೂ ಓದಿ:ಪುಷ್ಪಾ-2 ವಿಶ್ವದಾದ್ಯಂತ ರಿಲೀಸ್.. ಫಸ್ಟ್​ ಡೇ, ಫಸ್ಟ್​ ಶೋ ನೋಡಿ ಅಭಿಮಾನಿಗಳು ಥ್ರಿಲ್..!

publive-image

ಪುಷ್ಪ 2 ಸಿನಿಮಾ ನೋಡಲು ತೆರಳುತ್ತಿದ್ದ ಯುವಕ ರೈಲಿಗೆ ಸಿಲುಕಿ ಪ್ರಾಣ ಬಿಟ್ಟಿದ್ದಾನೆ. ದೊಡ್ಡಬಳ್ಳಾಪುರ ಹೊರವಲಯದ ಬಾಶೆಟ್ಟಿಹಳ್ಳಿ ರೈಲ್ವೇ ಸೇತುವೆ ಬಳಿ ಅನಾಹುತ ಸಂಭವಿಸಿದೆ. ಮೃತ ಯುವಕನನ್ನು ಆಂಧ್ರ ಪ್ರದೇಶದ ಪಾಲಕೊಂಡ ನಿವಾಸಿ ಪ್ರವೀಣ್ (19 ವರ್ಷ) ಎಂದು ಗುರುತಿಸಲಾಗಿದೆ. ಈತ ಬ್ಯಾಂಕ್ ಸರ್ಕಲ್ ಬಳಿಯ ಕಾರ್ಖಾನೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ.

ಇಂದು ಬಿಡುಗಡೆಯಾದ ಪುಷ್ಪಾ 2 ಸಿನಿಮಾ ನೋಡಲು ಬೆಳಗ್ಗೆ ಗೆಳೆಯರೊಂದಿಗೆ ಮನೆಯಿಂದ ಹೊರಟಿದ್ದ. ರೈಲ್ವೆ ಹಳಿ ದಾಟುವ ವೇಳೆ ಏಕಾಏಕಿ ರೈಲು ಬಂದು ಡಿಕ್ಕಿ ಹೊಡೆದು ದುರ್ಘಟನೆ ಸಂಭವಿಸಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ರೈಲ್ವೆ ಹೊರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಇದನ್ನೂ ಓದಿ:ಪೈರಸಿ ಬಲೆಗೆ ಬಿದ್ದ ಪುಷ್ಪರಾಜ್.. ಬಾಕ್ಸ್​ ಆಫೀಸ್ ಗಳಿಕೆಗೆ ಬೀಳುತ್ತಾ ಕೊಡಲಿ ಪೆಟ್ಟು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment