newsfirstkannada.com

VIDEO: ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಸ್ಥಿತಿ ಗಂಭೀರ

Share :

Published March 20, 2024 at 7:56am

    ಇಬ್ಬರು ಬೈಕ್​ ಸವಾರರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿ

    ಗಂಭೀರವಾಗಿ ಗಾಯಕೊಂಡ ಇಬ್ಬರು ಥಕ್ಕಲೈ ಆಸ್ಪತ್ರೆಗೆ ದಾಖಲು

    ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆ

ಚೆನ್ನೈ: ನಾವು ಎಷ್ಟೇ ಜಾಗರೂಕತೆಯಿಂದ ವಾಹನವನ್ನು ಚಲಾಯಿಸಿಕೊಂಡು ಹೋದರೂ ಸಣ್ಣ ಪುಟ್ಟ ತೊಂದರೆ ಸಂಭವಿಸುತ್ತವೆ. ಆದರೆ ಅವಸರದಲ್ಲಿ ವಾಹನವನ್ನು ಚಲಾಯಿಸಿಕೊಂಡು ಹೋದರೆ ಅಪಘಾತ ಕಟ್ಟಿಟ್ಟ ಬುತ್ತಿ. ಅದೇ ರೀತಿ ಅತಿ ವೇಗವಾಗಿ ಬಂದ ಎರಡು ಬೈಕ್​​​ಗಳು ಭೀಕರವಾಗಿ ಡಿಕ್ಕಿ ಹೊಡೆದ ಘಟನೆ ಕನ್ಯಾಕುಮಾರಿ ಜಿಲ್ಲೆಯಲ್ಲಿ ನಡೆದಿದೆ. ಈ ಅಪಘಾತದ ಭಯಾನಕ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಎರಡು ಬೈಕ್​ಗಳು ವಿರುದ್ಧ ದಿಕ್ಕಿನಿಂದ ಬರುತ್ತಿದ್ದವು. ಈ ವೇಳೆ ಇಬ್ಬರು ಬೈಕ್​ ಸವಾರರ ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿದೆ. ಈ ಪರಿಣಾಮ ಓರ್ವ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಅಪಘಾತದ ತೀವ್ರತೆಗೆ ಎರಡು ಬೈಕ್​ಗಳು ಸಂಪೂರ್ಣ​ವಾಗಿ ನುಜ್ಜುಗುಜ್ಜಾಗಿದೆ.

ಇಬ್ಬರಿಗೆ ಗಂಭೀರ ಗಾಯವಾಗಿದ್ದು ಕೂಡಲೇ ಸ್ಥಳೀಯರು ಥಕ್ಕಲೈ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ​ ಸಂಬಂಧ ಥಕ್ಕಲೈ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಬೈಕ್​ಗಳ ನಡುವೆ ಮುಖಾಮುಖಿ ಡಿಕ್ಕಿ; ಓರ್ವ ಸ್ಥಳದಲ್ಲೇ ಸಾವು, ಮತ್ತಿಬ್ಬರಿಗೆ ಸ್ಥಿತಿ ಗಂಭೀರ

https://newsfirstlive.com/wp-content/uploads/2024/03/accident-16.jpg

Load More