ಎರಡು ಬೈಕ್​ಗಳ ಮಧ್ಯೆ ಭೀಕರ ಮುಖಾಮುಖಿ ಡಿಕ್ಕಿ.. ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ

author-image
Bheemappa
Updated On
ಎರಡು ಬೈಕ್​ಗಳ ಮಧ್ಯೆ ಭೀಕರ ಮುಖಾಮುಖಿ ಡಿಕ್ಕಿ.. ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿ
Advertisment
  • ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಭೇಟಿ, ಪರಿಶೀಲನೆ
  • ರಾತ್ರಿ ವೇಳೆ ಹೋಗುವಾಗ ಸಂಭವಿಸಿದ ಬೈಕ್​ಗಳ ಆಕ್ಸಿಡೆಂಟ್​
  • ಬೈಕ್​ ಅಪಘಾತದಲ್ಲಿ ಗ್ರಾಮದ ಓರ್ವ ವ್ಯಕ್ತಿ ಸಾವು, ಆಕ್ರಂದನ

ಬೆಳಗಾವಿ: ಎರಡು ಬೈಕ್​​ಗಳ ಮಧ್ಯೆ ಭೀಕರ ಮುಖಾಮುಖಿ ಡಿಕ್ಕಿ ಸಂಭವಿಸಿ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಅಥಣಿ ತಾಲೂಕಿನ ಕೋಹಳ್ಳಿ ಗ್ರಾಮದಲ್ಲಿ ನಡೆದಿದೆ.

ಕೋಹಳ್ಳಿ ಗ್ರಾಮದ ನಿವಾಸಿ ಲಾಯಪ್ಪ ಪುಂಡಲಿಕ ಮರಗಾಳೆ (45) ಮೃತಪಟ್ಟವರು. ರಾತ್ರಿ 10 ಗಂಟೆ ಸುಮಾರಿಗೆ ಎರಡು ಬೈಕ್​ ನಡುವೆ ಭಯಾನಕವಾದ ಡಿಕ್ಕಿ ಸಂಭವಿಸಿದೆ. ಇದರಿಂದ ಓರ್ವ ಬೈಕ್​ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇನ್ನೊಬ್ಬ ಸವಾರ ಮಲ್ಲಪ್ಪ ಗುರಬಸು ಮಂಟೂರು ಎನ್ನುವರು ಗಂಭೀರವಾಗಿ ಗಾಯಗೊಂಡಿದ್ದು ಗಾಯಾಳುವನ್ನು ಅಥಣಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇದನ್ನೂ ಓದಿ: KL ರಾಹುಲ್ ಹೇಳಿದ್ದೇನು.. ಕೋಚ್ ಹುದ್ದೆಯಿಂದ ಮಾಜಿ ಕ್ರಿಕೆಟರ್ ಹಿಂದೆ ಸರಿಯಲು ಕನ್ನಡಿಗ ಕಾರಣನಾ?

ರಾತ್ರಿ ಬೈಕ್​ಗಳ ನಡುವೆ ಡಿಕ್ಕಿ ಶಬ್ಧ ಕೇಳುತ್ತಿದ್ದಂತೆ ಸ್ಥಳೀಯರೆಲ್ಲ ಓಡಿ ಬಂದು ಗಾಯಾಳುವನ್ನು ತಕ್ಷಣ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಐಗಳಿ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment