Advertisment

ಯುಗಾದಿ ಅಮವಾಸ್ಯೆ ದಿನ ವಿದ್ರಾವಕ ಘಟನೆ; ದೇವರ ಪಲ್ಲಕ್ಕಿ ಹೊತ್ತು ಸ್ನಾನ ಮಾಡುವಾಗ ಇಬ್ಬರು ಮಕ್ಕಳು ಸಾವು

author-image
Ganesh
Updated On
ಯುಗಾದಿ ಅಮವಾಸ್ಯೆ ದಿನ ವಿದ್ರಾವಕ ಘಟನೆ; ದೇವರ ಪಲ್ಲಕ್ಕಿ ಹೊತ್ತು ಸ್ನಾನ ಮಾಡುವಾಗ ಇಬ್ಬರು ಮಕ್ಕಳು ಸಾವು
Advertisment
  • ಅಪ್ಪ-ಅಮ್ಮನ ಜೊತೆ ಬಂದಿದ್ದ ಇಬ್ಬರು ಮುದ್ದಾದ ಮಕ್ಕಳು
  • ಕೊಲ್ಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲು
  • ಹುಚ್ಚಮ್ಮ ದೇವಿ ಜಾತ್ರಾ ಮಹೋತ್ಸವದ ವೇಳೆ ದುರ್ಘಟನೆ

ವಿಜಯಪುರ: ಸ್ನಾನ ಮಾಡಲು ತೆರಳಿದ ಇಬ್ಬರು ಬಾಲಕರು ನದಿ ಪಾಲಾದ ಘಟನೆ ಯುಗಾದಿ ಅಮಾವಾಸ್ಯೆಯಂದು ನಡೆದಿದೆ.

Advertisment

ಜಿಲ್ಲೆಯ ಕೊಲ್ಲಾರ ಬಳಿಯ ಕೃಷ್ಣಾ ನದಿಯಲ್ಲಿ ದುರ್ಘಟನೆ ಸಂಭವಿಸಿದೆ. ಕಾರಜೋಳ ಗ್ರಾಮದ ಸುದೀಪ (ಪಪ್ಪು) ದೊಡ್ಡಮನಿ (12), ಶ್ರೀಧರ ದೊಡ್ಡಮನಿ (10) ಎಂಬ ಬಾಲಕರು ನದಿಪಾಲಾಗಿದ್ದಾರೆ.

ಇದನ್ನೂ ಓದಿ: ‘ನನ್ನ ಪಾಲಿಗೆ ಆಕೆ ಸತ್ತಂತೆ..’ ಮಗಳು ಬದುಕಿರುವಾಗಲೇ ಶ್ರದ್ಧಾಂಜಲಿ ಸಲ್ಲಿಸಿ ಹೆತ್ತ ತಂದೆ ಆಕ್ರೋಶ

ಯುಗಾದಿ ಅಮಾವಾಸ್ಯೆ ಹಿನ್ನೆಲೆಯಲ್ಲಿ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ ಹುಚ್ಚಮ್ಮ ದೇವಿ ಜಾತ್ರಾ ಮಹೋತ್ಸವ ಆಯೋಜನೆ ಆಗಿತ್ತು. ಕಾರಜೋಳ ಗ್ರಾಮದಿಂದ ಕೃಷ್ಣಾ ನದಿಗೆ ದೇವಿಯ ಪಲ್ಲಕ್ಕಿ ಹೊತ್ತು, ದೇವಿಯ ಸ್ನಾನ ಮಾಡಿಸಿಕೊಂಡು ಬರಲು ಗ್ರಾಮಸ್ಥರು ತೆರಳಿದ್ದರು.

Advertisment

ಇದನ್ನೂ ಓದಿ: ಸಾವಿನಲ್ಲೂ ಒಂದಾದ ದಂಪತಿ, ಹೃದಯ ವಿದ್ರಾವಕ ಘಟನೆಯಲ್ಲಿ 5 ಮಂದಿ ದಾರುಣ ಸಾವು

ಮೃತಬಾಲಕರು ತಂದೆ-ತಾಯಿಗಳ ಜೊತೆ ನದಿಗೆ ತೆರಳಿದ್ದ ವೇಳೆಯೇ ದುರಂತ ಸಂಭವಿಸಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಸ್ಥಳೀಯರ ಸಹಾಯದಿಂದ ಇಬ್ಬರು ಬಾಲಕರ ಶವ ಹೊರಕ್ಕೆ ತೆಗೆಯಲಾಗಿದೆ. ಕೊಲ್ಲಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment