ಕೆರೆಗೆ ಈಜಲು ಹೋಗಿದ್ದ ಬಾಲಕರು ನಿಧನ.. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

author-image
Bheemappa
Updated On
ಕೆರೆಗೆ ಈಜಲು ಹೋಗಿದ್ದ ಬಾಲಕರು ನಿಧನ.. ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ
Advertisment
  • ಭಾನುವಾರ ಆಗಿದ್ದರಿಂದ ಕೆರೆ ಬಳಿ ಹೋಗಿದ್ದಾಗ ಘಟನೆ
  • ಮಕ್ಕಳನ್ನ ಕಳೆದುಕೊಂಡು ರೋಧಿಸುತ್ತಿರುವ ತಂದೆ, ತಾಯಿ
  • ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದ ಘಟನೆ

ಹಾವೇರಿ: ಭಾನುವಾರ ಶಾಲೆ ಇಲ್ಲದ ಕಾರಣ ಕೆರೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಜೀವ ಬಿಟ್ಟಿದ್ದಾರೆ. ಈ ಘಟನೆಯು ಜಿಲ್ಲೆಯ ಹಾನಗಲ್ ತಾಲೂಕಿನ ಕೊಪ್ಪರಶಿಕೊಪ್ಪ ಗ್ರಾಮದಲ್ಲಿ ನಡೆದಿದೆ.

ಕೊಪ್ಪರಶಿಕೊಪ್ಪ ಗ್ರಾಮದ ನಿಖಿಲ ನಾಗೋಜಿ (11), ಧನುಷ್ ಚೊಳಪ್ಪನವರ್ (13) ಪ್ರಾಣ ಕಳೆದುಕೊಂಡ ಬಾಲಕರು. ನಿತ್ಯ ಶಾಲೆಗೆ ಹೋಗುತ್ತಿದ್ದ ಈ ಇಬ್ಬರು ಬಾಲಕರು ಭಾನುವಾರ ಆಗಿದ್ದರಿಂದ ಇಂದು ಶಾಲೆಗೆ ಹೋಗಿರಲಿಲ್ಲ. ಹೀಗಾಗಿ ಕೆರೆ ಬಳಿಗೆ ಹೋಗಿದ್ದಾರೆ. ಈ ವೇಳೆ ಆಟವಾಡುತ್ತಿದ್ದ ಬಾಲಕರು ಈಜಲೆಂದು ಕೆರೆಗೆ ಇಳಿದಿದ್ದಾರೆ.

ಇದನ್ನೂ ಓದಿ:IND vs PAK; ಪಂದ್ಯ ವೀಕ್ಷಿಸುತ್ತಾ ಅಭಿಷೇಕ್, ತಿಲಕ್ ಎಂಜಾಯ್.. ಬೂಮ್ರಾಗೆ ಪ್ರಶಸ್ತಿ ಪ್ರದಾನ

ಆದರೆ ಕೆರೆಯ ನೀರಲ್ಲಿ ಈಜಲು ಬಾರದೇ ಬಾಲಕರು ಮುಳುಗಿ ಜೀವ ಬಿಟ್ಟಿದ್ದಾರೆ. ಇನ್ನು ಮಾಹಿತಿ ತಿಳಿಯುತ್ತಿದ್ದಂತೆ ಜನರು ಓಡೋಡಿ ಕರೆ ಬಳಿಗೆ ಬಂದಿದ್ದಾರೆ. ತಮ್ಮ ಮಕ್ಕಳನ್ನ ಕಳೆದುಕೊಂಡ ಕುಟುಂಬಸ್ಥರ ಆಕ್ರಂದ ಮುಗಿಲು ಮುಟ್ಟಿದೆ. ಹಾನಗಲ್ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment