newsfirstkannada.com

ಪೋಷಕರೇ ಎಚ್ಚರ.. ಶಾಲೆಗೆ ರಜೆ ಎಂದು ನೀರಿನ ಹೊಂಡಕ್ಕೆ ಹೋಗಿದ್ದ ಇಬ್ಬರು ಬಾಲಕರು ಸಾವು

Share :

Published October 10, 2023 at 1:11pm

Update October 10, 2023 at 7:08pm

    ಶಾಲೆಗೆ ದಸರಾ ರಜೆ ಇದ್ದ ಹಿನ್ನೆಲೆಯಲ್ಲಿ ಜಮೀನಿನ ಕಡೆ ಹೋಗಿದ್ದರು

    ನೀರಿನ ಹೊಂಡದ ಬಳಿ ತೆರಳಿದ್ದಾಗ ಒಬ್ಬ ಬಾಲಕ ಕಾಲು ಜಾರಿರುವ ಶಂಕೆ

    ನೀರಿಗೆ ಬಿದ್ದಿದ್ದ ಸಹೋದರನ ರಕ್ಷಣೆಗೆ ಹೋಗಿದ್ದ ಮತ್ತೊಬ್ಬ ಬಾಲಕ ಸಾವು

ಬೀದರ್: ನೀರಿನ ಹೊಂಡಕ್ಕೆ ಬಿದ್ದು ಸಹೋದರರಿಬ್ಬರು ಸಾವನ್ನಪ್ಪಿರುವ ದಾರುಣ ಘಟನೆ ಬೀದರ್ ತಾಲೂಕಿನ ಬೇಮಳಖೇಡ ಗ್ರಾಮದಲ್ಲಿ ನಡೆದಿದೆ. ಗಣೇಶ್(14), ಸಾಯಿನಾಥ್(16) ಮೃತಪಟ್ಟ ಸಹೋದರರು.

ಇಬ್ಬರು ಸಹೋದರರು ಶಾಲೆಗೆ ದಸರಾ ರಜೆ ಇದ್ದ ಹಿನ್ನೆಲೆಯಲ್ಲಿ ಜಮೀನಿನ ಕಡೆ ಹೋಗಿದ್ದಾರೆ. ಬಹಿರ್ದೆಸೆಗೆ ತೆರಳಿ ನೀರಿನ ಹೊಂಡದ ಬಳಿ ತೆರಳಿದ್ದಾಗ ಒಬ್ಬ ಬಾಲಕ ಕಾಲು ಜಾರಿ ಬಿದ್ದಿರುವ ಶಂಕೆ ವ್ಯಕ್ತವಾಗಿದೆ.

ಇದನ್ನೂ ಓದಿ: ಹೊಸಕೋಟೆ ಧಮ್‌ ಬಿರಿಯಾನಿ ಹೋಟೆಲ್‌ಗಳ ಮೇಲೆ ರೇಡ್‌; ಕೋಟಿ, ಕೋಟಿ ನಗದು ಪತ್ತೆ!

ನೀರಿಗೆ ಬಿದ್ದಿದ್ದ ಸಹೋದರನ ರಕ್ಷಣೆಗೆ ಮತ್ತೊಬ್ಬ ಬಾಲಕ ಹೋಗಿದ್ದು ನೀರು ಪಾಲಾಗಿದ್ದಾರೆ ಎನ್ನಲಾಗಿದೆ. ಅಗ್ನಿ ಶಾಮಕದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಆಗಮಿಸಿದ್ದು, ಹೊಂಡದಲ್ಲಿ ಮೃತಪಟ್ಟ ಬಾಲಕರ ಶವವನ್ನು ಹೊರತೆಗೆಯಲಾಗಿದೆ. ಮೃತಪಟ್ಟ ಬಾಲಕರ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಸ್ಥಳಕ್ಕೆ ಬೇಮಳಖೇಡ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪೋಷಕರೇ ಎಚ್ಚರ.. ಶಾಲೆಗೆ ರಜೆ ಎಂದು ನೀರಿನ ಹೊಂಡಕ್ಕೆ ಹೋಗಿದ್ದ ಇಬ್ಬರು ಬಾಲಕರು ಸಾವು

https://newsfirstlive.com/wp-content/uploads/2023/10/death-2023-10-10T190753.957.jpg

Load More