/newsfirstlive-kannada/media/post_attachments/wp-content/uploads/2023/10/Bangalore-Childrens-Death.jpg)
ಬೆಂಗಳೂರು: ಮೀನು ಹಿಡಿಯಲು ಹೋದ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರೋ ಘಟನೆ ಡೈರಿ ಸರ್ಕಲ್ ಬಳಿ ನಡೆದಿದೆ. ನಿರ್ಮಾಣ ಹಂತದ ಕಟ್ಟಡದ ಬೇಸ್ಮೆಂಟ್ ಬಳಿ ನಡೆದಿರೋ ದುರ್ಘಟನೆ ಇದಾಗಿದ್ದು, ಅರ್ಷಲನ್ ಖಾನ್ ಹಾಗೂ ಅಮೀನ್ ಖಾನ್ ಮೃತಪಟ್ಟ ಅಣ್ಣ ತಮ್ಮಂದಿರು.
ಕಳೆದ ಶುಕ್ರವಾರ ಸಂಜೆಯಿಂದ ಈ ಇಬ್ಬರು ಬಾಲಕರು ನಾಪತ್ತೆಯಾಗಿದ್ದರು. ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಇಂದು ಬಾಲಕರ ಶವಗಳನ್ನ ಅಗ್ನಿಶಾಮಕ ಸಿಬ್ಬಂದಿ ಹೊರ ತೆಗೆದಿದ್ದಾರೆ.
ಮೃತಪಟ್ಟ ಅರ್ಷಲನ್ ಖಾನ್ ಹಾಗೂ ಅಮೀನ್ ಖಾನ್ ಅವರಿಗೆ 7 ಹಾಗೂ 9 ವರ್ಷ ವಯಸ್ಸು. ಬನ್ನೇರುಘಟ್ಟ ರಸ್ತೆಯ ಪಾಳು ಬಂಗಲೆ ಒಳಗೆ ಇರೋ ಬೇಸ್ಮೆಂಟ್‌ನಲ್ಲಿ ನೀರು ಇತ್ತು. ಆ ನೀರಿನಲ್ಲಿ ಮೀನು ಹಿಡಿಯಲು ಬಂದು ಈ ಮಕ್ಕಳು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ