ಮನೆಯೊಳಗೆ ಆಟವಾಡುತ್ತ ಕುಳಿತ್ತಿದ್ದಾಗ ಕುಸಿದು ಬಿದ್ದ ಮೇಲ್ಛಾವಣಿ.. ಉಸಿರು ಚೆಲ್ಲಿದ 2 ಮಕ್ಕಳು

author-image
Bheemappa
Updated On
ಮನೆಯೊಳಗೆ ಆಟವಾಡುತ್ತ ಕುಳಿತ್ತಿದ್ದಾಗ ಕುಸಿದು ಬಿದ್ದ ಮೇಲ್ಛಾವಣಿ.. ಉಸಿರು ಚೆಲ್ಲಿದ 2 ಮಕ್ಕಳು
Advertisment
  • ಆಸ್ಪತ್ರೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಶಾಸಕ
  • ಮಣ್ಣಿನಡಿ ಸಿಲುಕಿಕೊಂಡ ಮಕ್ಕಳನ್ನ ಹೊರ ತೆಗೆದ ಗ್ರಾಮಸ್ಥರು
  • ಹಳೆಯ ಮನೆ ಆಗಿದ್ದರಿಂದ ಮೇಲ್ಛಾವಣಿ ಕುಸಿದ ಶಂಕೆ ಇದೆ

ಬಾಗಲಕೋಟೆ: ಮನೆಯ ಮೇಲ್ಛಾವಣಿ ಕುಸಿದು ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಘಟನೆ ಇಳಕಲ್ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ನಡೆದಿದೆ.

ಗೀತಾ ಈಶ್ವರಯ್ಯ ಆದಾಪೂರ ಮಠ (12), ರುದ್ರಯ್ಯ ಈಶ್ವರಯ್ಯ ಆದಾಪೂರ ಮಠ (10) ಮೃತಪಟ್ಟ ಮಕ್ಕಳು. ಈ ಇಬ್ಬರು ಮನೆಯಲ್ಲಿ ಆಟ ಆಡುತ್ತಾ ಕುಳಿತುಕೊಂಡಿದ್ದರು. ಈ ವೇಳೆ ಮನೆಯ ಮೇಲ್ಛಾವಣಿ ಕುಸಿದು ಬಿದ್ದಿದೆ. ಹೀಗಾಗಿ ಮಣ್ಣಿನಡಿ ಸಿಲುಕಿಕೊಂಡ ಮಕ್ಕಳು ಮೇಲೆ ಬರಲು ಆಗದೇ ಅಲ್ಲೇ ಸಾವನ್ನಪ್ಪಿದ್ದಾರೆ. ಮನೆ ಹಳೆಯದ್ದಾಗಿದ್ದರಿಂದ ಮೇಲ್ಛಾವಣಿ ಕುಸಿದಿರುವ ಅನುಮಾನವಿದೆ.

ಇದನ್ನೂ ಓದಿ:VIDEO: ಮಹಿಳಾ ಪೊಲೀಸ್ ಮುಖ ನೋಡಿ ಗರಂ ಆದ ಪ್ರಜ್ವಲ್​ ರೇವಣ್ಣ; ಆಗಿದ್ದೇನು?

ಸದ್ಯ ಮಣ್ಣಿನಡಿಯಲ್ಲಿ ಸಿಲುಕಿದ್ದ ಮಕ್ಕಳ ಮೃತದೇಹಗಳನ್ನು ಹೊರ ತೆಗೆಯುತ್ತಿದ್ದಂತೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಗ್ರಾಮಸ್ಥರ ಸಹಾಯದಿಂದ ಮೃತದೇಹಗಳನ್ನು ಹೊತ ತೆಗೆಯಲಾಯಿತು. ಇನ್ನು ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಇಳಕಲ್ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಇನ್ನು ಆಸ್ಪತ್ರೆಗೆ ಶಾಸಕ ವಿಜಯಾನಂದ ಕಾಶಪ್ಪನವರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇಳಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment