/newsfirstlive-kannada/media/post_attachments/wp-content/uploads/2025/05/bagalakete.jpg)
ಚಿಕ್ಕಮಗಳೂರು: ಮದುವೆ ಆಗಿ ಇಬ್ಬರು ಮಕ್ಕಳು ಇದ್ರು ಮತ್ತೊಬ್ಬ ಪುರುಷನ ಜೊತೆಗೆ ಸೇರಿಕೊಂಡು ಪತಿಯನ್ನೇ ಪತ್ನಿ ಬಲಿ ಪಡೆದ ಘಟನೆ ಎನ್.ಆರ್.ಪುರ ತಾಲೂಕಿನ ಕರಗುಂದ ಬಳಿ ನಡೆದಿದೆ. ಸುದರ್ಶನ್ 35 ಮೃತ ಗಂಡ.
ಇದನ್ನೂ ಓದಿ: ರಾಜ್ಯದಲ್ಲಿ 47 ಕೊರೊನಾ ಕೇಸ್.. ಪಾಸಿಟಿವಿಟಿ ರೇಟ್ ಹೆಚ್ಚಾದ್ರೆ ಎಲ್ಲರಿಗೂ ಟೆನ್ಷನ್; ಯಾಕೆ ಗೊತ್ತಾ?
/newsfirstlive-kannada/media/post_attachments/wp-content/uploads/2025/05/bagalakete1.jpg)
ಸುದರ್ಶನ್ ಹಾಗೂ ಕಮಲ 10 ವರ್ಷದ ಹಿಂದೆ ಲವ್ ಮ್ಯಾರೇಜ್ ಆಗಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ 2 ಮಕ್ಕಳು ಕೂಡ ಇವೆ. 2 ಮಕ್ಕಳಾದ ಮೇಲೆ ಕಮಲಾಳಿಗೆ ಶಿವರಾಜ್ ಎಂಬುವವನ ಜೊತೆ ಪ್ರೇಮಾಂಕುರ ಆಗಿದೆ. ಲವರ್​ ಜೊತೆಗೆ ಇರಲು ಪತಿ ಅಡ್ಡಿಯಾಗುತ್ತಾನೆ ಅಂತ ಲವರ್​ಗೆ ಸುಫಾರಿ ನೀಡಿ ಮದ್ಯದಲ್ಲಿ ನಿದ್ದೆ ಮಾತ್ರೆ ಹಾಕಿ ಪತಿಯ ಕತ್ತು ಹಿಸುಕಿದ್ದಾಳೆ. ಪ್ರಾಣಬಿಟ್ಟ ಪತಿಯ ದೇಹವನ್ನು ಕರಗುಂದ ಬಸ್ ನಿಲ್ದಾಣದಲ್ಲಿ ಬಿಟ್ಟು ಹೋಗಿದ್ದಾರೆ.
ಇದಾದ ಬಳಿಕ ಗಂಡನ ಸಾವಾಗಿದೆ ಅಂತ ತಾನೇ ಖುದ್ದು ಠಾಣೆಗೆ ಹೋಗಿ ಕಮಲ ದೂರು ಕೊಟ್ಟಿದ್ದಾಳೆ. ಈ ಪ್ರಕರಣ ದಾಖಲಿಸಿಕೊಂಡ ಎನ್.ಆರ್.ಪುರ ಪೊಲೀಸರು ವಿಚಾರಣೆ ನಡೆಸಿದಾಗ ಅಸಲಿ ಸತ್ಯ ಆಚೆ ಬಂದಿದೆ. ಈ ಸಂಬಂಧ ಕಮಲಾ ಸೇರಿ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us