ಸಿಲಿಂಡರ್​ ಲಾರಿ- ಬೈಕ್​ ಮಧ್ಯೆ ಭೀಕರ ಡಿಕ್ಕಿ.. ರಕ್ತದ ಮಡುವಿನಲ್ಲೇ ಉಸಿರು ಚೆಲ್ಲಿದ ಗಂಡ-ಹೆಂಡತಿ

author-image
Bheemappa
Updated On
ಸಿಲಿಂಡರ್​ ಲಾರಿ- ಬೈಕ್​ ಮಧ್ಯೆ ಭೀಕರ ಡಿಕ್ಕಿ.. ರಕ್ತದ ಮಡುವಿನಲ್ಲೇ ಉಸಿರು ಚೆಲ್ಲಿದ ಗಂಡ-ಹೆಂಡತಿ
Advertisment
  • ಅಪಘಾತ ನಡೆದಿದ್ದ ರಸ್ತೆ ತುಂಬೆಲ್ಲ ರಕ್ತಸಿಕ್ತ ಆಗಿ ಹೋಗಿತ್ತು
  • ಕೆಲಸ ನಿಮಿತ್ತ ಬೈಕ್​ನಲ್ಲಿ ಹೋಗುವಾಗ ಬಂದ ಜವರಾಯ
  • ಹೊರ ವಲಯದ ರಿಂಗ್ ರಸ್ತೆಯಲ್ಲಿ ನಡೆದ ಭೀಕರ ಘಟನೆ

ಮೈಸೂರು: ಗ್ಯಾಸ್​ ಸಿಲಿಂಡರ್​ಗಳನ್ನು ಸಾಗಿಸುತ್ತಿದ್ದ ಲಾರಿ-ಬೈಕ್​ ನಡುವೆ ಭೀಕರ ಡಿಕ್ಕಿ ಸಂಭವಿಸಿ ಸ್ಥಳದಲ್ಲೇ ಇಬ್ಬರು ಸಾವನ್ನಪ್ಪಿರುವ ಘಟನೆ ಮೈಸೂರು ಹೊರ ವಲಯದ ರಿಂಗ್ ರಸ್ತೆಯಲ್ಲಿ ನಡೆದಿದೆ.

ಇದನ್ನೂ ಓದಿ:ಮಹಿಳೆಗೆ ಕಿಸ್ ಮಾಡಲು ಹೋದ ಜೋ ಬೈಡನ್.. US ಪ್ರೆಸಿಡೆಂಟ್ ಕನ್​​ಫ್ಯೂಸ್ ಆಗಿದ್ದೆಲ್ಲಿ?

ಮೈಸೂರಿನ ಕೂರ್ಗಳ್ಳಿ ಗ್ರಾಮದ ನಿವಾಸಿ ಚಂದ್ರು ಹಾಗೂ ಇವರ ಪತ್ನಿ ಪ್ರೇಮಾ ಮೃತಪಟ್ಟ ದಂಪತಿ. ಇವರು ಕೆಲಸದ ನಿಮಿತ್ತ ಬೈಕ್​ನಲ್ಲಿ ಹೋಗುತ್ತಿದ್ದರು. ಇದೇ ವೇಳೆ ಅದೇ ರಸ್ತೆಯಲ್ಲಿ ಗ್ಯಾಸ್​ ಸಿಲಿಂಡರ್​ಗಳನ್ನು ಸಾಗಿಸುತ್ತಿದ್ದ ಲಾರಿ ತೆರಳುತ್ತಿರುವಾಗ ಎರಡರ ನಡುವೆ ಭೀಕರ ಆಕ್ಸಿಡೆಂಟ್ ಸಂಭವಿಸಿದೆ. ಪರಿಣಾಮ ಬೈಕ್​ನಲ್ಲಿದ್ದ ದಂಪತಿ ನೆಲಕ್ಕೆ ಬಿದ್ದು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ.

ಇದನ್ನೂ ಓದಿ: ನಮ್ಮ ನಡುವಿನ ಗಾಸಿಪ್​​ ನಿಜ.. ಒಟ್ಟಾಗಿ ಬದುಕಲು ಆಗಲಿಲ್ಲ- ನಟಾಶಾ ಬಗ್ಗೆ ಹಾರ್ದಿಕ್ ಏನಂದರು?

ಅಪಘಾತದ ರಭಸಕ್ಕೆ ರಸ್ತೆಯೆಲ್ಲ ರಕ್ತಸಿಕ್ತವಾಗಿದೆ. ಆ ಮಟ್ಟಿಗೆ ಭಯಾನಕವಾಗಿ ಈ ಆಕ್ಸಿಡೆಂಟ್ ಸಂಭವಿಸಿದೆ. ಸದ್ಯ ಸ್ಥಳಕ್ಕೆ ವಾಣಿ ವಿಲಾಸ್ ಪುರಂ (ವಿವಿ ಪುರಂ) ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment