/newsfirstlive-kannada/media/post_attachments/wp-content/uploads/2024/09/madhyapradesh-Snake-Bite.jpg)
ಗ್ವಾಲಿಯರ್: ಮಧ್ಯಪ್ರದೇಶದಲ್ಲಿ ಭಕ್ತಿ, ಮೂಢನಂಬಿಕೆಯ ಪರಾಕಾಷ್ಠೆ ಮಿತಿ ಮೀರಿದ ಘಟನೆಯೊಂದು ಬೆಳಕಿಗೆ ಬಂದಿದೆ. ಗ್ವಾಲಿಯರ್ನ ಭೀತರ್ವಾರ್ ಬಳಿಯ ರಾರುವಾ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಇದನ್ನೂ ಓದಿ: 714 ಡೈಮಂಡ್.. ಜಗತ್ತಿನ ದುಬಾರಿ ವಾಚ್ ಧರಿಸಿದ ಸಲ್ಮಾನ್ ಖಾನ್; ಇದರ ಬೆಲೆ ಕೇಳಿದ್ರೆ ಶಾಕ್ ಆಗ್ತೀರಾ!
ಮಧ್ಯರಾತ್ರಿ 1ಗಂಟೆ ಸುಮಾರಿಗೆ ಮಲಗಿದ್ದ ತಾಯಿ, ಮಗನಿಗೆ ಹಾವು ಕಚ್ಚಿದೆ. ತಾಯಿಯ ಕಾಲು, ಬಾಲಕನ ಕುತ್ತಿಗೆಗೆ ಹಾವು ಕಚ್ಚಿದೆ. ಅಲ್ಲದೇ ಬಾಲಕನ ಕುತ್ತಿಗೆಗೆ ಸುತ್ತಿಕೊಂಡಿದೆ. ಆ ಬಾಲಕ ಹೇಗೋ ಹಾವಿನಿಂದ ಬಿಡಿಸಿ ಮನೆಯವರಿಗೆ ತಿಳಿಸಿದ್ದಾನೆ.
ಈ ವಿಷಯ ತಿಳಿದ ಗ್ರಾಮಸ್ಥರು ಅದೇ ಗ್ರಾಮದ ಡೋಂಗಿ ಬಾಬಾ ಒಬ್ಬನ ಬಳಿಗೆ ಕರೆದೊಯ್ದಿದ್ದಾರೆ. ಅಲ್ಲಿ ಬಾಬಾ ರಾತ್ರಿಯಿಡೀ ಗಂಟೆ ಬಾರಿಸಿದರೆ ಹಾವಿನ ವಿಷ ಇಳಿಯಲಿದೆ ಎಂದು ನಂಬಿಸಿದ್ದಾನೆ.
ಇದನ್ನು ನಂಬಿದ ಕುಟುಂಬಸ್ಥರು, ಜನ ಬೆಳಗಾಗುವರೆಗೆ ಹಾವಿನ ವಿಷ ಹೋಗಲಾಡಿಸಲು ಅಲ್ಲಿನ ದೇವಸ್ಥಾನದ ಗಂಟೆ ಬಾರಿಸಿದ್ದಾರೆ. ಅಷ್ಟರಲ್ಲಿ ತಾಯಿ, ಮಗು ಇಬ್ಬರ ಆರೋಗ್ಯ ತೀವ್ರ ಹದಗೆಟ್ಟಿದೆ.
ಕೂಡಲೇ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರೂ ಚಿಕಿತ್ಸೆ ಫಲಿಸದೇ ಇಬ್ಬರು ಮೃತಪಟ್ಟಿದ್ದಾರೆ. ಗಂಟೆ ಬಾರಿಸುವ ವಿಡಿಯೋ ವೈರಲ್ ಆಗಿದ್ದು, ಪ್ರಕರಣದ ಬಗ್ಗೆ ವರದಿ ನೀಡುವಂತೆ ಮಧ್ಯಪ್ರದೇಶ ಸರ್ಕಾರ ಸೂಚಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ