newsfirstkannada.com

ಬಿಸಿಲಿನ ಬೇಗೆ ತಾಳಲಾರದೇ ಬಾವಿಗಿಳಿದ ಇಬ್ಬರು ಗೆಳೆಯರು ಸಾವು; ಆಗಿದ್ದೇನು?

Share :

Published April 30, 2024 at 6:11pm

Update April 30, 2024 at 6:12pm

    ಉತ್ತರ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಬಿರು ಬಿಸಿಲಿನ ಬೇಗೆ

    ಬಾವಿಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ಬಾಲಕರು ದಾರುಣ ಸಾವು

    ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಬಾವಿಯಲ್ಲಿ ಇಳಿದಿದ್ದ ಬಾಲಕರು

ವಿಜಯಪುರ: ರಣ ರಣ ಬಿಸಿಲು ನೆತ್ತಿಯನ್ನ ಸುಡುತ್ತಿದೆ. ಅದರಲ್ಲೂ ಉತ್ತರ ಕರ್ನಾಟಕದ ಹಲವು ಜಿಲ್ಲೆಯಲ್ಲಿ ಬಿಸಿಲಿನ ವಾತಾವರಣ ದಿನ ಕಳೆದಂತೆ ಹೆಚ್ಚಾಗುತ್ತಿದೆ. ವಿಜಯಪುರ ಜಿಲ್ಲೆಯಲ್ಲಿ ಇಂದು 40 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಇಂತಹ ಬಿಸಿಲ ಬೇಗೆಯಿಂದ ತಪ್ಪಿಸಿಕೊಳ್ಳಲು ಬಾವಿಯಲ್ಲಿ ಇಳಿದ ಇಬ್ಬರು ಗೆಳೆಯರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಬಾವಿಯಲ್ಲಿ ಸ್ನಾನಕ್ಕೆ ಹೋದ ಇಬ್ಬರು ಬಾಲಕರು ಸಾವನ್ನಪ್ಪಿರೋ ದಾರುಣ ಘಟನೆ ವಿಜಯಪುರ ಜಿಲ್ಲೆ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಡೆದಿದೆ. ಸೋಮಶೇಖರ್ ಆಲಮೇಲ್ (16), ಮಲಿಕ್ ನದಾಫ್ (16) ಸಾವನ್ನಪ್ಪಿದ ಬಾಲಕರು.

ಇದನ್ನೂ ಓದಿ: ಬೆಂಗಳೂರಿಗೆ ಮತ್ತೆ ಶಾಕಿಂಗ್ ಸುದ್ದಿ.. ಇನ್ನೆಷ್ಟು ದಿನ ಭಯಾನಕ ಬಿಸಿ ಗಾಳಿ; ಮಳೆ ಬರೋದು ಯಾವಾಗ?

ಸೋಮಶೇಖರ್ ಹಾಗೂ ಮಲಿಕ್ ನದಾಫ್ ಇಬ್ಬರು ಬಾವಿಯಲ್ಲಿ ಸ್ನಾನಕ್ಕೆ ಹೋಗಿದ್ದಾರೆ. ಈಜಲು ಬಾರದೆ ಇಬ್ಬರು ಗೆಳೆಯರು ಬಾವಿಯಲ್ಲಿ ಪ್ರಾಣ ಬಿಟ್ಟಿದ್ದಾರೆ ಎನ್ನಲಾಗಿದೆ. ಸಿಂದಗಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಸಿಲಿನ ಬೇಗೆ ತಾಳಲಾರದೇ ಬಾವಿಗಿಳಿದ ಇಬ್ಬರು ಗೆಳೆಯರು ಸಾವು; ಆಗಿದ್ದೇನು?

https://newsfirstlive.com/wp-content/uploads/2024/04/Vijayapura-Boys-death.jpg

Load More