newsfirstkannada.com

ವೀಕೆಂಡ್‌​ನಲ್ಲಿ ಕರ್ನಾಟಕಕ್ಕೆ ಬಂದಿದ್ದ​ ಮುಂಬೈನ ಇಬ್ಬರು ಬಾಲಕಿಯರು ಸಾವು; ಆಗಿದ್ದೇನು?

Share :

Published June 2, 2024 at 12:48pm

Update June 2, 2024 at 3:59pm

  ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ

  ಆಲಿಯಾ ಪಾಟೀಲ್ ಹಾಗೂ ಜೋಯಾ ಪಾಟೀಲ್ ಮೃತ ಬಾಲಕಿಯರು

  ಕರ್ನಾಟಕದ ಸಂಬಂಧಿಕರ ಮನೆಗೆ ಬಂದಿದ್ದ ಮುಂಬೈ ಮೂಲದ ಕುಟುಂಬಸ್ಥರು

ಚಿಕ್ಕಬಳ್ಳಾಪುರ: ವೀಕೆಂಡ್​ ಅಂತ ಬಂದಿದ್ದ ಇಬ್ಬರು ಬಾಲಕಿಯರು ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿರೋ ಘಟನೆ ಮಂಚೇನಹಳ್ಳಿ ತಾಲೂಕಿನ ದಂಡಿಗಾನಹಳ್ಳಿ ನಡೆದಿದೆ. ಮುಂಬೈ ಮೂಲದ ಆಲಿಯಾ ಪಾಟೀಲ್ (14) ಹಾಗೂ ಜೋಯಾ ಪಾಟಿಲ್ (14) ಮೃತ ದುರ್ದೈವಿಗಳು.

ಇದನ್ನೂ ಓದಿ: ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಬಿಗ್ ಶಾಕ್.. ಬೆಳಗಾವಿ ವಿವಿಯಿಂದ ಅಚ್ಚರಿಯ ಫಲಿತಾಂಶ.. ಹೊಸ ದಾಖಲೆ..!

ಮುಂಬೈ ಮೂಲದ ಕುಟುಂಬಸ್ಥರು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರಿನ ಸಂಬಂಧಿಕರ ಮನೆಗೆ ಬಂದಿದ್ದರು. ನಿನ್ನೆ ವೀಕೆಂಡ್‌ನಲ್ಲಿ ಕುಟುಂಬ ಸಮೇತ ದಂಡಿಗಾನಹಳ್ಳಿ ಕೆರೆಗೆ ಹೋಗಿದ್ದರು. ಬಳಿಕ ಕೆರೆಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕಿಯರು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಇಬ್ಬರು ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ.

ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಮಂಚೇನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಸಂಬಂಧ ಮಂಚೇನಹಳ್ಳಿ ಪೊಲೀಸ್​ ಠಾಣೆಯಲ್ಲಿ ಕೇಸ್​ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವೀಕೆಂಡ್‌​ನಲ್ಲಿ ಕರ್ನಾಟಕಕ್ಕೆ ಬಂದಿದ್ದ​ ಮುಂಬೈನ ಇಬ್ಬರು ಬಾಲಕಿಯರು ಸಾವು; ಆಗಿದ್ದೇನು?

https://newsfirstlive.com/wp-content/uploads/2024/06/DEATH10.jpg

Load More