newsfirstkannada.com

ದುರಂತ.. ಸ್ನಾನ ಮಾಡಲು ಹೋದ ಇಬ್ಬರು ಬಾಲಕಿಯರು ದಾರುಣ ಸಾವು

Share :

Published May 31, 2024 at 1:13pm

Update May 31, 2024 at 1:38pm

  ನಾಲ್ಕು ಬಾಲಕಿಯರು ಒಟ್ಟಾಗಿ ಸ್ನಾನ ಮಾಡಲು ಹೋಗಿದ್ದಾಗ ದುರಂತ

  ಮುಗಿಲು ಮುಟ್ಟಿದೆ ಮಕ್ಕಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ

  ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲನೆ

ಕೊಪ್ಪಳ: ಮನೆ ಪಕ್ಕದ ಬಾವಿಯಲ್ಲಿ ಇಬ್ಬರು ಬಾಲಕಿಯರು ಕಾಲು ಜಾರಿ ಬಿದ್ದು ಸಾವನ್ನಪ್ಪಿರುವ ಘಟನೆ ತಾಲೂಕಿನ ಜಿನ್ನಾಪೂರ ತಾಂಡಾದ ಹೊರವಲಯದ ಜಮೀನನಲ್ಲಿ ನಡೆದಿದೆ. ಸೌಂದರ್ಯ (10), ಹಾಗೂ ಲಕ್ಷ್ಮಿ (10) ಮೃತ ಬಾಲಕಿಯರು. ಮೃತ ಬಾಲಕಿ ಸೌಂದರ್ಯ ಜಿನ್ನಾಪುರ ದೊಡ್ಟ ತಾಂಡಾದ ರತ್ನಪ್ಪ ಹಾಗೂ ಮಂಜುಳಾ ದಂಪತಿಗಳ ಮಗಳಾಗಿದ್ದಾಳೆ. ಲಕ್ಷ್ಮಿ ಶರಣಪ್ಪ ಸರೋಜಮ್ಮ ದಂಪತಿ ಪುತ್ರಿಯಾಗಿದ್ದಾಳೆ.

ಇದನ್ನೂ ಓದಿ: ಸ್ಯಾಂಡಲ್​ವುಡ್​ಗೆ ಹೊಸ ಎಂಟ್ರಿ.. ಸದ್ದಿಲ್ಲದೆ ಸಿನಿಮಾ ಮಾಡ್ತಿದಾರಾ ಡ್ರೋನ್​ ಪ್ರತಾಪ್​?

ಮನೆಯಲ್ಲಿ ಯಾರು ಇಲ್ಲದ ವೇಳೆ ನಾಲ್ಕು ಬಾಲಕಿಯರು ಮನೆಯ ಪಕ್ಕದ ಬಾವಿಯಲ್ಲಿ ಸ್ನಾನ ಮಾಡಲು ಹೋಗಿದ್ದಾರೆ. ಇದೇ ವೇಳೆ ಆಯತಪ್ಪಿ ಬಾವಿಯಲ್ಲಿ ಬಿದ್ದು ಮೃತಪಟ್ಟಿದ್ದಾರೆ. ಕೂಡಲೇ ಅಲ್ಲೇ ನಿಂತುಕೊಂಡಿದ್ದ ಇನ್ನಿಬ್ಬರು ಮಕ್ಕಳು ಜೋರಾಗಿ ಕೂಗಾಡಿದ್ದಾರೆ. ಕೂಡಲೇ ಪಕ್ಕದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತನೊಬ್ಬ ಬಾಲಕಿಯರನ್ನು ಉಳಿಸಲು ಪ್ರಯತ್ನಪಟ್ಟಿದ್ದಾರೆ. ಅಷ್ಟೋತಿಗಾಗಲೇ ಇಬ್ಬರು ಬಾಲಕಿಯರು ಮೃತಪಟ್ಟಿದ್ದಾರೆ. ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ಪೊಲೀಸರು ಭೇಟಿ ಕೊಟ್ಟು ಬಾಲಕಿಯರ ಮೃತದೇಹವನ್ನು ಹೊರ ತೆಗೆದಿದ್ದಾರೆ.

ಇದನ್ನೂ ಓದಿ: VIDEO: ಮಹಿಳೆ ಜತೆ ಅಕ್ರಮ ಸಂಬಂಧ; ಬೆಡ್​ ರೂಮ್​ನಲ್ಲಿ ಹೆಂಡತಿಗೆ ರೆಡ್​​ ಹ್ಯಾಂಡಾಗಿ ಸಿಕ್ಕಿಬಿದ್ದ ಗಂಡ!

ತಮ್ಮ ಮಕ್ಕಳನ್ನು ಕಳೆದುಕೊಂಡ ದುಃಖದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಬಾಲಕಿಯ ತಂದೆ ರತ್ನಪ್ಪ ಮತ್ತು ಶರಣಪ್ಪ ಅಣ್ಣ ತಮ್ಮಿಂದರಾಗಿದ್ದು, ಇಂದು ಮಧ್ಯಾಹ್ನ ಮಕ್ಕಳನ್ನು ಮನೆ ಬಳಿ ಬಿಟ್ಟು ಬೇರೆಯೊಂದು ಜಮೀನಿನಲ್ಲಿ ಬೀಜಬಿತ್ತನೆ ಮಾಡಲು ಕೆಲಸಕ್ಕೆ ಹೋಗಿದ್ದರಂತೆ. ಮನೆಯಲ್ಲಿದ್ದ ನಾಲ್ವರು ಬಾಲಕಿಯರು ಬಾವಿಯ ಬಳಿ ಸ್ನಾನಕ್ಕೆ ಹೋದಾಗ ಈ ಘಟನೆ ನಡೆದಿದೆ ರತ್ನಪ್ಪ ಪೂಜಾರ ಅವರಿಗೆ 3 ಹೆಣ್ಣು ಮತ್ತು ಒಂದು ಗಂಡು ಮಗುವಿದೆ. ಇದರಲ್ಲಿ ಮೃತಪಟ್ಟ ಸೌಂದರ್ಯ ಮೂರನೇಯವಳಾಗಿದ್ದಾರೆ. ಇತ್ತ ಶರಣಪ್ಪ ಪೂಜಾರ ಅವರಿಗೆ 5 ಜನ ಹೆಣ್ಣು ಮಕ್ಕಳು, ಒಂದು ಗಂಡು ಮಗನಿದ್ದು, ಮೃತ ಲಕ್ಷ್ಮಿ ಇವರ ಮಗಳಾಗಿದ್ದಾಳೆ. ಮಕ್ಕಳಿಬ್ಬರನ್ನು ಕಳೆದುಕೊಂಡ ಪಾಲಕರ ಆಕ್ರಂದನ ಮುಗಿಲು ಮುಟ್ಟಿತ್ತು. ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದುರಂತ.. ಸ್ನಾನ ಮಾಡಲು ಹೋದ ಇಬ್ಬರು ಬಾಲಕಿಯರು ದಾರುಣ ಸಾವು

https://newsfirstlive.com/wp-content/uploads/2024/05/death4.jpg

Load More