/newsfirstlive-kannada/media/post_attachments/wp-content/uploads/2024/03/dance-3.jpg)
ನವದೆಹಲಿ: ಒಂದಲ್ಲ ಒಂದು ವಿಚಾರಕ್ಕೆ ದೆಹಲಿ ಮೆಟ್ರೋ ಸುದ್ದಿಯಲ್ಲಿರುತ್ತದೆ. ಅನೇಕ ಬಾರಿ ದೆಹಲಿ ಮೆಟ್ರೋದ ಒಳಗಿನಿಂದ ಇಂತಹ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಇದೀಗ ದೆಹಲಿ ಮೆಟ್ರೋದಲ್ಲಿ ಇಬ್ಬರು ಯುವತಿಯರು ರೀಲ್ಸ್​ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾರೆ.
/newsfirstlive-kannada/media/post_attachments/wp-content/uploads/2024/03/dance-4.jpg)
ಇದನ್ನು ಓದಿ: ಉಘೇ ಮಾದಪ್ಪ.. ಮಲೆ ಮಹದೇಶ್ವರನಿಗೆ 700KG ಬೆಳ್ಳಿ ಗಿಫ್ಟ್ ಕೊಟ್ಟ ಸಿಎಂ ಸಿದ್ದರಾಮಯ್ಯ
ಇಬ್ಬರು ಯುವತಿಯರು ಬಾಲಿವುಡ್​ನ 'ಅಂಗ್ ಲಗಾ ದೇ' ಹಾಡಿಗೆ ಹೋಳಿ ಬಣ್ಣಗಳೊಂದಿಗೆ ಡ್ಯಾನ್ಸ್ ​ಮಾಡಿ ದೆಹಲಿ ಮೆಟ್ರೋ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಯುವತಿಯರು ಡ್ಯಾನ್ಸ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಯುವತಿಯರು ಡ್ಯಾನ್ಸ್​ ಮಾಡುವಾಗ ಕೆಲ ಪ್ರಯಾಣಿಕರು ಮೌನವಾಗಿ ನೋಡುತ್ತಿದ್ದರೆ, ಇನ್ನೂ ಕೆಲವರೂ ಅಲ್ಲಿಂದ ಎದ್ದು ಬೇರೆಡೆಗೆ ಹೋಗುತ್ತಿರುವುದು ಕಂಡು ಬರುತ್ತಿದೆ.
We need a law against this asap pic.twitter.com/3qH1aom1Ml
— Madhur (@ThePlacardGuy) March 23, 2024
ಯುವತಿಯರು ಅಸಭ್ಯವಾಗಿ ಡ್ಯಾನ್ಸ್ ಮಾಡಿ​ ಮೇಟ್ರೋದಲ್ಲಿದ್ದ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ್ದು, ಪ್ರಯಾಣಿಕರು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ನಿಯಮ ಪಾಲನೆ ಆಗ್ತಿದ್ಯಾ? ಅಂತ ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಯುವತಿಯರ ಮೇಲೆ ಕೋಪಗೊಂಡಿದ್ದಾರೆ. ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us