newsfirstkannada.com

ಮೆಟ್ರೋದಲ್ಲಿ ಮತ್ತೆ ಯುವತಿಯರ ಹುಚ್ಚಾಟ.. ಇವರ ವಯ್ಯಾರಕ್ಕೆ ನೆತ್ತಿಗೇರಿತು ಪ್ರಯಾಣಿಕರ ಕೋಪ

Share :

Published March 23, 2024 at 6:10pm

    ಒಂದಲ್ಲ ಒಂದು ವಿಚಾರಕ್ಕೆ ಸುದ್ದಿಯಲ್ಲಿರುತ್ತೆ ದೆಹಲಿಯ ಮೆಟ್ರೋ

    ಮೆಟ್ರೋದಲ್ಲಿ ಹೀಗೂ ಮಾಡ್ತಾರಾ ಎಂದು ಪ್ರಶ್ನೆ ಮಾಡಿದ ನೆಟ್ಟಿಗರು

    ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಯ್ತು ಈ ವಿಡಿಯೋ!

ನವದೆಹಲಿ: ಒಂದಲ್ಲ ಒಂದು ವಿಚಾರಕ್ಕೆ ದೆಹಲಿ ಮೆಟ್ರೋ ಸುದ್ದಿಯಲ್ಲಿರುತ್ತದೆ. ಅನೇಕ ಬಾರಿ ದೆಹಲಿ ಮೆಟ್ರೋದ ಒಳಗಿನಿಂದ ಇಂತಹ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಲೇ ಇರುತ್ತದೆ. ಇದೀಗ ದೆಹಲಿ ಮೆಟ್ರೋದಲ್ಲಿ ಇಬ್ಬರು ಯುವತಿಯರು ರೀಲ್ಸ್​ ಮಾಡುವ ಮೂಲಕ ಹುಚ್ಚಾಟ ಮೆರೆದಿದ್ದಾರೆ.

ಇದನ್ನು ಓದಿ: ಉಘೇ ಮಾದಪ್ಪ.. ಮಲೆ ಮಹದೇಶ್ವರನಿಗೆ 700KG ಬೆಳ್ಳಿ ಗಿಫ್ಟ್ ಕೊಟ್ಟ ಸಿಎಂ ಸಿದ್ದರಾಮಯ್ಯ

ಇಬ್ಬರು ಯುವತಿಯರು ಬಾಲಿವುಡ್​ನ ‘ಅಂಗ್ ಲಗಾ ದೇ’ ಹಾಡಿಗೆ ಹೋಳಿ ಬಣ್ಣಗಳೊಂದಿಗೆ ಡ್ಯಾನ್ಸ್ ​ಮಾಡಿ ದೆಹಲಿ ಮೆಟ್ರೋ ನಿಯಮವನ್ನು ಉಲ್ಲಂಘಿಸಿದ್ದಾರೆ. ಈ ಯುವತಿಯರು ಡ್ಯಾನ್ಸ್ ಮಾಡಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಯುವತಿಯರು ಡ್ಯಾನ್ಸ್​ ಮಾಡುವಾಗ ಕೆಲ ಪ್ರಯಾಣಿಕರು ಮೌನವಾಗಿ ನೋಡುತ್ತಿದ್ದರೆ, ಇನ್ನೂ ಕೆಲವರೂ ಅಲ್ಲಿಂದ ಎದ್ದು ಬೇರೆಡೆಗೆ ಹೋಗುತ್ತಿರುವುದು ಕಂಡು ಬರುತ್ತಿದೆ.

ಯುವತಿಯರು ಅಸಭ್ಯವಾಗಿ ಡ್ಯಾನ್ಸ್ ಮಾಡಿ​ ಮೇಟ್ರೋದಲ್ಲಿದ್ದ ಪ್ರಯಾಣಿಕರಿಗೆ ಕಿರಿಕಿರಿ ಉಂಟು ಮಾಡಿದ್ದು, ಪ್ರಯಾಣಿಕರು ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿ ನಿಯಮ ಪಾಲನೆ ಆಗ್ತಿದ್ಯಾ? ಅಂತ ದೆಹಲಿ ಮೆಟ್ರೋ ಅಧಿಕಾರಿಗಳಿಗೆ ಪ್ರಶ್ನೆ ಮಾಡಿದ್ದಾರೆ. ಸದ್ಯ ಈ ವಿಡಿಯೋ ನೋಡಿದ ನೆಟ್ಟಿಗರು ಯುವತಿಯರ ಮೇಲೆ ಕೋಪಗೊಂಡಿದ್ದಾರೆ. ಕಾನೂನು ರೀತಿಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೆಟ್ರೋದಲ್ಲಿ ಮತ್ತೆ ಯುವತಿಯರ ಹುಚ್ಚಾಟ.. ಇವರ ವಯ್ಯಾರಕ್ಕೆ ನೆತ್ತಿಗೇರಿತು ಪ್ರಯಾಣಿಕರ ಕೋಪ

https://newsfirstlive.com/wp-content/uploads/2024/03/dance-3.jpg

Load More