ಕೊಹ್ಲಿ ಮನವೊಲಿಕೆಗೆ ಇಬ್ಬರು ದಂತಕತೆಗಳ ಕಳುಹಿಸಿದ್ದ BCCI, ಯಾರಿಗೂ ಸೊಪ್ಪು ಹಾಕದ ಕಿಂಗ್..!

author-image
Ganesh
‘ಕಾಣೆ ಆಗಿದ್ದಾರೆ ಕೊಹ್ಲಿ..’ ಎಚ್ಚೆತ್ತುಕೊಳ್ಳದ ರನ್ ಮಷಿನ್ ವಿರುದ್ಧ ಗಂಭೀರ ಆರೋಪ..!
Advertisment
  • ಟೆಸ್ಟ್ ಕ್ರಿಕೆಟ್​​ಗೆ ವಿರಾಟ್​ ಕೊಹ್ಲಿ ಗುಡ್​ ಬೈ
  • ಆಸ್ಟ್ರೇಲಿಯಾದಲ್ಲೇ ನಿವೃತ್ತಿ ಬಗ್ಗೆ ಕೊಹ್ಲಿ ನಿರ್ಧಾರ
  • ಅಂದು ಕಿಂಗ್​ ಕೊಹ್ಲಿ ಮಾತಿನ ಬಗ್ಗೆ ಡೋಂಟ್ ಕೇರ್..!

ವಿರಾಟ್ ಕೊಹ್ಲಿ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಹೇಳಿದ್ದಾಗಿದೆ. ಕೊಹ್ಲಿ ಶಾಕಿಂಗ್ ಡಿಸಿಷನ್ ಎಲ್ಲರಿಗೂ ಅಚ್ಚರಿ ಮೂಡಿಸಿರಬಹುದು. ವಿರಾಟ್​, ತರಾತುರಿಯಲ್ಲಿ ತೆಗೆದುಕೊಂಡ ನಿರ್ಧಾರ ಇದಾಗಿರಲಿಲ್ಲ. ಈ ಬಗ್ಗೆ ಯೋಚಿಸಿ, ಭವಿಷ್ಯದ ಲೆಕ್ಕಾಚಾರ ಹಾಕಿಯೇ ತೆಗೆದುಕೊಂಡಿದ್ದ ನಿರ್ಧಾರವಾಗಿತ್ತು.

ಆಸ್ಟ್ರೇಲಿಯಾದಲ್ಲೇ ನಿರ್ಧರಿಸಿದ್ದ ಕೊಹ್ಲಿ

2024 ವರ್ಷಾಂತ್ಯದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿತ್ತು. ಪ್ರತಿಷ್ಠಿತ ಬಾರ್ಡರ್​ ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲೊಪ್ಪಿಕೊಂಡಿತ್ತು. ಟೀಮ್ ಇಂಡಿಯಾನೇ ಅಲ್ಲ. ವಿರಾಟ್ ಕೊಹ್ಲಿ ಸಹ ಸತತ ವೈಫಲ್ಯ ಅನುಭವಿಸಿದ್ದರು. ಈ ವೇಳೆ ಸಿಡ್ನಿಯಲ್ಲೇ ವಿರಾಟ್, ಟೆಸ್ಟ್​ ನಿವೃತ್ತಿಯ ಸಂದೇಶ ನೀಡಿದ್ದರು. ಅವತ್ತು ಸಹ ಆಟಗಾರರು ಮಾತ್ರವಲ್ಲ. ಯಾರು ಸಿರೀಯಸ್ ಆಗಿ ತೆಗೆದುಕೊಂಡಿರಲಿಲ್ಲ. ಇದರೊಂದಿಗೆ ಕೊಹ್ಲಿ ಟೆಸ್ಟ್​ ನಿವೃತ್ತಿಯ ವದಂತಿ, ಅವತ್ತು ಕೇವಲ ಗಾಸಿಪ್ ಆಗಿ ಅಂತ್ಯವಾಯ್ತು. ಆದ್ರೆ, ಅದು ಅಲ್ಲಿಗೆ ನಿಂತಿರಲಿಲ್ಲ.

ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಗ್ ಶಾಕ್‌.. ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಕೈ ಕೊಡೋದು ಫಿಕ್ಸ್!

publive-image

ಕೊಹ್ಲಿ ನಿವೃತ್ತಿಯ ಪಟ್ಟು..

ಆಸ್ಟ್ರೇಲಿಯಾ ಸರಣಿ ಬಳಿಕ ಐಪಿಎಲ್​ನಲ್ಲಿ ಬ್ಯುಸಿಯಾಗಿದ್ದ ಕೊಹ್ಲಿ, ಇತ್ತಿಚೆಗಷ್ಟೇ ನಿವೃತ್ತಿಯ ವಿಚಾರ ಬಿಗ್​ಬಾಸ್​ಗಳ ಮುಂದಿಟ್ಟಿದ್ದರು. ಇದಕ್ಕೆ ಸುತರಂ ಒಪ್ಪದ ಬಿಸಿಸಿಐ ಬಿಗ್​ಬಾಸ್​ಗಳು, ಮರು ಚಿಂತನೆಯ ಸಲಹೆ ನೀಡಿದ್ದರು. ಕೊಹ್ಲಿಯ ಮನವೊಲಿಕೆಗಾಗಿ ಇಬ್ಬರು ಲೆಜೆಂಡರಿ ಆಟಗಾರರ ಮೊರೆ ಹೋಗಿತ್ತು. ಕ್ರಿಕೆಟ್ ದೇವರು ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ.

ಸಚಿನ್ ತೆಂಡುಲ್ಕರ್​, ಧೋನಿ.. ಇವರಿಬ್ಬರು ವಿರಾಟ್ ಕೊಹ್ಲಿಯ ಆಪ್ತರು. ಹೀಗಾಗಿ ಬಿಸಿಸಿಐ ಬಿಗ್​ಬಾಸ್​ಗಳು ವಿರಾಟ್​, ಮನವೊಲಿಕೆಯ ಜವಾಬ್ದಾರಿ, ಗಾಡ್ ಆಫ್ ಕ್ರಿಕೆಟ್​ ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿಗೆ ನೀಡಿದ್ರು. ಸಚಿನ್ ತೆಂಡುಲ್ಕರ್​, ಮಹೇಂದ್ರ ಸಿಂಗ್ ಧೋನಿ ಜೊತೆ ವಿರಾಟ್​ ಜೊತೆ ಮಾತುಕತೆ ನಡೆಸಿದರು. ಕೆಲ ದಿನಗಳ ಜೊತೆ ಟೆಸ್ಟ್ ಕ್ರಿಕೆಟ್​ನಲ್ಲಿ ಮುಂದುವರೆಯುವಂತೆ ಸಲಹೆಯನ್ನೂ ನೀಡಿದರು. ಈ ಮಹಾನ್ ದಿಗ್ಗಜರ ಮಾತಿಗೆ ಬಗ್ಗದ ವಿರಾಟ್​ ಕೊಹ್ಲಿ, ಟೀಮ್ ಇಂಡಿಯಾದ ಭವಿಷ್ಯಕ್ಕೆ ಇದು ಸರಿಯಾದ ಟೈಮ್ ಎಂಬುವುದನ್ನು ಮನದಟ್ಟು ಮಾಡಿದರು.

ಇದನ್ನೂ ಓದಿ: ಕೊನೆಗೂ ಈಡೇರಲಿಲ್ಲ ಕೊಹ್ಲಿಯ ಆ ಒಂದು ಕನಸು.. ಸಾಧನೆಯ ಹಮ್ಮೀರನಿಗೆ ಅದೊಂದು ಕೊರಗು..!

publive-image

ಕೊಹ್ಲಿ ನಿವೃತ್ತಿ ವೈಯಕ್ತಿಕ ಎಂದಿದ್ದೇಕೆ ಬಿಸಿಸಿಐ..?

ರೋಹಿತ್ ಶರ್ಮಾ ಟೆಸ್ಟ್​ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ರು. ಇದೇ ವೇಳೆ ವಿರಾಟ್ ಕೊಹ್ಲಿ, ಟೆಸ್ಟ್​ನಿಂದ ಹೊರ ನಡೆಯುವ ಮನ್ಸಸು ಮಾಡಿದ್ದಾರೆ. ಇದು ಬಿಸಿಸಿಐ ಬಿಗ್​ಬಾಸ್​ಗಳಿಗೆ ಬಿಗ್ ಡ್ಯಾಮೇಜ್​.. ಅಷ್ಟೇ ಅಲ್ಲ.! ಮುಂದಿನ ಇಂಗ್ಲೆಂಡ್ ಟೆಸ್ಟ್ ಸರಣಿಯಲ್ಲಿ ಹೇಗೆ ಎಂಬ ಟೆನ್ಶನ್ ಇತ್ತು. ಇದೇ ಕಾರಣಕ್ಕೆ ಕೊಹ್ಲಿಯ ಮನವೊಲಿಕೆಗೆ ಸರ್ವ ಪ್ರಯತ್ನ ಮಾಡಿತ್ತು. ಆದ್ರೆ, ಬಿಗ್​ಬಾಸ್​ಗಳ ಪ್ರಯತ್ನ ಫೇಲ್ ಆಯ್ತು. ಇದರಿಂದ ಮುಖಭಂಗ ಅನುಭವಿಸಿದ ಬಿಸಿಸಿಐ, ವಿರಾಟ್ ಕೊಹ್ಲಿಯ ನಿವೃತ್ತಿ ಅವರ ವೈಯಕ್ತಿಕ ಎಂಬ ಸಂದೇಶ ರವಾನಿಸಿದೆ.

2025ರ ಆಸ್ಟ್ರೇಲಿಯಾ ಪ್ರವಾಸದ ಬೆನ್ನಲ್ಲೇ ಟೆಸ್ಟ್ ಕ್ರಿಕೆಟ್​ನಿಂದ ಹೊರ ನಡೆಯೋ ಮನಸ್ಸು ಮಾಡಿದ್ದ ವಿರಾಟ್, ಮುಂದಿನ ಸರಣಿಗೂ ಮುನ್ನ ಟೆಸ್ಟ್​ ಕ್ರಿಕೆಟ್​ಗೆ ಗುಡ್ ಬೈ ಹೇಳಿದ್ದಾರೆ. ಟೀಮ್ ಇಂಡಿಯಾದ ಭವಿಷ್ಯದ ದೃಷ್ಟಿಯಿಂದಲೇ ಮಹತ್ವದ ನಿರ್ಧಾರ ತೆಗೆದುಕೊಂಡಿರುವ ವಿರಾಟ್, ಭವಿಷ್ಯವೂ ಉತ್ತಮವಾಗಿರಲಿ ಅನ್ನೋದೆ ಅಭಿಮಾನಿಗಳ ಆಶಯ.

ಇದನ್ನೂ ಓದಿ: ಆರ್​ಸಿಬಿಗೆ ಭರ್ಜರಿ ಗುಡ್​​ನ್ಯೂಸ್​.. ಮುಂದಿನ ಎಲ್ಲಾ ಪಂದ್ಯ ಆಡ್ತಾರೆ ಇಂಗ್ಲೆಂಡ್​ನ ಸ್ಟಾರ್​ ಪ್ಲೇಯರ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment