/newsfirstlive-kannada/media/post_attachments/wp-content/uploads/2025/03/INDIAN-RESTAURANTS.jpg)
ವಿಶ್ವದಲ್ಲಿ ಅನೇಕ ರೆಸ್ಟೋರೆಂಟ್ಗಳಿವೆ. ಅವುಗಳಲ್ಲಿ ಅನೇಕ ರೆಸ್ಟೋರೆಂಟ್ಗಳು ವಿಶ್ವವಿಖ್ಯಾತಿಯನ್ನು ಪಡೆದಿವೆ. ವಿಶ್ವದ ಟಾಪ್ ರೆಸ್ಟೋರೆಂಟ್ಗಳಲ್ಲಿ ಗುರುತಿಸಿಕೊಂಡಿವೆ. ಈಗ ಏಷ್ಯಾದ ಟಾಪ್ 50 ರೆಸ್ಟೋರೆಂಟ್ ಪಟ್ಟಿಗಳಲ್ಲಿ ಭಾರತದ ಎರಡು ಪ್ರಮುಖ ರೆಸ್ಟೋರೆಂಟ್ಗಳ ಹೆಸರು ಉಲ್ಲೇಖವಾಗಿದೆ. 2025ರ ಏಷ್ಯಾದ ಟಾಪ್ 50 ರೆಸ್ಟೋರೆಂಟ್ಗಳ ಘೋಷಣೆ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯವನ್ನು ಮಾರ್ಚ್ 25 ರಂದು ದಕ್ಷಿಣ ಕೋರಿಯಾದ ಹಮ್ಮಿಕೊಳ್ಳಲಾಗಿತ್ತು . ಈ ಪಟ್ಟಿಯಲ್ಲಿ ಭಾರತದ ಎರಡು ಪ್ರಮುಖ ರೆಸ್ಟೋರೆಂಟ್ಗಳು ಕೂಡ ಸ್ಥಾನ ಪಡೆದಿವೆ.
ಮುಂಬೈನ ಮಾಸ್ಕ್ ರೆಸ್ಟೋರೆಂಟ್ ಏಷ್ಯಾದ ಟಾಪ್ 50 ರೆಸ್ಟೋರೆಂಟ್ಗಳ ಪಟ್ಟಿಯಲ್ಲಿ 19ನೇ ಸ್ಥಾನ ಪಡೆದುಕೊಂಡಿದೆ. ಅದು ಮಾತ್ರವಲ್ಲದೇ ಭಾರತದ ಅತ್ಯುತ್ತಮ ರೆಸ್ಟೋರೆಂಟ್ ಎಂಬ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡಿದೆ. ಇನ್ನು 50 ರೆಸ್ಟೋರೆಂಟ್ಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಮತ್ತೊಂದು ಭಾರತದ ರೆಸ್ಟೋರೆಂಟ್ ಅಂದ್ರೆ ಅದು ನವದೆಹಲಿಯ ಆ್ಯಸೆಂಟ್ ರೆಸ್ಟೋರೆಂಟ್. ಟಾಪ್ 50ರ ಪಟ್ಟಿಯಲ್ಲಿ ಆ್ಯಸೆಂಟ್ ರೆಸ್ಟೋರೆಂಟ್ 46ನೇ ಸ್ಥಾನ ಪಡೆದಿದೆ.
ಇದನ್ನೂ ಓದಿ:ವಿಶ್ವದ ಅತಿ ಎತ್ತರದ ರೈಲ್ವೆ ಬ್ರಿಡ್ಜ್.. ಕಾಶ್ಮೀರಕ್ಕೆ ನೇರ ರೈಲು ಮಾರ್ಗ ಉದ್ಘಾಟನೆ ಯಾವಾಗ; ಏನಿದರ ವಿಶೇಷತೆಗಳು?
ಇನ್ನು ಟಾಪ್ 50ಯಲ್ಲಿ ಮೊದಲನೇ ಸ್ಥಾನ ಪಡೆದಿದ್ದು ಬ್ಯಾಂಕಾಕ್ನ ಗಗ್ಗನ್ ರೆಸ್ಟೋರೆಂಟ್. ವಿಶೇಷ ಏನಂದ್ರೆ ಈ ಒಂದು ರೆಸ್ಟೋರೆಂಟ್ನ್ನು ಭಾರತೀಯ ಮೂಲದವರಾದ ಗಗ್ಗನ್ ಆನಂದ ಎಂಬ ಬಾಣಸಿಗರೇ ನಡೆಸುತ್ತಾರೆ. ಬ್ಯಾಂಕಾಕ್ನಲ್ಲಿರುವ ಈ ರೆಸ್ಟೋರೆಂಟ್ನಲ್ಲಿ ಸಿದ್ಧಗೊಳ್ಳುವ ಖಾದ್ಯಗಳು ಜಪಾನ್, ಫ್ರಾನ್ಸ್ ಮತ್ತು ಥೈಲ್ಯಾಂಡ್ನ ಪ್ರಭಾವವನ್ನು ಹೊಂದಿದ್ದರು ಕೂಡ ಭಾರತೀಯ ಪಾಕಪದ್ಧತಿಯ ಮಿಶ್ರಣವನ್ನು ಹೊಂದಿದೆ. ಎಂದು ಹೇಳಲಾಗುತ್ತದೆ.
View this post on Instagram
ಇನ್ನು 19ನೇ ಸ್ಥಾನ ಪಡೆದು ಭಾರತದ ಅತ್ಯುತ್ತಮ ರೆಸ್ಟೋರೆಂಟ್ ಎಂಬ ಪ್ರಶಸ್ತಿ ಬಾಚಿಕೊಂಡಿರುವ ಮಾಸ್ಕ್ ರೆಸ್ಟೋರೆಂಟ್ ಸ್ಥಳೀಯ ಪದಾರ್ಥಗಳನ್ನೇ ಬಳಸಿ ವಿಭಿನ್ನ ರೀತಿಯ ಆಹಾರಗಳನ್ನು ಇಲ್ಲಿ ಸಿದ್ಧಪಡಿಸಲಾಗುತ್ತದೆ. ಸಸ್ಯಾಹಾರಿ ಹಾಗೂ ಮಾಂಸಾಹಾರಿ ಎರಡು ಬಗೆಯ ಆಹಾರ ಇಲ್ಲಿ ಸಿಗುತ್ತಿದ್ದು. ಎರಡು ಬಗೆಯ ಭೋಜನಗಳು ಬೇಸಿಗೆ, ಚಳಿ ಹಾಗೂ ಮಳೆಗಾಲಕ್ಕೆ ತಕ್ಕಂತೆ ತಯಾರಾಗುತ್ತವೆ. ಈ ರೆಸ್ಟೋರೆಂಟ್ನ ಹೆಡ್ ಚೇಫ್ ವರುಣ್ ತತ್ಲಾನಿ ಅವರ ಕೈ ರುಚಿಗೆ ಜನರು ಸೋತು ಹೋಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ