RCBಯಲ್ಲಿ ಈ ಇಬ್ಬರ ಬ್ಯಾಟಿಂಗ್, ಬೌಲಿಂಗ್​ ಇಂಪಾರ್ಟೆಂಟ್​.. ಟ್ರೋಫಿ​ ಗೆಲ್ಲಲು ಇವರೇ ಕೀ ಪ್ಲೇಯರ್ಸ್.!

author-image
Bheemappa
Updated On
RCBಯಲ್ಲಿ ಈ ಇಬ್ಬರ ಬ್ಯಾಟಿಂಗ್, ಬೌಲಿಂಗ್​ ಇಂಪಾರ್ಟೆಂಟ್​.. ಟ್ರೋಫಿ​ ಗೆಲ್ಲಲು ಇವರೇ ಕೀ ಪ್ಲೇಯರ್ಸ್.!
Advertisment
  • ಚೊಚ್ಚಲ ಟ್ರೋಫಿ ಗೆಲ್ಲುವ ಕನಸು ಹೊತ್ತಿರುವ ಆರ್​ಸಿಬಿ ತಂಡ
  • ಬೆಂಗಳೂರು ತಂಡದ ಸಕ್ಸಸ್​ ಹಿಂದಿನ ಸೀಕ್ರೆಟ್​ ಏನ್​ ಗೊತ್ತಾ?
  • RCBಗೆ ಹೆಚ್ಚು ರನ್​ಗಳನ್ನು ತಂದುಕೊಟ್ಟ ಆಟಗಾರ ಯಾರು..?

ನಾಳೆಯಿಂದ ಕಲರ್​​​ಫುಲ್​ ಲೀಗ್​ ಪುನಾರಂಭಗೊಳ್ಳಲಿದೆ. ಮೊದಲ ಕದನದಲ್ಲೇ ಆರ್​​ಸಿಬಿ ತಂಡ ಹೋಮ್​ಗ್ರೌಂಡ್​ನಲ್ಲಿ ಕೆಕೆಆರ್​ ಸವಾಲನ್ನ ಎದುರಿಸಲಿದೆ. ಪಂದ್ಯ ಗೆದ್ದು ಪ್ಲೇ ಆಫ್​ಗೆ ಎಂಟ್ರಿ ಕೊಡೋ ತವಕದಲ್ಲಿರೋ ಆರ್​​ಸಿಬಿಯಲ್ಲಿ ಈಗ ಫುಲ್​ ಪಾಸಿಟಿವ್​ ವೈಬ್ಸ್​​. ಇಷ್ಟು ದಿನ ಇದ್ದ ಅಡ್ಡಿ-ಆತಂಕಗಳು ದೂರಾಗಿದ್ದು ಸ್ಟಾರ್​​ ಆಟಗಾರರೆಲ್ಲಾ ಕಮ್​​ಬ್ಯಾಕ್​ ಮಾಡಿದ್ದಾರೆ. ಅದ್ರಲ್ಲೂ ಕಿಂಗ್​​ ಕೊಹ್ಲಿ, ಜೋಶ್ ಹೇಜಲ್​ವುಡ್​​ ರೀ ಎಂಟ್ರಿ ಇಡೀ ತಂಡದ ಜೋಶ್​​ ಹೆಚ್ಚಿಸಿದೆ. ಮ್ಯಾಚ್​​ ವಿನ್ನರ್​ಗಳೇ ಬಂದ್ಮೇಲೆ ಮತ್ತೇನು ಬಾಕಿ ಇದೆ ಅಲ್ವಾ?.

ಪ್ರತಿಯೊಬ್ಬ ಕ್ರಿಕೆಟ್​ ಅಭಿಮಾನಿಗೂ ಐಪಿಎಲ್​ ಸೀಸನ್​ 18ರಲ್ಲಿ ಆರ್​​ಸಿಬಿ ಆಟ ಸಖತ್​ ಡಿಫರೆಂಟ್​​ ಅನಿಸಿದೆ. ರಾಯಲ್​ ಚಾಲೆಂಜರ್ಸ್​ ಬೆಂಗಳೂರಿನ ರಾಯಲ್​ ಓಟ ಅಭಿಮಾನಿಗಳ ವಲಯದಲ್ಲಿ ಚೊಚ್ಚಲ ಕಪ್​ ಗೆಲುವಿನ ಕನಸನ್ನ ಬಿತ್ತಿದೆ. ಅಷ್ಟಕ್ಕೂ ಆರ್​​ಸಿಬಿಯ ಈ ಸಕ್ಸಸ್​ ಹಿಂದಿನ ಸೀಕ್ರೆಟ್​ ಏನ್​ ಗೊತ್ತಾ?. ವಿರಾಟ್​ ಕೊಹ್ಲಿ & ಜೋಶ್​​ ಹೇಜಲ್​ವುಡ್​. ಇವರಿಬ್ಬರ ಆಟ ಆರ್​​ಸಿಬಿಯ ಯಶಸ್ಸಿನ ಓಟದಲ್ಲಿ ಮೇಜರ್​ ರೋಲ್​ ಪ್ಲೇ ಮಾಡಿದೆ.

publive-image

ಬ್ಯಾಟಿಂಗ್​ ವಿಭಾಗಕ್ಕೆ ವಿರಾಟ ಬಲ.. ಕ್ಲಾಸ್​ & ಮಾಸ್​ ಆಟ.!

ಈ ಸೀಸನ್​ ಐಪಿಎಲ್​ನಲ್ಲಿ ಕಿಂಗ್​ ವಿರಾಟ್​ ಕೊಹ್ಲಿ ಸಾಲಿಡ್​ ಆಟವಾಡ್ತಿದ್ದಾರೆ. ಕ್ಲಾಸ್​ & ಮಾಸ್​​ ಆಟದಿಂದ ರಂಜಿಸ್ತಿರೋ ವಿರಾಟ್​ ಕನ್ಸಿಸ್ಟೆಂಟ್​​ ಆಗಿ ರನ್​ಗಳಿಸ್ತಿದ್ದಾರೆ. 36ನೇ ವಯಸ್ಸಿನಕ್ಕೂ ಯುವ ಆಟಗಾರರಿಗೆ ಟಕ್ಕರ್​ ಕೊಡ್ತಿರೋ ರನ್​ಮಷೀನ್​​, ಆರ್​​ಸಿಬಿಯ ಬ್ಯಾಟಿಂಗ್​ನ ಬಲವಾಗಿದ್ದಾರೆ. ಕಿಂಗ್​​ ಕೊಹ್ಲಿಯ ಆರ್ಭಟಕ್ಕೆ ಎದುರಾಳಿ ತಂಡಗಳು ಬೆಚ್ಚಿಬಿದ್ದಿವೆ.

ಕೊಹ್ಲಿಯ ಬ್ಯಾಟ್​ನಿಂದ ಬರ್ತಿರೋ ರನ್​ಗಳೇ ಆರ್​​ಸಿಬಿ ಸಕ್ಸಸ್​ ಹಿಂದಿನ ಸೀಕ್ರೆಟ್​.! ಅಷ್ಟರ ಮಟ್ಟಿಗೆ ಸಿಂಗಲ್​​ ಹ್ಯಾಂಡೆಡ್ಲಿ ಕೊಹ್ಲಿ, ಆರ್​​ಸಿಬಿ ಬ್ಯಾಟಿಂಗ್​​​ ಯುನಿಟ್​​ ಬಲ ಹೆಚ್ಚಿಸಿದ್ದಾರೆ. 2025ರ ಐಪಿಎಲ್​ನಲ್ಲಿ ಆರ್​​​ಸಿಬಿ ತಂಡ ಒಟ್ಟಾರೆ ಗಳಿಸಿದ ರನ್​ಗಳ ಪೈಕಿ ಶೇಕಡಾ 26.06 ರನ್​ಗಳು ಕೊಹ್ಲಿ ಬ್ಯಾಟಿಂದಲೇ ಬಂದಿವೆ. ಉಳಿದ ಶೇಕಡಾ 73.94 ರನ್​ಗಳು ಉಳಿದೆಲ್ಲಾ ಆಟಗಾರ ಕಾಣಿಕೆಯಾಗಿದೆ. 2025 ಐಪಿಎಲ್​ನಲ್ಲಿ ತಂಡವೊಂದಕ್ಕೆ ಅತಿ ಹೆಚ್ಚು ರನ್​ ಕೊಡುಗೆ ಕೊಟ್ಟ ಆಟಗಾರರ ಪೈಕಿಯೂ ಕೊಹ್ಲಿಗೆ ಅಗ್ರಸ್ಥಾನ.

2025ರ IPL​ನಲ್ಲಿ ತಂಡಕ್ಕೆ ಹೆಚ್ಚು ರನ್ ಕೊಡುಗೆ

2025ರ ಐಪಿಎಲ್​ನಲ್ಲಿ ಆರ್​​​ಸಿಬಿ ತಂಡ ಒಟ್ಟಾರೆ ಗಳಿಸಿದ ರನ್​ಗಳ ಪೈಕಿ 26.06 ಶೇಕಡಾ ರನ್​ಗಳು ಕೊಹ್ಲಿ ಬ್ಯಾಟಿಂದ ಬಂದಿವೆ. ಉಳಿದಂತೆ ಗುಜರಾತ್​ ತಂಡಕ್ಕೆ ಸಾಯಿ ಸುದರ್ಶನ್​ ಶೇಕಡಾ 25.42 ರನ್​ಗಳ ಕಾಣಿಕೆ ನೀಡಿದ್ರೆ, ಮುಂಬೈ ತಂಡಗಳಿಸಿದ ರನ್​ ಪೈಕಿ ಶೇಕಡಾ 24.21 ರನ್​ಗಳನ್ನ ಸೂರ್ಯ ಸಿಡಿಸಿದ್ದಾರೆ. ಗುಜರಾತ್​ನ ಜೋಸ್​ ಬಟ್ಲರ್​ 23.70, ಶುಭ್​ಮನ್​ ಗಿಲ್​ ಶೇಕಡಾ 23.45 ರನ್​ಗಳ ಕಾಣಿಕೆ ನೀಡಿದ್ದು ಟಾಪ್​​ 5 ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಬ್ಯಾಟಿಂಗ್​ನಲ್ಲಿ ಕೊಹ್ಲಿ, ಬೌಲಿಂಗ್​ನಲ್ಲಿ ಹೇಜಲ್​ವುಡ್​.!

ಐಪಿಎಲ್​ ಪುನಾರಂಭದ ಡೇಟ್​ ಅನೌನ್ಸ್​ ಆದ ಬೆನ್ನಲ್ಲೇ ಆರ್​​ಸಿಬಿಗೆ ಆಘಾತ ಎದುರಾಗಿತ್ತು. ಆಸ್ಟ್ರೇಲಿಯಾ ವೇಗಿ ಜೋಶ್​ ಹೇಜಲ್​ವುಡ್​ ಮುಂದಿನ ಪಂದ್ಯಗಳನ್ನ ಆಡಲ್ಲ ಎಂದು ಸುದ್ದಿ ಹೊರಬಿದ್ದಿತ್ತು. ಹೇಜಲ್​ವುಡ್​ ಅಲಭ್ಯತೆ ಆರ್​​ಸಿಬಿ ದೊಡ್ಡ ಮಟ್ಟದ ಹಿನ್ನಡೆಯಾಗಲಿದೆ ಎಂಬ ಚರ್ಚೆ ನಡೆದಿತ್ತು. ಇದೀಗ ಎಲ್ಲಾ ಚರ್ಚೆಗಳಿಗೂ ಫುಲ್​ ಸ್ಟಾಪ್​ ಬಿದ್ದಿದ್ದು, ಹೇಜಲ್​ವುಡ್​​ ವಾಪಾಸ್ಸಾತಿಗೆ ಕೌಂಟ್​​ಡೌನ್​ ಶುರುವಾಗಿದೆ. ಹೇಜಲ್​​ವುಡ್​ ಕಮ್​ಬ್ಯಾಕ್​ನ ಸುದ್ದಿ ಆರ್​​ಸಿಬಿ ತಂಡದ ಜೊತೆಗೆ ಅಭಿಮಾನಿಗಳ ವಲಯದಲ್ಲೂ ಜೋಶ್​ ಹೆಚ್ಚಿಸಿದೆ.

ನೋ ಡೌಟ್​​.! ಹೇಜಲ್​ವುಡ್​​ ಅಲಭ್ಯರಾಗಿದ್ರೆ, ಆರ್​​ಸಿಬಿ ತೀವ್ರ ಹಿನ್ನಡೆಯನ್ನ ಅನುಭವಿಸೋ ಸಾಧ್ಯತೆ ದಟ್ಟವಾಗಿತ್ತು. ಈ ಸೀಸನ್​ನಲ್ಲಿ ಬ್ಯಾಟಿಂಗ್​ನಲ್ಲಿ ಹೇಗೆ ಕೊಹ್ಲಿ ಆರ್​​ಸಿಬಿಯ ಬಲವಾಗಿದ್ದಾರೋ, ಬೌಲಿಂಗ್​ನಲ್ಲಿ ಹೇಜಲ್​ವುಡ್​ ಆರ್​​ಸಿಬಿ ಪವರ್​​ ಆಗಿದ್ದಾರೆ. ಈ ಸೀಸನ್​ನಲ್ಲಿ ಅನುಭವಿ ಹೇಜಲ್​ವುಡ್​ ಸಂಘಟಿಸಿದ ಕರಾರುವಕ್​​ ಬೌಲಿಂಗ್​ ದಾಳಿ ಆರ್​​ಸಿಬಿಯ ಚರಿಷ್ಮಾವನ್ನೇ ಬದಲಿಸಿದ್ದು ಸುಳ್ಳಲ್ಲ.

ಇದನ್ನೂ ಓದಿ:ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಈಜಾಡಿದ RCB ಪ್ಲೇಯರ್​.. ಎಲ್ರೂ ಫುಲ್ ಶಾಕ್!

publive-image

ಈ ಸೀಸನ್​ IPLನಲ್ಲಿ ಹೇಜಲ್​ವುಡ್

  • ಇನ್ನಿಂಗ್ಸ್​- 10
  • ವಿಕೆಟ್ಸ್- 18
  • 2+ ವಿಕೆಟ್ಸ್-​ 06
  • ಡಾಟ್​​​%- 46.6%

ಪ್ರತಿ ಬಾರಿ ಬೌಲಿಂಗ್​ ವಿಭಾಗದಲ್ಲಿ ತೀವ್ರ ಹಿನ್ನಡೆ ತಂಡಕ್ಕೆ ಎದುರಾಗ್ತಿತ್ತು. ಹೇಜಲ್​ವುಡ್​ ಆ ಹಿನ್ನಡೆಯನ್ನ ಮೆಟ್ಟಿ ನಿಲ್ಲುವಂತೆ ಮಾಡಿದ್ರು. ಬ್ಯಾಟಿಂಗ್​ನಲ್ಲಿ ಕೊಹ್ಲಿ ಪ್ರತಿ ಸೀಸನ್​​ನಲ್ಲೂ ಕೊಹ್ಲಿ ಕಾಂಟ್ರಿಬ್ಯೂಟ್​ ಮಾಡ್ತಾನೆ ಬಂದಿದ್ದಾರೆ. ಈ ಸೀಸನ್​ನಲ್ಲೂ ಅದೇ ಆಟ ಆಡಿದ್ದಾರೆ. ಇವರಿಬ್ಬರು ಐಪಿಎಲ್​ನ ಮುಂದಿನ ಪಂದ್ಯಗಳಲ್ಲೂ ತಮ್ಮ ಕನ್ಸಿಸ್ಟೆನ್ಸಿ ಕಾಯ್ದುಕೊಂಡ್ರೆ ಕಪ್​ ಗೆಲ್ಲೋದು ಕಷ್ಟವೇನಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment