ಅಂಗಳದಲ್ಲಿ ಆಡುತ್ತಿದ್ದ ಪುಟಾಣಿ ಮೇಲೆ ಹರಿದ ಕಾರು; ಪ್ರತ್ಯೇಕ ದುರಂತದಲ್ಲಿ ಕಣ್ಮುಚ್ಚಿದ ಎರಡು ಮಕ್ಕಳು..

author-image
Ganesh
Updated On
ಅಂಗಳದಲ್ಲಿ ಆಡುತ್ತಿದ್ದ ಪುಟಾಣಿ ಮೇಲೆ ಹರಿದ ಕಾರು; ಪ್ರತ್ಯೇಕ ದುರಂತದಲ್ಲಿ ಕಣ್ಮುಚ್ಚಿದ ಎರಡು ಮಕ್ಕಳು..
Advertisment
  • ಆಡುತ್ತಿದ್ದ ಮಗುವಿನ ಮೇಲೆ ಯಮನಾಗಿ ಬಂದೆರಗಿದ ಕಾರು
  • ರಸ್ತೆ ಮೇಲೆ ಹೋಗ್ತಿದ್ದ 10 ವರ್ಷದ ಬಾಲಕನ ಬಲಿ ಪಡೆದ ಕಾರು
  • ಅಪಘಾತ ಮಾಡಿದ ಇಬ್ಬರು ಡ್ರೈವರ್​ಗಳ ಬಂಧನ ಆಗಿದೆ

ಹುಬ್ಬಳ್ಳಿ/ಚಿಕ್ಕೋಡಿ: ರಾಜ್ಯದಲ್ಲಿ ನಡೆದ ಪತ್ಯೇಕ ಅಪಘಾತ ಪ್ರಕರಣದಲ್ಲಿ ಇಬ್ಬರು ಮುದ್ದಾದ ಮಕ್ಕಳು ಜೀವ ಬಿಟ್ಟಿದ್ದಾರೆ.

ಹಬ್ಬಳ್ಳಿಯಲ್ಲಿ ದಾರುಣ ಘಟನೆ..

ಹುಬ್ಬಳ್ಳಿಯ ಆನಂದನಗರದಲ್ಲಿ ಮನೆಯ ಅಂಗಳದಲ್ಲಿ ಮೂರು ವರ್ಷದ ಬಾಲಕಿ ಆಟವಾಡುತ್ತಿದ್ದಳು. ಈ ವೇಳೆ ಕಾರು ಹರಿದು ಪುಟಾಣಿ ಆಜಿಯಾ (3) ಜೀವಬಿಟ್ಟಿದ್ದಾಳೆ. ನಿನ್ನೆ ರಾತ್ರಿ ದುರ್ಘಟನೆ ಸಂಭವಿಸಿದೆ. ಅಲ್ತಾಫ್ ತೋರಗಲ್ ಎಂಬಾತ ಕಾರು ಡ್ರೈವ್ ಮಾಡ್ತಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಮಗುವನ್ನು ಕಿಮ್ಸ್​ಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ, ಆಸ್ಪತ್ರೆಗೆ ತೆರಳುವ ಮುನ್ನವೇ ಮಗು ಪ್ರಾಣ ಕಳೆದುಕೊಂಡಿದೆ. ಕಾರು ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಪೋಷಕರೇ ಎಚ್ಚರ! ಹೆತ್ತವರ ಲಾಲನೆ-ಪಾಲನೆ ಇಲ್ಲದಿದ್ರೆ ಮಕ್ಕಳು ಹೀಗೂ ಆಗ್ತಾರೆ.. ಕಣ್ಣೀರು ತರಿಸುತ್ತೆ ಈ ಸ್ಟೋರಿ..!

publive-image

ಚಿಕ್ಕೋಡಿಯಲ್ಲೂ ದುರಂತ..

ಬೆಳಗಾವಿ ಜಿಲ್ಲೆಯ ಅಥಣಿ ಜಮಖಂಡಿ ಮಾರ್ಗದಲ್ಲಿ 10 ವರ್ಷದ ಬಾಲಕನ ಮೇಲೆ ಕಾರು ಹರಿದಿದೆ. ಅಗಸ್ತ್ಯ ವಿಜಯ್ ಕುಮಾರ್ ಕಣಮಡಿ (10) ಮೃತ ದುರ್ದೈವಿ. ಸ್ಥಳೀಯರ ಪ್ರಕಾರ, ರಸ್ತೆ ಪಕ್ಕದಿಂದ ನಡೆದುಕೊಂಡು ಹೋಗುತ್ತಿದ್ದ ಬಾಲಕನ ಮೇಲೆ ವೇಗವಾಗಿ ಬಂದ ಕಾರು ಹಾದು ಹೋಗಿದೆ. KA 23 N 8514 ನಂಬರಿನ ಕಾರಾಗಿದ್ದು, ಅಥಣಿಯ ರಾಹುಲ್ ಸುರೇಂದ್ರ ಹುಂಡೇಕರ್​ ಚಲಾಯಿಸುತ್ತಿದ್ದ. ಅಪಘಾತವಾದ ಬಳಿಕ ಕಾರ ನಿಲ್ಲಿಸದೇ ಪರಾರಿಯಾಗಿದ್ದ. ಕೊನೆಗೆ ಪೊಲೀಸರು ಸಿಸಿಟಿವಿ ದೃಶ್ಯ ಆಧಾರದ ಮೇಲೆ ಕಾರು ಚಾಲಕನನ್ನು ಪತ್ತೆ ಮಾಡಿದ್ದಾರೆ. ತಪ್ಪಿತಸ್ಥ ಕಾರು ಚಾಲಕನ ವಿರುದ್ಧ ಕೇಸ್ ದಾಖಲಾಗಿದೆ.

ಇದನ್ನೂ ಓದಿ: ಮಹಾಮಳೆಗೆ 63 ಮಂದಿ ಬಲಿ, 400 ಕೋಟಿ ರೂ ಆಸ್ತಿಪಾಸ್ತಿ ನಷ್ಟ.. ಮತ್ತೆ ಭಾರೀ ಮಳೆಯ ಎಚ್ಚರಿಕೆ..

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment