‘ಇಬ್ಬರು ಮಕ್ಕಳನ್ನು ಸಾಯಿಸಿದ್ದೇನೆ..’ ಕರುಣೆ ಇಲ್ಲದೇ ಕೊಲೆ ಮಾಡಿ ಪೊಲೀಸರಿಗೆ ಕರೆ ಮಾಡಿದ ಪಾಪಿ ತಾಯಿ

author-image
Ganesh
Updated On
‘ಇಬ್ಬರು ಮಕ್ಕಳನ್ನು ಸಾಯಿಸಿದ್ದೇನೆ..’ ಕರುಣೆ ಇಲ್ಲದೇ ಕೊಲೆ ಮಾಡಿ ಪೊಲೀಸರಿಗೆ ಕರೆ ಮಾಡಿದ ಪಾಪಿ ತಾಯಿ
Advertisment
  • ಬೆಂಗಳೂರಲ್ಲಿ ತಾಯಿಯಿಂದ ಬೆಚ್ಚಿ ಬೀಳಿಸೋ ಕೃತ್ಯ
  • ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆಗೈದ ತಾಯಿ
  • 9 ವರ್ಷ ಮಗಳು, 7 ವರ್ಷದ ಪುತ್ರನ ಕೊಲೆ ಮಾಡಿದ ಹೆತ್ತಮ್ಮ

ಹೆತ್ತ ತಾಯಿಯೇ ಇಬ್ಬರು ಮಕ್ಕಳನ್ನು ಉಸಿರುಗಟ್ಟಿಸಿ ಬರ್ಬರವಾಗಿ ಕೊಲೆ ಮಾಡಿದ ಘಟನೆ ಬೆಂಗಳೂರಿನ ಜಾಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ವಿಷಯ ಗೊತ್ತಾಗುತ್ತಿದ್ದಂತೆಯೇ ಬೆಂಗಳೂರು ಮಂದಿ ಬೆಚ್ಚಿಬಿದ್ದಿದ್ದಾರೆ.

ಗಂಗಾ ದೇವಿ ಕೊಲೆ ಮಾಡಿದ ಆರೋಪಿ. 9 ವರ್ಷದ ಮಗಳು ಲಕ್ಷ್ಮೀ, 7 ವರ್ಷದ ಮಗ ಗೌತಮ್​​ನನ್ನು ಬರ್ಬರವಾಗಿ ಕೊಲೆ ಮಾಡಿರುವ ಆರೋಪ ಹೊತ್ತಿದ್ದಾಳೆ. ಮಕ್ಕಳನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆ ಮಾಡಿರುವ ಗಂಗಾದೇವಿಯೇ ಪೊಲೀಸರಿಗೆ ಖುದ್ದು ಮಾಹಿತಿ ನೀಡಿದ್ದಾಳೆ.

ಇದನ್ನೂ ಓದಿ: PUC RESULT: ಕಲಾ ವಿಭಾಗದಲ್ಲಿ ಮೇಧಾ, ವಾಣಿಜ್ಯ ವಿಭಾಗದಲ್ಲಿ ಗಾನವಿ, ವಿಜ್ಞಾನ ವಿಭಾಗ ನೂತನ್​ ರಾಜ್ಯಕ್ಕೆ ಪ್ರಥಮ

publive-image

ಇಬ್ಬರು ಮಕ್ಕಳನ್ನ ಕೊಲೆ ಮಾಡಿ ಕಂಟ್ರೋಲ್ ರೂಂಗೆ ಕರೆ ಮಾಡಿದ್ದ ಗಂಗಾದೇವಿ, ಮಕ್ಕಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದೇನೆ. ಈಗ ನಾನು ಆತ್ಮಹತ್ಯೆ ಮಾಡಿಕೊಳ್ಳೊದಾಗಿ ಫೋನ್​ನಲ್ಲಿ ಹೇಳಿದ್ದಾರೆ. ಕೂಡಲೇ ಅಲರ್ಟ್ ಆಗಿರುವ ಕಂಟ್ರೋಲ್ ರೂಮ್​, ಸ್ಥಳಕ್ಕೆ ಹೊಯ್ಸಳ ಟೀಂ ಕಳುಹಿಸಿದೆ. ಪರಿಶೀಲನೆ ಮಾಡಿ ಗಂಗಾದೇವಿಯನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಮುದ್ದಾದ ಮಕ್ಕಳನ್ನು ತಲೆ ದಿಂಬಿನಿಂದ ಉಸಿರುಗಟ್ಟಿಸಿ ಕೊಲೆಗೈದ ತಾಯಿ, ಬೆಚ್ಚಿಬಿದ್ದ ಬೆಂಗಳೂರು

ಗಂಗಾದೇವಿ ಮೂಲತಃ ಆಂಧ್ರ ಮೂಲದವಳು. ಕೊಲೆ ಆರೋಪಿತೆ ಗಂಗಾದೇವಿ ಪತಿ ಪೊಕ್ಸೊ ಕೇಸ್​ನಲ್ಲಿ ಜೈಲು ಪಾಲಾಗಿದ್ದಾನೆ. ಗಂಗಾದೇವಿ ಖಾಸಗಿ ಕಂಪನಿಯಲ್ಲಿ ಮಾರ್ಕೆಟಿಂಗ್ ಕೆಲಸ ಮಾಡ್ತಿದ್ದಳು ಎಂದು ತಿಳಿದುಬಂದಿದೆ. ಇನ್ನು, ಈ ಹಿಂದೆ ಗಂಗಾದೇವಿಯೇ ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಳು. ಮಕ್ಕಳ ಜೊತೆ ಅಸಭ್ಯವರ್ತನೆ ತೋರುತ್ತಾನೆಂದು ಜಾಲಹಳ್ಳಿ ಠಾಣೆಯಲ್ಲಿ ದೂರು ನೀಡಿದ್ದರು ಎಂಬ ವಿಚಾರ ಬೆಳಕಿಗೆ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment