ಪ್ರೀತಿಗೆ ಅಡ್ಡಿ ಆರೋಪ; ಪ್ರೇಯಸಿ ತಾಯಿ ಹಾಗೂ ಸಹೋದರನ ಜೀವ ತೆಗೆದ ಯುವಕ

author-image
Ganesh Nachikethu
Updated On
ಪ್ರೀತಿಗೆ ಅಡ್ಡಿ ಆರೋಪ; ಪ್ರೇಯಸಿ ತಾಯಿ ಹಾಗೂ ಸಹೋದರನ ಜೀವ ತೆಗೆದ ಯುವಕ
Advertisment
  • ಅಪ್ರಾಪ್ತ ಮಗಳ ಪ್ರೀತಿಯ ಹುಚ್ಚು.. ತಾಯಿ-ಮಗ ಬಲಿ
  • ತಂಗಿಯ ಪ್ರಿಯತಮನಿಂದಲೇ ನಡೆಯಿತು ಭೀಕರ ಹತ್ಯೆ
  • ಕೊಲೆಯಾದ ಕೆಲವೇ ಗಂಟೆಗಳಲ್ಲಿ ಸಿಕ್ಕಿಬಿದ್ದ ಜೋಡಿ..!

ಚಿಕ್ಕೋಡಿ: ಕೋವಿಡ್​​ನಲ್ಲಿ ಮನೆ ಯಜಮಾನ ತೀರಿ ಹೋಗಿದ್ದ. ಇಬ್ಬರು ಮಕ್ಕಳ ತಾಯಿ ಕಷ್ಟಪಟ್ಟು ಜೀವನ ನಡೆಸುತ್ತಿದ್ದಳು. ಗಂಡು ದಿಕ್ಕಿಲ್ಲದ ಮನೆಗೆ ಕಿರಾತಕನೊಬ್ಬ ಸಹಾಯ ಮಾಡುವ ನೆಪದಲ್ಲಿ ಎಂಟ್ರಿ ಕೊಟ್ಟಿದ್ದ. ಹೀಗೆ ಬಂದ ಪಾಪಿ ಇಡೀ ಮನೆಯನ್ನೇ ಸರ್ವನಾಶ ಮಾಡಿದ್ದಾನೆ. ತಾಯಿ-ಮಗನನ್ನ ಕೊಂದು ರಣಕೇಕೆ ಹಾಕಿದ್ದಾನೆ. ಬೆಳಗಾವಿಯಲ್ಲಿ ನಡೆದಿರುವ ಬೆಚ್ಚಿ ಬೀಳಿಸುವ ಸ್ಟೋರಿ ಇದು.

ಡಬಲ್ ಮರ್ಡರ್​​ಗೆ ಬೆಚ್ಚಿಬಿದ್ದ ನಿಪ್ಪಾಣಿಯ ಜನ

ಕುಂದಾನಗರಿಯಲ್ಲಿ ಪ್ರೀತಿಗಾಗಿ ನೆತ್ತರು ಹರಿದಿದೆ. ನಿಪ್ಪಾಣಿಯ ಅಕ್ಕೋಳ ಗ್ರಾಮದ ತೋಟದ ಮನೆಯಲ್ಲಿ ನಡೆದಿರೋ ಜೋಡಿ ಕೊಲೆ ಬೆಚ್ಚಿ ಬೀಳಿಸಿದೆ. ಗ್ರಾಮದ 45 ವರ್ಷದ ಮಂಗಳಾ ನಾಯಕ್ ಹಾಗೂ 18 ವರ್ಷದ ಪ್ರಜ್ವಲ್ ನಾಯಕ್ ಬರ್ಬರ ಹತ್ಯೆ ನಡೆದಿದೆ.

ಈತನ ಹೆಸರು ರವಿ ಅಂತ. ಮಂಗಳಾ ನಾಯಕ್ ಅಪ್ರಾಪ್ತ ಪುತ್ರಿ ಪ್ರಜಕ್ತಾಳನ್ನು ರವಿ ಪ್ರೀತಿಸುತ್ತಿದ್ದ. 15 ವರ್ಷದ ದೊಡ್ಡವನಾದ ರವಿಗೆ ಮಗಳನ್ನು ಕೊಡಲು ಮಂಗಳಾ ನಾಯಕ್ ವಿರೋಧಿಸಿದ್ದರು. ಇದೇ ವಿಚಾರಕ್ಕೆ ನಿನ್ನೆ ರಾತ್ರಿ ಜಗಳ ನಡೆದಿತ್ತು. ಕೂಡಲೇ ಅಪ್ರಾಪ್ತೆ ರವಿಗೆ ಫೋನ್ ಮಾಡಿ ಆತನನ್ನು ಕರೆಸಿಕೊಂಡಿದ್ದಳು. ರೋಷಾವೇಶದಿಂದ ಸ್ನೇಹಿತನ ಜೊತೆ ಮನೆಗೆ ನುಗ್ಗಿದ್ದ ರವಿ, ತಾಯಿ-ಮಗನ ಮೇಲೆ ಕಬ್ಬಿಣದ ರಾಡ್​ನಿಂದ ಮನಸೋಇಚ್ಛೆ ಹೊಡೆದು ಹತ್ಯೆ ಮಾಡಿ ಎಸ್ಕೇಪ್ ಆಗಿದ್ದ.

ಘಟನೆ ನಡೆದ ಕೂಡಲೇ ಸ್ಥಳಕ್ಕೆ ಬಂದ ನಿಪ್ಪಾಣಿ ಗ್ರಾಮೀಣ ಠಾಣೆ ಪೊಲೀಸರು ಪರಿಶೀಲನೆ ನಡೆಸಿದ್ರು. ತಾಯಿ ಮಗ ಇಬ್ಬರು ಬರ್ಬರವಾಗಿ ಹತ್ಯೆಯಾಗಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿದ್ದಾರೆ.

ಕೆಲವೇ ಗಂಟೆಗಳಲ್ಲಿ ಆರೋಪಿಗಳು ಅರೆಸ್ಟ್​​

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದ ಪೊಲೀಸರು ಮನೆಯಲ್ಲಿ ಓರ್ವ ಅಪ್ರಾಪ್ತೆ ಕಾಣೆಯಾಗಿದ್ದು ಸ್ಥಳೀಯರಿಂದ ತಿಳಿಯಿತು. ಆರೋಪಿಗಳ ಜಾಡು ಹಿಡಿದು ಹೊರಟ ಪೊಲೀಸರು ಹತ್ಯೆ ನಡೆದ ಕೆಲವೇ ಗಂಟೆಗಳಲ್ಲಿ ರವಿ ಹಾಗೂ ಕೃತ್ಯಕ್ಕೆ ಸಹಕರಿಸಿದ್ದ ಲೋಕೇಶ್​​​ನನ್ನು ಬಂಧಿಸಿದ್ದಾರೆ. ಬಳಿಕ ಆತನ ಮನೆಯಲ್ಲೇ ಇದ್ದ ಅಪ್ರಾಪ್ತೆಯನ್ನು ಕೂಡ ರಕ್ಷಣೆ ಮಾಡಿದ್ದಾರೆ.

ಇನ್ನು ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕೇಸ್​​ನಲ್ಲಿ ಅಪ್ರಾಪ್ತೆಯ ಪಾತ್ರ ಇದೆಯಾ ಅನ್ನೋದನ್ನು ತನಿಖೆ ಮಾಡ್ತಿದ್ದಾರೆ. ಅದೇನೆ ಇರಲಿ ಪ್ರೀತಿಗಾಗಿ ಇಲ್ಲಿ ಎರಡು ಜೀವ ಹೋಗಿದ್ರೇ ತಿಳಿಯದ ವಯಸ್ಸಲ್ಲಿ ಪ್ರೀತಿಯಲ್ಲಿ ಬಿದ್ದಾಕೆ ಪ್ರಿಯಕರನೂ ಇಲ್ಲ, ಇತ್ತ ಅಮ್ಮ, ಸಹೋದರನೂ ಇಲ್ಲದೇ ಬೀದಿಗೆ ಬಂದಿದ್ದಾಳೆ.

ಇದನ್ನೂ ಓದಿ:KL ರಾಹುಲ್​ ಬೆನ್ನಲ್ಲೇ ಪಂತ್​ಗೂ ಬಿಗ್​ ಶಾಕ್​ ಕೊಟ್ಟ ಲಕ್ನೋ ತಂಡದ ಮಾಲೀಕ; ಏನಾಯ್ತು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment