ಪ್ರೇಯಸಿ ಮನೆಗೆ ನುಗ್ಗಿ ನೆತ್ತರು ಹರಿಸಿದ ಪ್ರಿಯಕರ.. ಬೆಳಗಾವಿಯಲ್ಲಿ ಹಾಡಹಗಲೇ ಘೋರ ದುರಂತ! ಆಗಿದ್ದೇನು?

author-image
Veena Gangani
Updated On
ಪ್ರೇಯಸಿ ಮನೆಗೆ ನುಗ್ಗಿ ನೆತ್ತರು ಹರಿಸಿದ ಪ್ರಿಯಕರ.. ಬೆಳಗಾವಿಯಲ್ಲಿ ಹಾಡಹಗಲೇ ಘೋರ ದುರಂತ! ಆಗಿದ್ದೇನು?
Advertisment
  • ಮದುವೆ ಈಗಲೇಬೇಡ ಎಂದು ಬುದ್ಧಿವಾದ ಹೇಳಿದ್ದ ಐಶ್ವರ್ಯ ತಾಯಿ
  • ಬೆಳಗಾವಿಯ ನಾಥ್ ಪೈ ವೃತ್ತದ ಮನೆಯಲ್ಲಿ ನಡೆದ ದಾರುಣ ಘಟನೆ
  • ವಿಷದ ಬಾಟಲಿ ಸಮೇತ ಐಶ್ವರ್ಯ ಚಿಕ್ಕಮ್ಮನ ಮನೆಗೆ ಬಂದಿದ್ದ ಪ್ರಶಾಂತ

ಬೆಳಗಾವಿ: ಮದುವೆ ಆಗಲು ನಿರಾಕರಿಸಿ ಪ್ರೇಯಸಿಯ ಕುತ್ತಿಗೆ ಕೊಯ್ದು ಬಳಿಕ ತಾನೂ ಆತ್ಮಹತ್ಯೆ ಮಾಡಿರೋ ಘಟನೆ ನಾಥ್ ಪೈ ವೃತ್ತದ ಮನೆಯಲ್ಲಿ ನಡೆದಿದೆ. ನಾಥ್ ಪೈ ವೃತ್ತದ ನಿವಾಸಿ ಐಶ್ವರ್ಯ ಮಹೇಶ ಲೋಹಾರ್ (18) ಮೃತಪಟ್ಟ ಪ್ರೇಯಸಿ.

ಇದನ್ನೂ ಓದಿ:ಸಾಧು ಕೋಕಿಲಗೆ ತರಾಟೆ ತಗೊಂಡ ಸುದೀಪ್ ಮ್ಯಾನೇಜರ್‌ ಚಕ್ರವರ್ತಿ ಚಂದ್ರಚೂಡ್; ತಪ್ಪು ಮಾಡಿದ್ದು ಯಾರು?

ಒಂದೂವರೆ ವರ್ಷದಿಂದ ಐಶ್ವರ್ಯಳನ್ನು ಪ್ರಶಾಂತ ಕುಂಡೇಕರ ಎಂಬಾತ ಪ್ರೀತಿಸುತ್ತಿದ್ದ. ಬೆಳಗಾವಿ ತಾಲೂಕಿನ ‌ಯಳ್ಳೂರ ಗ್ರಾಮದ ಪ್ರಶಾಂತ ಕುಂಡೇಕರ್ (29) ಪೇಂಟರ್ ಆಗಿ ಕೆಲಸ ಮಾಡಿಕೊಂಡಿದ್ದ. ತಮ್ಮ ಪ್ರೀತಿಯ ಬಗ್ಗೆ ಐಶ್ವರ್ಯ ತಾಯಿ ಮುಂದೆ ಹೇಳಿದ್ದ. ಆಗ ಐಶ್ವರ್ಯ ತಾಯಿ ಮದುವೆ ಈಗಲೇ ಬೇಡ, ನಿನ್ನ ಕಾಲ ಮೇಲೆ ನಿಲ್ಲುವಂತೆ ಬುದ್ಧಿವಾದ ಹೇಳಿದ್ದಾರೆ.

publive-image

ಇದಾದ ಬಳಿಕ ಇಂದು ನಾಥ್ ಪೈ ವೃತ್ತದಲ್ಲಿರುವ ಐಶ್ವರ್ಯ ಚಿಕ್ಕಮ್ಮಳ ಮನೆಗೆ ವಿಷದ ಬಾಟಲಿ ಸಮೇತ ಪ್ರಶಾಂತ ಬಂದಿದ್ದನಂತೆ. ಮದುವೆಗೆ ನಿರಾಕರಿಸಿದ ಐಶ್ವರ್ಯಗೆ ಒತ್ತಾಯ ಪೂರ್ವಕವಾಗಿ ವಿಷ ಕುಡಿಸಲು ಮುಂದಾಗಿದ್ದನಂತೆ. ಇದಾದ ಬಳಿಕ ಜೇಬಿನಲ್ಲಿದ್ದ ಚೂರಿಯಿಂದ ಐಶ್ವರ್ಯ ಕುತ್ತಿಗೆ ಕೊಯ್ದು ಬಿಟ್ಟಿದ್ದಾನೆ. ಆಗ ತೀವ್ರ ರಕ್ತ ಸ್ರಾವದಿಂದ ಐಶ್ವರ್ಯ ಸಾವನ್ನಪ್ಪುತ್ತಿದ್ದಂತೆ ಪ್ರಶಾಂತ ತಾನೂ ಚೂರಿಯಿಂದ ಕುತ್ತಿಗೆಗೆ ಹಾಕಿಕೊಂಡು ಸ್ಥಳದಲ್ಲೇ ಉಸಿರು ಚೆಲ್ಲಿದ್ದಾನೆ.

ಈ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ನಗರ ಪೊಲೀಸ್ ‌ಆಯುಕ್ತ ಯಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಹಾಗೂ
ಮಾರ್ಕೆಟ್ ವಿಭಾಗದ ಎಸಿಪಿ ಸಂತೋಷ ಸತ್ಯನಾಯಿಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕೇಸ್ ಸಂಬಂಧ ಸುದ್ದಿಗಾರರೊಂದಿಗೆ ಮಾತಾಡಿದ ನಗರ ಪೊಲೀಸ್ ಆಯುಕ್ತ ಯಡಾ ಮಾರ್ಟಿನ್, ಇವತ್ತು ಬಹಳ ಸ್ಯಾಡ್ ಇನ್ಸಿಡೆಂಟ್ ಆಗಿದೆ. ಐದು ಗಂಟೆಯ ಸುಮಾರಿಗೆ ಇನ್ಸಿಡೆಂಟ್ ಆಗಿದೆ. ಮರ್ಡರ್​ನಿಂದ ಇಬ್ಬರೂ ಸತ್ತಿದ್ದಾರೆ. ಹುಡುಗ ಮತ್ತು ‌ಹುಡುಗಿಯ ನಡುವೆ ಪ್ರೇಮ ಇತ್ತು. ಹುಡುಗ ಮದುವೆಗೆ ಒತ್ತಾಯಿಸುತ್ತಿದ್ದ. ಚನ್ನಾಗಿ ಕೆಲಸ ಮಾಡಿ ಸಂಬಳ ಜಾಸ್ತಿ ತಗೊ ಎಂದು ಹುಡುಗಿ ತಾಯಿ ಹೇಳಿದ್ದರು. ಹುಡುಗ ಹುಡುಗಿಗೆ ಮದುವೆ ಮಾಡಿ ಎಂದು ಪೋರ್ಸ್ ಮಾಡ್ತಿದ್ದ. ಪಾಯ್ಸಿನ್ ಬಾಟಲ್ ಕೂಡ ತಂದಿದ್ದಾರೆ. ಮೊದಲು ಹುಡುಗ ಚಾಕುವಿನಿಂದ ಇರಿದಿದ್ದಾನೆ. ನಂತರ ಕುತ್ತಿಗೆ ಕುಯ್ದುಕೊಂಡು ಹುಡುಗನೂ ಸಹ ತೀರಿ ಹೋಗಿದ್ದಾನೆ. ಹುಡುಗ ಪೇಂಟಿಂಗ್ ಮಾಡ್ತಿದ್ದ. ಕೊಲೆ ನಡೆದ ಮನೆ ಹುಡುಗಿಯ ಚಿಕ್ಕಮ್ಮನ ಮನೆ. ಕೊಲೆ ನಡೆದಾಗ ಮನೆಯಲ್ಲಿ ಯಾರೂ ಇರಲಿಲ್ಲ. ಹುಡುಗ ಯಳ್ಳೂರು ಗ್ರಾಮದವನು. ಒಂದುವರೆ ವರ್ಷದಿಂದ ಹುಡುಗಿಯನ್ನು ಲವ್ ಮಾಡ್ತಿದ್ರು. ಹುಡುಗಿಯೂ ಸಹ ಮೇಜರ್ ಇದ್ದಾರೆ ತನಿಖೆ ಮಾಡುತ್ತೆವೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment