/newsfirstlive-kannada/media/post_attachments/wp-content/uploads/2024/06/darshan38.jpg)
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರಿಸಿದ್ದಾರೆ. ಇಲ್ಲಿಯವರೆಗೆ 180 ಸಾಕ್ಷ್ಯಗಳನ್ನ ಸಂಗ್ರಹಿಸಿರುವ ಪೊಲೀಸರಿಗೆ ಆ ಎರಡು ವಸ್ತುಗಳಿಂದ ಟೆನ್ಷನ್ ಶುರುವಾಗಿದೆ ಎನ್ನಲಾಗಿದೆ.
ಕೊಲೆಗೆ ಸಂಬಂಧಪಟ್ಟ ಪ್ರತಿ ವಸ್ತುವನ್ನೂ ಪೊಲೀಸರು ಪತ್ತೆ ಹಚ್ಚಿ ಸೀಜ್ ಮಾಡಿದ್ದಾರೆ. ಆ ಎರಡು ಮೊಬೈಲ್ ಫೋನ್​​ಗಳು ಮಾತ್ರ ಸಿಕ್ತಿಲ್ಲ. ಆ ಎರಡು ಮೊಬೈಲ್ ಫೋನ್​ಗಳ ಪತ್ತೆಗೆ ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಆದರೆ ಇನ್ನೂ ಪತ್ತೆಯಾಗಿಲ್ಲ.
ಕೃತ್ಯ ನಡೆದು 25 ದಿನ ಕಳೆದರೂ ರೇಣುಕಾಸ್ವಾಮಿ ಫೋನ್​ಗಳು​ ಪತ್ತೆಯಾಗಿಲ್ಲ. ಮೊಬೈಲ್, ಪ್ರಕರಣದ ಪ್ರಮುಖ ಎವಿಡೆನ್ಸ್​ ಆಗಿದೆ. ರೇಣುಕಾಸ್ವಾಮಿ ಮೃತದೇಹ ಎಸೆದ ಜಾಗದಲ್ಲೇ ಮೊಬೈಲ್​ಗಳನ್ನ ಎಸೆಯಲಾಗಿದೆ ಎನ್ನಲಾಗಿದೆ. ಸುಮನಹಳ್ಳಿ ರಾಜಕಾಲುವೆಯಲ್ಲಿ ಮೊಬೈಲ್ ಎಸೆದಿದ್ದೇವೆ ಎಂದು ಆರೋಪಿಗಳು ಹೇಳಿದ್ದಾರೆ. ಆದರೆ ಎಷ್ಟೇ ಶೋಧ ಮಾಡಿದರೂ ಮೊಬೈಲ್ ಫೋನ್​ಗಳು ಮಾತ್ರ ಪತ್ತೆ ಆಗಿಲ್ಲ.
ಈ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಬಳಸುತ್ತಿದ್ದ ನಂಬರ್ ಮೇಲೆ ಹೊಸ ಸಿಮ್ ಕಾರ್ಡ್ ಪಡೆಯಲಾಗಿದೆ. ಸಿಮ್ ಕಾರ್ಡ್ ಆ್ಯಕ್ಟೀವ್ ಮಾಡಿ ಡೇಟಾವನ್ನು ಪರಿಶೀಲನೆ ನಡೆಸಲಿದ್ದಾರೆ. ಆದರೂ ಚಾಟ್ ಮಾಡಿದ ಮೂಲ ಮೊಬೈಲ್ ಫೋನ್ ಪ್ರಮುಖ ಸಾಕ್ಷ್ಯಾಧಾರ ಆಗಲಿದೆ. ಹೀಗಾಗಿ ಮೊಬೈಲ್ ಸಿಗದೆ ಇರೋದ್ರಿಂದ ಪೊಲೀಸರಿಗೆ ತಲೆಬಿಸಿ ಶುರುವಾಗಿದೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ