/newsfirstlive-kannada/media/post_attachments/wp-content/uploads/2025/07/HEART-ATTACK-4.jpg)
ಚಿಕ್ಕಮಗಳೂರು/ಮೈಸೂರು: ರಾಜ್ಯದಲ್ಲಿ ಸಂಭವಿಸ್ತಿರುವ ಹೃದಯಾಘಾತ ದುರಂತ ಪ್ರಕರಣಗಳು ಮುಂದುವರಿದಿವೆ. ಚಿಕ್ಕಮಗಳೂರು ಹಾಗೂ ಮೈಸೂರಿನಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.
ಮುಖ ತೊಳೆಯುತ್ತಿದ್ದಾಗ ಹಾರ್ಟ್​ ಅಟ್ಯಾಕ್
ಬೆಳಗ್ಗೆ ಎದ್ದು ಮುಖ ತೊಳೆಯುತ್ತಿದ್ದಾಗ ಹೃದಯಾಘಾತ ಸಂಭವಿಸಿ ಯುವಕನೊಬ್ಬ ಜೀವ ಕಳೆದುಕೊಂಡಿದ್ದಾರೆ. ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನ ಕೂಡ್ಲುರು ಗ್ರಾಮದಲ್ಲಿ ದುರ್ಘಟನೆ ನಡೆದಿದೆ. ಪುರುಷೋತ್ತಮ್ (35) ಮೃತ ಯುವಕ. ಮಗನ ಕಳೆದುಕೊಂಡ ಕುಟುಂಬ ದುಃಖದಲ್ಲಿ ಮುಳುಗಿದೆ.
ಇದನ್ನೂ ಓದಿ: ಮತ್ತೆ ಸುವರ್ಣಾವಕಾಶ ಕೈಚೆಲ್ಲಿದ ಕನ್ನಡಿಗ.. ಅಭಿಮಾನಿಗಳಿಂದ ಭಾರೀ ಆಕ್ರೋಶ..!
ಮರ ಬಿದ್ದು ಅರ್ಧ ಗಂಟೆ ಲೇಟು.. ಜೀವವೇ ಹೋಯ್ತು..
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಭಾರೀಬೈಲು ಗ್ರಾಮದಲ್ಲಿ 29 ವರ್ಷದ ಯುವತಿ ಪ್ರಾಣ ಕಳೆದುಕೊಂಡಿದ್ದಾಳೆ. ಮೀನಾಕ್ಷಿ (29) ಮೃತ ದುರ್ದೈವಿ. ಎದೆ ಉರಿ ಎಂದು ನಿನ್ನೆ ಸಂಜೆ ಆಸ್ಪತ್ರೆಗೆ ದಾಖಲಾಗಿದ್ದಳು. ಆಸ್ಪತ್ರೆಗೆ ಬರುವಾಗ ಅರ್ಧ ಗಂಟೆ ಲೇಟ್ ಆಗಿತ್ತು. ಮಳೆಯಿಂದ ರಸ್ತೆಗೆ ಮರಬಿದ್ದು ಆಸ್ಪತ್ರೆಗೆ ಬರುವುದೂ ತಡವಾಗಿತ್ತು.
ಮೊನ್ನೆಯಿಂದಲೂ ಯುವತಿಯ ಆರೋಗ್ಯ ಸರಿ ಇರಲಿಲ್ಲ. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲೋ ಬಿಪಿ ಎಂದು ಹೇಳಿದ್ದರು. ನಿನ್ನೆ ಎದೆ ಉರಿ ಜಾಸ್ತಿಯಾದ ಕಾರಣ ಆಸ್ಪತ್ರೆಗೆ ದಾಖಲಾಗಿದ್ರು. ಆಸ್ಪತ್ರೆಗೆ ಬರುವಷ್ಟರಲ್ಲೇ ಹೃದಯಾಘಾತ ಸಂಭವಿಸಿದೆ.
ಇದನ್ನೂ ಓದಿ: ಸೈಲೆಂಟ್ ಕಿಲ್ಲರ್​..! ಹೃದಯಾಘಾತ ಆಗುವ 2 ಗಂಟೆ ಮೊದಲು ದೇಹದಲ್ಲಿ ಏನೆಲ್ಲ ಆಗುತ್ತದೆ..?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ