Advertisment

ರೇಣುಕಾಸ್ವಾಮಿ ಸತ್ತ ಮೇಲೂ ಕಾಡದ ಪಶ್ಚಾತಾಪ.. ಕೊಲೆ ಮಾಡಿದ ಬೆನ್ನಲ್ಲೇ ನಡೆದ ಎಣ್ಣೆ ಪಾರ್ಟಿಗಳು ಎಷ್ಟು ಗೊತ್ತಾ..!

author-image
Ganesh
Updated On
ಕರೆಂಟ್ ಶಾಕ್ ಕೊಟ್ಟಿದ್ದ ಎನ್ನಲಾದ ಆರೋಪಿಯೂ ಅರೆಸ್ಟ್.. ಮತ್ತೊಬ್ಬ ದರ್ಶನ್ ಆಪ್ತ ಲಾಕ್..!
Advertisment
  • ಕೊಲೆಯಾದ ನಂತರವೂ ಕರಗಲಿಲ್ಲ ಆರೋಪಿಗಳ ಹೃದಯ
  • ಜೂನ್ 8 ರಂದು ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಾಸ್ವಾಮಿ ಹತ್ಯೆ
  • ಶವ ವಿಲೇವಾರಿ ಮಾಡಿ ಬಂದು ಭರ್ಜರಿ ಎಣ್ಣೆ ಪಾರ್ಟಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಅಂಡ್ ಗ್ಯಾಂಗ್ ಬಂಧನಕ್ಕೆ ಒಳಗಾಗಿದೆ. ಪೊಲೀಸ್ ಕಸ್ಟಡಿಯಲ್ಲಿರುವ ಆರೋಪಿಗಳ ತೀವ್ರ ವಿಚಾರಣೆ ನಡೆಯುತ್ತಿದ್ದು, ತನಿಖೆ ವೇಳೆ ಒಂದೊಂದೇ ವಿಚಾರಗಳು ಬಯಲಿಗೆ ಬರುತ್ತಿವೆ.

Advertisment

ತನಿಖೆಯಲ್ಲಿ ಗೊತ್ತಾಗಿದ್ದು ಏನು..?
ಜೂನ್ 8 ರಂದು ಚಿತ್ರದುರ್ಗದಿಂದ ರೇಣುಕಾಸ್ವಾಮಿಯನ್ನು ನಟ ದರ್ಶನ್ ಗ್ಯಾಂಗ್ ಕಿಡ್ನ್ಯಾಪ್ ಮಾಡಿ ಬೆಂಗಳೂರಿನ ಪಟ್ಟಣಗೆರೆ ಶೆಡ್​​ಗೆ ಕರ್ಕೊಂಡು ಬಂದಿದೆ. ಜೂನ್ 8 ರಂದು ಶೆಡ್​​ನಲ್ಲಿ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ರೇಣುಕಾಸ್ವಾಮಿ ಮೃತಪಟ್ಟ ಬಳಿಕ ಮೃತದೇಹವನ್ನ ಅದೇ ದಿನ ರಾತ್ರಿ ಕೇಶವ್, ಕಾರ್ತಿಕ್, ನಿಖಿಲ್ ನಾಯಕ್ ಸುಮ್ಮನಹಳ್ಳಿಯಲ್ಲಿರುವ ಮೋರಿ ಬಳಿ ಬೀಸಾಡಿದ್ದರು.

ಇದನ್ನೂ ಓದಿ:ಜೈಲಿನಿಂದ ಹೊರ ಬರ್ತಿದ್ದಂತೆ ರೇಣುಕಾಸ್ವಾಮಿ ಹತ್ಯೆಯಲ್ಲಿ ಭಾಗಿ.. ಮತ್ತೆ ಕಂಬಿ ಹಿಂದೆ ಹೋದ ದರ್ಶನ್ ಆಪ್ತ..!

publive-image

ಡೀಲ್ ಹಣದಲ್ಲಿ ಭರ್ಜರಿ ಪಾರ್ಟಿ..!
ಬೀಸಾಡಿದ ನಂತರ ಜೂನ್ 9 ರಂದು ಆರ್​ಆರ್ ನಗರದಲ್ಲಿ‌ ಹೋಟಲ್‌ ರೂಮ್ ಬುಕ್ ಮಾಡಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಅಂದರೆ ರೇಣುಕಾಸ್ವಾಮಿ ಹತ್ಯೆಯಾದ ರಾತ್ರಿ ದರ್ಶನ್ ಗ್ಯಾಂಗ್​ ಎರಡು ಗುಂಪಾಗಿ ಬೇರ್ಪಟ್ಟಿದೆ. ಜೂನ್ 9 ರಂದು ದರ್ಶನ್, ವಿನಯ್, ದೀಪಕ್, ಪ್ರದೋಶ್ ನಾಗರಾಜ್, ಟೀಮ್​ನಿಂದ ಆರ್​ಆರ್ ನಗರದ ಸ್ಟೋನಿ ಬ್ರೂಕ್​ನಲ್ಲಿ ಎಣ್ಣೆ ಪಾರ್ಟಿ ಮಾಡಿದೆ. ಶವ ಬೀಸಾಡಿದ ನಂತರ ಕಾರ್ತಿಕ್ ಅಲಿಯಾಸ್ ಕಪ್ಪೆ, ಕೇಶವ್, ನಿಖಿಲ್ ನಾಯಕ್​ರಿಂದಲೂ ಆರ್​ಆರ್‌ನಗರದ ಟ್ರೋಬೋ 98 ಸ್ಟ್ರೀಟ್ ರೆಸ್ಟೋರೆಂಟ್​ನಲ್ಲಿ ಎಣ್ಣೆ ಪಾರ್ಟಿ ಮಾಡಿದ್ದಾರೆ ಎನ್ನಲಾಗಿದೆ. ದೀಪಕ್ ನೀಡಿದ ಹಣದಲ್ಲಿ ರೂಮ್ ಬುಕ್ ಮಾಡಿದ್ದರು ಎಂದು ತನಿಖೆಯಿಂದ ತಿಳಿದು ಬಂದಿದೆ.

Advertisment

ಇದನ್ನೂ ಓದಿ:ಕಮಿಷನರ್‌ ಕಂಡ್ರೆ ಸಪ್ಪೆ ಮುಖ.. ದರ್ಶನ್‌ ನಡೆ ನುಡಿಯಲ್ಲಿ ಭಾರೀ ಬದಲಾವಣೆ.. ಕೊನೆಗೂ ಬಂತಾ ಬುದ್ಧಿ..?

publive-image

ಜೂನ್ 10 ರಂದು ಹಣಕಾಸಿನ ವಿಚಾರಕ್ಕೆ ರೇಣುಕಾಸ್ವಾಮಿಯನ್ನ ಹತ್ಯೆ ಮಾಡಿರೋದಾಗಿ‌ ಆರೋಪಿಗಳು ಸರೆಂಡರ್ ಆಗಿದ್ದಾರೆ. ಕೇಶವ್, ಕಾರ್ತಿಕ್ ಜೊತೆಗೆ ನಿಖಿಲ್ ನಾಯಕ್ ಕಾಮಾಕ್ಷಿಪಾಳ್ಯ ಠಾಣೆಗೆ ಬಂದು ಶರಣಾಗಿದ್ದ.

ಇದನ್ನೂ ಓದಿ:CM ಕನಸು ನನಸಿಗೆ ಡಿಕೆಶಿ​​ ನಡೆ ತೀವ್ರ ಕುತೂಹಲ.. ಚೆನ್ನಪಟ್ಟಣ ವಿಚಾರದಲ್ಲಿ ಕಾಂಗ್ರೆಸ್ ಗೇಮ್ ಚೇಂಜ್..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment