/newsfirstlive-kannada/media/post_attachments/wp-content/uploads/2024/07/ANANT-AMBANI-2.jpg)
ಮುಕೇಶ್ ಅಂಬಾನಿ ಪುತ್ರನ ಮದುವೆ ಕಾರ್ಯಕ್ರಮಕ್ಕೆ ಎಂಟ್ರಿ ನೀಡಲು ಯತ್ನಿಸಿದ್ದ ಇಬ್ಬರು ಆರೋಪಿಗಳನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ ಕಾರ್ಯಕ್ರಮಕ್ಕೆ ಎಂಟ್ರಿಯಾಗಲು ಯತ್ನಿಸಿದ್ದ ಇಬ್ಬರನ್ನು ನಿನ್ನೆ ಬಂಧಿಸಿದ್ದಾರೆ.
ಇದನ್ನೂ ಓದಿ:ಸೊಸೆಯ ವಿದಾಯಿ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಶ್ರೀಮಂತ ಮುಕೇಶ್ ಅಂಬಾನಿ.. ವಿಡಿಯೋ
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ.. ವೆಂಕಟೇಶ್ ನರಸಿಯಾ (26), ಶಫಿ ಶೇಖ್ (28) ಬಂಧಿತ ಆರೋಪಿಗಳು. ವೆಂಕಟೇಶ್ ನರಸಿಯಾ ಯೂಟ್ಯೂಬರ್ ಆಗಿದ್ದ. ಶಫಿ ತಾನು ಬ್ಯಿಸಿನೆಸ್​ ಮ್ಯಾನ್ ಅಂದ್ಕೊಂಡು ಬಂದಿದ್ದ. ಇವರ ಬಳಿ ಯಾವುದೇ ಆಮಂತ್ರಣ ಪತ್ರಿಕೆ ಇರಲಿಲ್ಲ. ಗೇಟ್​ನಲ್ಲಿ ಅಧಿಕಾರಿಗಳು ವಿಚಾರಿಸಿದಾಗ ನನಗೆ ಆಮಂತ್ರಣ ಇದೆ ಎಂದಿದ್ದರು. ಆದರೆ ಅವರ ಬಳಿ ಆಹ್ವಾನ ಹೋಗಿರುವ ಯಾವುದೇ ಮಾಹಿತಿ, ಗುರುತು ಇರಲಿಲ್ಲ ಎಂದು ತಿಳಿಸಿದ್ದಾರೆ.
ಇವರು ಮುಂಬೈ ಹಾಗೂ ಆಂಧ್ರ ಪ್ರದೇಶದಿಂದ ಬಂದಿದ್ದರು. ಇಬ್ಬರ ವಿರುದ್ಧವೂ ಪ್ರತ್ಯೇಕ ಪ್ರಕರಣ ದಾಖಲಾಗಿದ್ದು, ವಿಚಾರಣೆ ನಡೆಸಲಾಗಿದೆ. ಕೊನೆಗೆ ಪೊಲೀಸರು ಇಬ್ಬರನ್ನೂ ಬಿಟ್ಟು ಕಳುಹಿಸಿದ್ದಾರೆ. ಮದುವೆ ಕಾರ್ಯಕ್ರಮಗಳು ನಡೆಯುತ್ತಿದ್ದ ಜಿಯೋ ವರ್ಲ್ಡ್​ ಕನ್ವೆನಷನ್ ಸೆಂಟರ್​​ಗೆ ಎಂಟ್ರಿ ನೀಡಲು ಪ್ರಯತ್ನಿಸಿದ್ದರು.
ಇದನ್ನೂ ಓದಿ:‘ತಪ್ಪಾಗಿದ್ದರೆ ಕ್ಷಮಿಸಿ ಬಿಡಿ..’ ಕೈಮುಗಿದ ನೀತಾ ಅಂಬಾನಿ.. ಮದುವೆಯಲ್ಲಿ ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ