newsfirstkannada.com

BREAKING: ಬೆಂಗಳೂರಲ್ಲಿ ಹರಿದ ನೆತ್ತರು.. ಅಂಗಡಿಗೆ ನುಗ್ಗಿ ಇಬ್ಬರು ವ್ಯಾಪಾರಿಗಳ ಬರ್ಬರ ಹತ್ಯೆ; ಕಾರಣವೇನು?

Share :

Published February 7, 2024 at 9:25pm

Update February 7, 2024 at 9:36pm

  ಇಬ್ಬರು ವ್ಯಾಪಾರಿಗಳನ್ನು ಚಾಕುವಿನಿಂದ ಇರಿದು ಕೊಲೆ

  ಭದ್ರ ಎಂಬ ಸಂಬಂಧಿಯಿಂದ ನಡೆಯಿತು ಬರ್ಬರ ಹತ್ಯೆ

  ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರ ಭೇಟಿ ಪರಿಶೀಲನೆ

ಬೆಂಗಳೂರು: ಇಬ್ಬರು ವ್ಯಾಪಾರಿಗಳನ್ನು ಬರ್ಬರವಾಗಿ ಹತ್ಯೆ ಮಾಡಿರೋ ಘಟನೆ ಕುಂಬಾರಪೇಟೆಯಲ್ಲಿ ನಡೆದಿದೆ. ಸುರೇಶ್(55) ಹಾಗೂ ಮಹೇಂದ್ರ (68) ಹತ್ಯೆಯಾದ ವ್ಯಕ್ತಿಗಳು. ಸುರೇಶ್ ಹಾಗೂ ಮಹೇಂದ್ರ ಇರೋ ಶಾಪ್​​ಗೆ ನುಗ್ಗಿ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಲಾಗಿದೆ.

ಕುಂಬಾರ ಪೇಟೆಯ ಹರಿ ಮಾರ್ಕೆಟಿಂಗ್​ನ ಒಳಗೆ ಈ ಕೊಲೆ ನಡೆದಿದೆ. ಆಸ್ತಿ ವಿಚಾರಕ್ಕೆ ಭದ್ರ ಎಂಬ ಸಂಬಂಧಿಯಿಂದ ಕೊಲೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಹಲಸೂರು ಗೇಟ್ ಪೊಲೀಸರು ಭೇಟಿ ನೀಡ ಪರಿಶೀಲನೆ ನಡೆಸಿದ್ದಾರೆ. ಇನ್ನು ಇಬ್ಬರನ್ನು ಕೊಲೆ ಮಾಡಿ ಆರೋಪಿ ಭದ್ರ ಪೊಲೀಸರಿಗೆ ಶರಣಾಗಿದ್ದಾನೆ.

ಇನ್ನು ಈ ಘಟನೆ ಬಗ್ಗೆ ಮಾತಾಡಿದ ಕೇಂದ್ರ ವಿಭಾಗದ ಡಿಸಿಪಿ ಶೇಖರ್,  ಜೋಡಿ ಕೊಲೆ ಮಾಡಿರೋ ಬಗ್ಗೆ ಮಾಹಿತಿ ಬಂದಿತ್ತು.
ಮಹೇಂದ್ರ ಮತ್ತು ಸುರೇಶ್ ಎಂಬುವವರನ್ನ ಕೊಲೆ ಮಾಡಲಾಗಿದೆ. ಆಸ್ತಿ ವಿಚಾರಕ್ಕೆ ಕೊಲೆ ಮಾಡಲಾಗಿದೆ ಅನ್ನೋದು ಪ್ರಾಥಮಿಕವಾಗಿ ತಿಳಿದುಬಂದಿದೆ. ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ. ಚಾಕುವಿನಿಂದ ಇರಿದು ಕೊಲೆ‌ ಮಾಡಲಾಗಿದೆ. ಕೊಲೆ ಮಾಡಿರೋ ಆರೋಪಿ ಮತ್ತು ಕೊಲೆಯಾದವರು ದೂರದ ಸಂಬಂಧಿಕರು. ಆಸ್ತಿ ವಿಚಾರವಾಗಿ ಜಗಳ ನಡೆದಿರೋದು ಗೊತ್ತಾಗಿದೆ. ಸದ್ಯ ಆರೋಪಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

BREAKING: ಬೆಂಗಳೂರಲ್ಲಿ ಹರಿದ ನೆತ್ತರು.. ಅಂಗಡಿಗೆ ನುಗ್ಗಿ ಇಬ್ಬರು ವ್ಯಾಪಾರಿಗಳ ಬರ್ಬರ ಹತ್ಯೆ; ಕಾರಣವೇನು?

https://newsfirstlive.com/wp-content/uploads/2024/02/death-2024-02-07T213557.902.jpg

Load More