ಬಿಸಿಲಿಗೆ ಕೃಪೆ ತೋರಿ ಕಣ್ಣು ಮುಚ್ಚಿಸಿದ ಮಳೆರಾಯ.. ಸಿಡಿಲು ಬಡಿದು ಒಂದೇ ಜಿಲ್ಲೆಯಲ್ಲಿ ಇಬ್ಬರು ಸಾವು

author-image
Veena Gangani
Updated On
ಬಿಸಿಲಿಗೆ ಕೃಪೆ ತೋರಿ ಕಣ್ಣು ಮುಚ್ಚಿಸಿದ ಮಳೆರಾಯ.. ಸಿಡಿಲು ಬಡಿದು ಒಂದೇ ಜಿಲ್ಲೆಯಲ್ಲಿ ಇಬ್ಬರು ಸಾವು
Advertisment
  • ರಣಭೀಕರ ಬಿಸಿಲಿಗೆ ಹೈರಾಣಾಗಿದ್ದ ಮಂದಿಗೆ ಮಳೆರಾಯನ ಸಿಂಚನ
  • ಮೃತ ಬಾಲಕನ ಕುಟುಂಬಕ್ಕೆ 10 ಲಕ್ಷ ಪರಿಹಾರ ನೀಡಿ ಎಂದು ಆಗ್ರಹ
  • ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ರೈತ ಸಾವು

ವಿಜಯಪುರ: ರಣಭೀಕರ ಬಿಸಿಲಿಗೆ ಹೈರಾಣಾಗಿದ್ದ ಮಂದಿಗೆ ಕೊನೆಗೂ ಮಳೆರಾಯ ಇಂದು ತಂಪೆರೆದಿದ್ದಾನೆ. ಆದರೆ ಕೃಪೆ ತೋರಿದ ವರುಣದೇವ ಇದೇ ಹೊತ್ತಲ್ಲಿ ಕಣ್ಣು ಮುಚ್ಚಿಸಿದ್ದಾನೆ. ವಿಜಯಪುರದಲ್ಲಿ ಸಿಡಿಲು ಬಡಿದು ಇಬ್ಬರು ದಾರುಣವಾಗಿ ಸಾವನ್ನಪ್ಪಿರೋ ಘಟನೆ ಇಂಡಿ ತಾಲೂಕಿನ ಮಾವಿನಹಳ್ಳಿ ರಸ್ತೆ ಜಲದಪ್ಪನ ಕೆರೆಯ ಜಮೀನಿನಲ್ಲಿ ನಡೆದಿದೆ. ಭೀರಪ್ಪ ನಿಂಗಪ್ಪ ಅವರಾದಿ (16) ಮೃತಪಟ್ಟ ಬಾಲಕ.

ಇದನ್ನೂ ಓದಿ:ಕಲಬುರಗಿಗೆ ಕೊನೆಗೂ ತಂಪೆರದ ವರುಣ; ಬಿಸಿಲೂರಲ್ಲಿ ಮಳೆಗಾಲದಂತೆ ಗುಡುಗಿದ ಮಳೆರಾಯ!

ಮೃತ ಬಾಲಕನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಜೆಡಿಎಸ್ ಮುಖಂಡ ಬಿ.ಡಿ ಪಾಟೀಲರು ಭೇಟಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದೇ ವೇಳೆ ಮೃತ ಬಾಲಕನ ಕುಟುಂಬಸ್ಥರಿಗೆ 10 ಲಕ್ಷ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿಜಯಪುರ ಜಿಲ್ಲೆಯಲ್ಲಿ ಸಿಡಿಲು ಬಡಿದು ಮತ್ತೋರ್ವ ರೈತ ಮೃತಪಟ್ಟಿರೋ ಘಟನೆ ಮಸಳಿ ಗ್ರಾಮದಲ್ಲಿ ನಡೆದಿದೆ. ಸೋಮಶೇಖರ್ ಪಟ್ಟಣಶೆಟ್ಟಿ (45) ಸಿಡಿಲಿಗೆ ಬಲಿಯಾದ ರೈತ. ಮೃತ ರೈತನು ಜಿಲ್ಲೆಯ ಇಂಡಿ ತಾಲ್ಲೂಕಿನ ಮಸಳಿ ಗ್ರಾಮದ ನಿವಾಸಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment